
ಸಿಟಿ ಮಾರ್ಕೆಟ್ ಪ್ರಾರಂಭ :ಪೌರಾಯುಕ್ತರಿಗೆ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸನ್ಮಾನ.

City Market inaugurated: Municipal Commissioner felicitated for his all-round development struggle.

ಗಂಗಾವತಿ :26-ನಗರದ ಗುಂಡಮ್ಮ ಕ್ಯಾಂಪ್ ನಲ್ಲಿರುವ ಸಿಟಿ ಮಾರ್ಕೆಟ್ ಪ್ರಾರಂಬಿಸುವಂತೆ ಒತ್ತಾಯಿಸಿ ನಮ್ಮ ಸಂಘಟನೆ ಹೋರಾಟ ಮಾಡುತ್ತ ಬಂದಿದೆ ಎಂದು ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ ಗೆ ಸನ್ಮಾನಿಸಿ ಮಾತನಾಡಿ, ಶಾಸಕರು, ಜಿಲ್ಲಾಧಿಕಾರಿಗಳು, ನಗರಸಭಾ ಅಧ್ಯಕ್ಷರು ಪೌರಾಯುಕ್ತರಿಗೂ ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಹೋರಾಟ ಮಾಡುತ್ತಾ ಬಂದಿದೆ.
ಹೋರಾಟದ ಫಲವಾಗಿ ಮಾರ್ಕೆಟ್ ಪ್ರಾರಂಭಿಸಲು ಕ್ರಮ ಕೈಗೊಂಡ ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿಗೆ ಸಂಘಟನೆಯಿಂದ ಅಭಿನಂದನೆಗಳನ್ನು ಸಲ್ಲಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರು, ಜಿಲ್ಲಾಧಿಕಾರಿಗಳ ಆದೇಶದಂತೆ ಹಾಗೂ ನಗರಸಭೆ ಮಾಜಿ ಅಧ್ಯಕ್ಷರು, ಆಡಳಿತ ಮಂಡಳಿ, ಮತ್ತು ಊರಿನ ಮುಖಂಡರು ವ್ಯಾಪಾರ ಸ್ಥರ ಸಹಕಾರ ದಿಂದ ಕ್ರಮಕೈಗೊಳ್ಳಲಾಗಿದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.. ಈ ಸಂದರ್ಭದಲ್ಲಿ, ಮಾಜಿ ಅಧ್ಯಕ್ಷರು, ಸದಸ್ಯರು, ಸಂಘದ ತಾಲೂಕ ಅಧ್ಯಕ್ಷ ಜಡಿಯಪ್ಪ ಹಂಚಿನಾಳ, ಸಿಬ್ಬಂದಿ ವರ್ಗ ಮತ್ತಿತರರು ಇದ್ದರು



