ದೊಡ್ಡಬಳ್ಳಾಪುರದಲ್ಲಿ ‘ಗುಲಾಬಿ’ ಪ್ಯಾನ್ ಇಂಡಿಯಾ ಚಿತ್ರದ ಪೋಸ್ಟರ್ ಬಿಡುಗಡೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು


Poster of the pan-India film ‘Gulabi’ unveiled in Doddaballapura

ಜಾಹೀರಾತು

ದೊಡ್ಡಬಳ್ಳಾಪುರದಲ್ಲಿ ‘ಗುಲಾಬಿ’ ಪ್ಯಾನ್ ಇಂಡಿಯಾ ಚಿತ್ರದ ಪೋಸ್ಟರ್ ಬಿಡುಗಡೆ


2411ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಚಿತ್ರ ಪೋಸ್ಟರ್ ಅನಾವರಣ; ಬಡ ಮಕ್ಕಳಿಗೆ ಪುಸ್ತಕ, ಜಾಮೆಟ್ರಿ ಬಾಕ್ಸ್ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ


ದೊಡ್ಡಬಳ್ಳಾಪುರ: ಮಲ್ಲೇಶ್ ಮತ್ತು ಸೆಲ್ವಂ ತಂಡದ ವತಿಯಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಿತ್ಯ ಅನ್ನದಾಸೋಹ ಕಾರ್ಯಕ್ರಮದ 2411ನೇ ದಿನದ ವಿಶೇಷ ಸಮಾರಂಭದಲ್ಲಿ, ನಟ, ನಿರ್ದೇಶಕ ಹಾಗೂ ವಕೀಲ ಡಾ. ಆರ್. ವಿಜಯಕುಮಾರ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಲನಚಿತ್ರ ‘ಗುಲಾಬಿ’ ಚಿತ್ರದ ಪೋಸ್ಟರ್‌ನ್ನು ಸಾರ್ವಜನಿಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳು ಹಾಗೂ ಜಾಮೆಟ್ರಿ ಬಾಕ್ಸ್‌ಗಳನ್ನು ವಿತರಿಸಲಾಯಿತು. ಬಡ ಹೆಣ್ಣುಮಕ್ಕಳಿಗೆ ಸೀರೆಗಳನ್ನು ವಿತರಿಸುವುದರ ಜೊತೆಗೆ ಅನ್ನದಾಸೋಹ ಕಾರ್ಯಕ್ರಮವೂ ನಡೆಯಿತು.
ಈ ಸಂದರ್ಭದಲ್ಲಿ ನಟಿ ಅನಿತಾಶ್ರೀ, ಡಾ. ಅಂಜನಪ್ಪ, ಕೆಟಿವಿಎ ಅಧ್ಯಕ್ಷರು, ಚಲನಚಿತ್ರ ನಟ ಗಣೇಶ್‌ರಾವ್ ಕೇಸರಕರ್, ನಾಗರಾಜ್, ವಾಸುದೇವ ಶೆಟ್ಟಿ, ವಕೀಲ ರವಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ನಟ ಡಾ. ಆರ್. ವಿಜಯಕುಮಾರ್, ಕಳೆದ ವಾರ ಚೆನ್ನೈನ ಟಿ. ನಗರದಲ್ಲಿ ಚಿತ್ರದ ತಮಿಳು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿಯೇ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರು ಹಾಡು, ಆರು ಸಾಹಸ ದೃಶ್ಯಗಳ ವಿಶೇಷತೆ
‘ಗುಲಾಬಿ’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು, ತಾತಗುಣಿ, ಭೂಮಿಕಾ ಸ್ಟುಡಿಯೋ ಹಾಗೂ ಕನಕಪುರ ಸುತ್ತಮುತ್ತ ನಡೆಸಲಾಗಿದೆ. ಚಿತ್ರದಲ್ಲಿ ಆರು ಹಾಡುಗಳು ಮತ್ತು ಆರು ಸಾಹಸ ದೃಶ್ಯಗಳು ವಿಶೇಷ ಆಕರ್ಷಣೆಯಾಗಿವೆ.
ಚಿತ್ರದಲ್ಲಿ ಡಾ. ವಿಜಯಕುಮಾರ್, ರಾಧಿಕಾ, ಚಂದನಾ, ಅನಿತಾಶ್ರೀ, ನಾಗೇಂದ್ರ ಅರಸ್, ಲಯಕೋಕಿಲ, ಉಗ್ರಂ ರವಿ, ಬಿಗ್‌ಬಾಸ್ ಮಲ್ಲಮ್ಮ, ಸುರೇಂದ್ರ ಕುಮಾರ್, ಅಜಿತ್ ಜೈನ್, ಲೋಕೇಶ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ವೀರೇಶ್ ಛಾಯಾಗ್ರಹಣ, ಸಂತೋಷ್ ಜೋಶ್ವ ಸಂಗೀತ, ನಾಗೇಶ್ ಪ್ರಸಾಧನ, ಬಾಲಕೃಷ್ಣ ನೃತ್ಯ ಸಂಯೋಜನೆ, ಗುಲಾಬಿ ಚಿನ್ನಯ್ಯ ಸಾಹಸ ನಿರ್ದೇಶನ ಹಾಗೂ ನಿಸಿತ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಡಾ. ಪ್ರಭು ಗಂಜಿಹಾಳ ಅವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಸುದೇವ ಶೆಟ್ಟಿ ಎಚ್.ಎಸ್. ಸಹಾಯಕ ನಿರ್ದೇಶಕರಾಗಿ, ಎಸ್. ಮೇಘರಾಜ ಗೌಡ ಸಹನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಿರ್ಮಾಣ ಉಸ್ತುವಾರಿ ಹಾಗೂ ವಸ್ತ್ರ ವಿನ್ಯಾಸವನ್ನು ಅನಿತಾಶ್ರೀ ವಹಿಸಿಕೊಂಡಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಡಾ. ಆರ್. ವಿಜಯಕುಮಾರ್ ನಿರ್ವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ‘ಗುಲಾಬಿ’ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.


– ಡಾ. ಪ್ರಭು ಗಂಜಿಹಾಳ

Total Views: 0
ಜಾಹೀರಾತು
Share This Article
Leave a Comment