
Srinivasa Kalyana Mahotsava at the historic Pampa Sarovara on November 21

ನ.21ರಂದು ಐತಿಹಾಸಿಕ ಪಂಪಾಸರೋವರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸ

ರಾಜಮಾತೆ ಲಲಿತಾರಾಣಿ ಶ್ರೀರಂಗದೇವರಾಯಲು ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ; 108 ಕುಂಭಗಳೊಂದಿಗೆ ಪಂಪಾಸರೋವರ ಪ್ರದಕ್ಷಿಣೆ, ದೀಪೋತ್ಸ
ಗಂಗಾವತಿ: ಐತಿಹಾಸಿಕ ಪಂಪಾಸರೋವರದ ಶ್ರೀ ವಿಜಯಲಕ್ಷ್ಮೀ ದೇವಿಯ ಸಾನ್ನಿಧ್ಯದಲ್ಲಿ ನವೆಂಬರ್ 21ರಂದು ನಡೆಯಲಿರುವ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಅಂಗವಾಗಿ ರಾಜಮಾತೆ ಲಲಿತಾರಾಣಿ ರಾಜಾ ಶ್ರೀರಂಗದೇವರಾಯಲು ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಧಾರ್ಮಿಕ ಶ್ರದ್ಧಾಭಕ್ತಿ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸುವ ಕುರಿತು ಚರ್ಚಿಸಲಾಯಿತು. ಮಹೋತ್ಸವದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವುದು, ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.
ಹಂಪಿಯ ಶ್ರೀ ವಿದ್ಯಾರಣ್ಯಭಾರತಿ ಸ್ವಾಮೀಜಿ ಹಾಗೂ ಕಿಷ್ಕಿಂಧಾ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿಗಳ ದಿವ್ಯ ಆಶೀರ್ವಾದದೊಂದಿಗೆ, ಗುರುಗಳಾದ ಸತೀಶ್ ರಾಮಾನುಜನ್ ಅವರ ನೇತೃತ್ವದಲ್ಲಿ ಮಹೋತ್ಸವ ನೆರವೇರಲಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ
ನವೆಂಬರ್ 21ರಂದು ಬೆಳಿಗ್ಗೆ ಶ್ರೀ ವಿಜಯಲಕ್ಷ್ಮೀ ದೇವಿಗೆ ಅಭಿಷೇಕ, ಅರ್ಚನೆ ಹಾಗೂ ಮಂಗಳಾರತಿ ನೆರವೇರಲಿದೆ. ನಂತರ 108 ಕುಂಭಗಳೊಂದಿಗೆ ಪಂಪಾಸರೋವರ ಪ್ರದಕ್ಷಿಣೆ ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಾಗೂ ಸಂಜೆ 6 ಗಂಟೆಗೆ ದೀಪೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಪುಣ್ಯ ಧಾರ್ಮಿಕ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದವರು: ವಿಷ್ಣು ತೀರ್ಥ ಜೋಶಿ, ರಾಜಮಾತೆ ಲಲಿತಾರಾಣಿ ಶ್ರೀರಂಗದೇವರಾಯಲು, ಕೋರಿಪಲ್ಲಿ ರಾಮಲಕ್ಷ್ಮಿ, ಲಕ್ಷ್ಮಿ ಪಾರ್ವತಿ, ಅನ್ನಪೂರ್ಣ ಸಿಂಗ್, ನೆಕ್ಕಂಟಿ ಸುರೇಶ್, ಗೋಪಾಲ್ ಸ್ವಾಮಿ, ಓಂ ಶಿವ, ಸತ್ಯನಾರಾಯಣ, ಜನಾದ್ರಿ ಲಿಂಗಪ್ಪ, ಕೆ. ವೆಂಕಟೇಶ್, ರಾಮಕೃಷ್ಣ ನಾಯಕ, ಸುಬ್ಬರಾವ್, ವಿಶ್ವನಾಥ್ ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.



