
Let us celebrate Valmiki Jayanti in a meaningful way in Hanur taluk: MLA M.R. Manjunath.
ಹನೂರು ತಾಲ್ಲೊಕಿನಲ್ಲಿ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸೋಣ :ಶಾಸಕಎಂ.ಆರ್.ಮಂಜುನಾಥ್.
ವರದಿ:ಬಂಗಾರಪ್ಪ .ಸಿ.
ಕಲ್ಯಾಣ ಸಿರಿ:
ಹನೂರು: ನಮ್ಮ ದೇಶವು ಋಷಿಮುನಿಗಳ ಬೀಡಾಗಿದೆ ಅಂತಹವರ ಜಯಂತಿಯನ್ನು ನಾವೇಲ್ಲರು ಆಚರಣೆ ಮಾಡಲು ಮತ್ತು ಕ್ಷೇತ್ರದ ಎಲ್ಲಾ ನಾಯಕ ಸಮಾಜದವರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ವಿಷಯವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು
ಕಳೆದ ವರ್ಷ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೊಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈಗಾಗಲೇ ನಿವೇಶನ ಗುರುತಿಸಲಾಗಿದ್ದು, ಅತಿ ಶೀಘ್ರದಲ್ಲೇ ಸಮಾಜಕ್ಕೆ ಹಸ್ತಾಂತರ ಮಾಡಲಾಗುವುದು ,
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಸಮಾನತೆಯಿಂದ ಕಾಣಲಾಗುತ್ತಿದೆ. ಪ್ರತಿಯೊಂದು ಸಮುದಾಯಕ್ಕೂ ತಾಲ್ಲೂಕು ಕೇಂದ್ರದಲ್ಲಿ ನಿವೇಶನ ನೀಡಿ ಸಮುದಾಯ ಭವನ ನಿರ್ಮಾಣ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನಾಯಕ ಸಮುದಾಯದ ತಾಲ್ಲೂಕು ಅಧ್ಯಕ್ಷ ಪುಟ್ಟವೀರ ನಾಯ್ಕ ಮಾತನಾಡಿ, ಈ ಬಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಬರಗಾಲಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಸಮುದಾಯದವರೆಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸೋಣ. ಸರಳವಾಗಿ ಆಚರಣೆ ಮಾಡಿದರೂ ನಮ್ಮ ಸಮುದಾಯದವರು ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಒಗ್ಗಟ್ಟಿನಿಂದ ಜಯಂತಿ ಆಚರಿಸೋಣ ಎಂದರು.
ತಹಶೀಲ್ದಾರ್ ಚೈತ್ರ ಕೆ.ಎನ್ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬರುವ ಅನುದಾನ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಸೇರಿ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ಆಚರಣೆ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಚೈತ್ರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರತಿಭಾ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಚಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಉದ್ದನೂರು ಸಿದ್ದರಾಜು,ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸುಬ್ಬುರಾಯ್, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷರಾದ ಪುಟ್ಟ ವೀರನಾಯಕ, ಗೌರವಾಧ್ಯಕ್ಷರಾದ ಉದ್ದನೂರು ಶಿವಣ್ಣ,ಕಾರ್ಯದರ್ಶಿ ಚಂಗವಾಡಿ ರಾಚಪ್ಪ,
ಸಮುದಾಯದ ಉಪಾಧ್ಯಕ್ಷರಾದ ತಿರುಪತಿ, ಸದಸ್ಯರಾದ ವೆವೆಂಕಟಮಾದ ನಾಯಕ, ಚಿನ್ನಸ್ವಾಮಿ ಮಲ್ಲೇಶ ಮಲ್ಲೇಶ್,ಕೆಂಚಪ್ಪ,ಗೋಪಾಲ್ ನಾಯಕ,ನೀರಾವರಿ ಇಲಾಖೆಯ ಎಇಇ ಕರುಣಾಮಯಿ, ಸಿಡಿಪಿಓ ಅಂಬಿಕಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.




