
ಜ 05 ರಿಂದ ಆನೇಗುಂದಿಯ ಹಜರತ್ ಸೈಯ್ಯದ್ ಶರೀಫ್ ಅಹ್ಮದ್ ರ ಉರುಸ್.

Urs of Hazrat Syed Sharif Ahmed of Anegundi from Jan 05.

ಗಂಗಾವತಿ, ಡಿ- 31: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧಿ ಪಡೆದಿರುವಆನೇಗುಂದಿ ಗ್ರಾಮದ ಇದ್ಗಾ ಮೈದಾನ ದಲ್ಲಿರುವ ಹಜರತ್ ಸೈಯ್ಯದ್ ಶರೀಫ್ ಅಹ್ಮದ್ ಚಿಷ್ತಿ ಅಲ್ ಖಾದ್ರಿ ಇವರ ಉರುಸ್ 05, ಜನವರಿ ;2026,ರಿಂದ ಮೂರು ದಿನಗಳ ವರೆಗೆ ನಡೆಯಲಿವೆ ಎಂದು ದರ್ಗಾದ ಸಜ್ಜಾದೆ ನಷೀನ್ ಮೊಹಮ್ಮದ ಜಾಕೀರ್ ಹುಸೇನ್ ಖಾದ್ರಿ ತಿಳಿಸಿದ್ದಾರೆ.
ಜನವರಿ 5 ರ ಸಂಜೆ 5 ಘಂಟೆಗೆ ದರ್ಗಾದ ಸಜ್ಜಾದೆ ಮೊಹಮ್ಮದ್ ಜಾಕೀರ್ ಹುಸೇನ್ ಖಾದ್ರಿ.ಇವರ ಮನೆಯಿಂದ ಎಲ್ಲಾ ಗುರುಗಳ , ಪೀಠಾಧಿ ಪತಿಗಳ ಜೊತೆ ಗೂಡಿ ಗಂಧ ಮೆರವಣಿಗೆ ಹೊರಟು ಸಂಜೆ 6:30 ಕ್ಕೆ ದರ್ಗಾ ತಲುಪುವುದು.
06,ನೇ ಜನವರಿ ಉರುಸ್; 07, ರಂದು ಜಿಯಾರತ್, ಕಾರ್ಯಕ್ರಮ ಗಳು ವಿಜ್ರಂಭಣೆಯಿಂದ ನೆಡೆಯಲಿವೆ,
ಆದ್ದರಿಂದ ಸರ್ವ ಧರ್ಮದ ಭಕ್ತರು ಈ ಮೂರು ದಿನಗಳ ಕಾಲ ನಡೆಯುವ ಉರುಸ್ ಕಾರ್ಯಕ್ರಮ ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿ ಗೊಳಿಸಲು ತಿಳಿಸಿದ್ದಾರೆ.
ಈ ಸಂದರ್ಭ ದಲ್ಲಿ ಆನೇಗುಂದಿ ಜಾಮಿಯಾ ಮಸೀದಿಯ ಅಧ್ಯಕ್ಷ ಕಂಪ್ಲಿ ಮಹೆಬೂಬ್ ಹುಸೇನ್, ಸೈಯ್ಯದ್ ಕರೀಮ್ ಸಾಬ್, ಸೈಯ್ಯದ್ ಬಾಬ,
ಠಾಣೀಕಟ್ಟೆ ಬಾಬುಸಾಬ್, ವಿ.ಸೈಯ್ಯದ್ ಹುಸೇನ್ ಸಾಬ್, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾದ ಅಬ್ದುಲ್ ನಜೀರ್, ತಿಮ್ಮಪ್ಪ ಬಾಳೇಕಾಯಿ, ಗ್ರಾ.ಪಂ.ಸದಸ್ಯರಾದ ಹೆಚ್.ಎಂ.ಮಲ್ಲಯ್ಯ ಸ್ವಾಮಿ,
ವೆಂಕಟೇಶ ಬಾಬು, ಮುಖಂಡರಾದ ಎ.ಬಸವರಾಜ,
ಹೊನ್ನಪ್ಪ ನಾಯಕ, ಮತ್ತಿತರರು ಉಪಸ್ಥಿತರಿದ್ದರು.


