ಸಣಾಪುರದಲ್ಲಿ ದಲಿತ ಕುಟುಂಬಕ್ಕೆ ಕಿರುಕುಳ ಆರೋಪ 60 ಮನೆಗಳಿರುವ ಪ್ರದೇಶದಲ್ಲಿ ನಮ್ಮ ಕುಟುಂಬವನ್ನೇ ಗುರಿಯಾಗಿಸಿ ತೆರವು ಒತ್ತಡ: ಕುಟುಂಬದ ಆರೋಪ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು
Allegation of harassment against a Dalit family in Sanapura
Family alleges pressure for eviction, claiming they alone are being targeted in an area with 60 houses.

ಸಣಾಪುರದಲ್ಲಿ ದಲಿತ ಕುಟುಂಬಕ್ಕೆ ಕಿರುಕುಳ ಆರೋಪ
60 ಮನೆಗಳಿರುವ ಪ್ರದೇಶದಲ್ಲಿ ನಮ್ಮ ಕುಟುಂಬವನ್ನೇ ಗುರಿಯಾಗಿಸಿ ತೆರವು ಒತ್ತಡ: ಕುಟುಂಬದ ಆರೋಪ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಸಣಾಪುರ: ಗ್ರಾಮದ ವಾರ್ಡ್‌ ನಂ.01ರಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ದಲಿತ ಕುಟುಂಬವೊಂದಕ್ಕೆ ಮನೆ ತೆರವುಗೊಳಿಸುವಂತೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಈ ಕುರಿತು ಲಕ್ಷ್ಮಿ, ರಾಮು, ಶಿವಪ್ಪ ಹಾಗೂ ಸುವರ್ಣ ಅವರ ಕುಟುಂಬದವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡರು. ಬೆಟ್ಟಪ್ಪ ಎಂಬುವವರು ಕಿರುಕುಳ ನೀಡಿ, ಒಡೆದು ಬಡಿದು ಹಲ್ಲೆ ನಡೆಸಿದ್ದಾರೆ ಹಾಗೂ ಮನೆ ತೆರವುಗೊಳಿಸುವಂತೆ ನಿರಂತರ ಒತ್ತಡ ಹೇರುತ್ತಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದರು.
“ನಾವು ವಾಸವಾಗಿರುವ ಪ್ರದೇಶದಲ್ಲಿ ಸುಮಾರು **60 ಮನೆಗಳಿವೆ. ಆದರೆ ಇತರ ಯಾವುದೇ ಕುಟುಂಬಗಳಿಗೆ ಮನೆ ತೆರವುಗೊಳಿಸುವಂತೆ ತೊಂದರೆ ನೀಡುತ್ತಿಲ್ಲ. ಕೇವಲ ನಮ್ಮ ಕುಟುಂಬವನ್ನೇ ಗುರಿಯಾಗಿಸಿ ತೆರವುಗೊಳಿಸುವಂತೆ ಒತ್ತಡ ಹೇರುತ್ತಿರುವುದು ಏಕೆ?” ಎಂದು ಕುಟುಂಬದ ಸದಸ್ಯರು ಪ್ರಶ್ನಿಸಿದರು.
ಎಲ್ಲಾ ಮನೆಗಳನ್ನು ತೆರವುಗೊಳಿಸಬೇಕೆಂಬ ನಿಯಮವಿದ್ದರೆ, 60 ಮನೆಗಳಿಗೂ ಸಮಾನವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಅಲ್ಲಿರುವ ಎಲ್ಲ ಕುಟುಂಬಗಳ ಮನೆ ಹಾಗೂ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಕುಟುಂಬಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮನೆ ಹಾಗೂ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ತಿಳಿದುಕೊಳ್ಳಬೇಕು. ಕಿರುಕುಳ ಮತ್ತು ಹಲ್ಲೆಯ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

Total Views: 0
Share This Article