
The citizens of Ulenur village took the bold decision to ban alcohol, matka, and ispet.
ಉಳೇನೂರು ಗ್ರಾಮದಲ್ಲಿ ಮಧ್ಯಪಾನ, ಮಟ್ಕಾ ಮತ್ತು ಇಸ್ಪೇಟ್ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡ ಊರಿನ ನಾಗರಿಕರು.


ವರದಿ:ಗಂಗರಾಜ ಅಳ್ಳಳ್ಳಿ
ಕಾರಟಗಿ: ತಾಲ್ಲೂಕಿನ ಉಳೇನೂರು ಗ್ರಾಮದಲ್ಲಿ ಗ್ರಾಮದಲ್ಲಿ ಮಧ್ಯಪಾನ, ಮಟ್ಕಾ ಮತ್ತು ಇಸ್ಪೇಟ್ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡ ಊರಿನ ನಾಗರಿಕರು.
ಉಳೇನೂರಿನಲ್ಲಿ ಕಳೆದ ಭಾನುವಾರ ಗ್ರಾಮ ಸಭೆಯನ್ನು ನಡೆಸಿದ ಗ್ರಾಮಸ್ಥರು ಸಭೆಯಲ್ಲಿ ಮಧ್ಯಪಾನವನ್ನು ಯಾರು ಕೂಡ ಊರಲ್ಲಿ ಮಾರ ಕೂಡದು ಮತ್ತು ಮಟ್ಕಾ ಹಾಗೂ ಇಸ್ಪೇಟ್ ಗಳನ್ನು ಆಡಕೂಡದು. ಹಾಗೇ ಗ್ರಾಮಸ್ಥರು ಯಾರು ಸಹ ಇಂತಹ ದುಶ್ಚಟ ಗಳನ್ನು ಬೆಂಬಲಿಸುವ ಕಾರ್ಯವನ್ನು ಮಾಡಬಾರದು ಎಂದು ಉಳೇನೂರು ಗ್ರಾಮದ ಹಿರಿಯರು ಮತ್ತು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಟ್ಕಾ ಹಾಗೂ ಇಸ್ಪೇಟ್ ಆಟದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ ಇನ್ನೂ ಮಧ್ಯಪಾನ ದುಶ್ಚಟಕ್ಕೆ ಹಲವರು ದಾಸರಾಗುತ್ತಿದ್ದು ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ
ಸಿಲುಕಿವೆ. ಹೀಗಾಗಿ ಗ್ರಾಮದ ಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುಶ್ಚಟಕ್ಕೆ ಯಾರೊಬ್ಬರೂ ಸಹ ಬಲಿಯಾಗಬಾರದು ಗ್ರಾಮಸ್ಥರೆಲ್ಲರು ನೆಮ್ಮದಿಯ ಜೀವನ ನಡೆಸಬೇಕು. ಇದಕ್ಕಾಗಿ ನಾವೆಲ್ಲರೂ ಈ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಗತ್ ಸಿಂಗ್ ನೇತಾಜಿ ಮುಂತಾದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡ ಅನೇಕ ಯುವಕರು ಈ ಕಾರ್ಯಕ್ಕೆ ಮುಂದೆ ಬಂದು ಊರಿನ ಹಿರಿಯರ ಸಮ್ಮುಖದಲ್ಲಿ ಎಲ್ಲಾ ಊರಿನ ಜನರ ಸಭೆಯನ್ನು ಸೇರಿಸಿ ಈ ನಿರ್ಧಾರವನ್ನು ಕೈಗೊಂಡರು.
ಗಂಗರಾಜ ಅಳ್ಳಳ್ಳಿ
ಉಳೆನೂರು ಗ್ರಾಮಸ್ಥರು.


