ಗಂಗಾವತಿಯ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ ನೂರು ಹಾಸಿಗೆ ಆಸ್ಪತ್ರೆಯ ಕುಂದುಕೊರತೆಗಳ ಕುರಿತು ಸಭೆ

H.Mallikarjun
H.Mallikarjun - Kalyanasiri
1 Min Read
Meeting regarding the shortcomings of the Mother and Child Hospital and the 100-bed hospital in Gangavathi.




ಗಂಗಾವತಿಯ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ ನೂರು ಹಾಸಿಗೆ ಆಸ್ಪತ್ರೆಯ ಕುಂದುಕೊರತೆಗಳ ಕುರಿತು ಸಭೆ

ಜಾಹೀರಾತು


ಗಂಗಾವತಿ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಕುಂದುಕೊರತೆಗಳು ಮತ್ತು ಆಸ್ಪತ್ರೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮಹತ್ವದ ಸಭೆಯನ್ನು ಇಂದು ನಡೆಸಲಾಯಿತು.
ಶಾಸಕರ ಆದೇಶದ ಮೇರೆಗೆ ನಡೆದ ಸಭೆಯಲ್ಲಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ, ವೈದ್ಯಕೀಯ ಸೇವೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆಯಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಸ್ಪತ್ರೆ ಸಂಬಂಧಿತ ಸುದ್ದಿಗಳ ಬಗ್ಗೆಯೂ ಚರ್ಚೆ ನಡೆಸಿ, ವಾಸ್ತವಾಂಶಗಳನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಆರೋಗ್ಯ ಇಲಾಖೆಯ ನಾಮನಿರ್ದೇಶಿತ ಸದಸ್ಯರಾದ ಶ್ರೀ ಗಂಗಾಧರ ಮೇಟಿ ಅವರು ಆಸ್ಪತ್ರೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರ ಸಮಸ್ಯೆಗಳು ಹಾಗೂ ಆಸ್ಪತ್ರೆಗಳಲ್ಲಿನ ಕೊರತೆಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರಾದ ಶ್ರೀ ಹನುಮಂತರೆಡ್ಡಿ, ಶ್ರೀ ಗಂಗಪ್ಪ ನಾಗೇನಹಳ್ಳಿ, ಗುಂಡಿ ರಾಘವೇಂದ್ರ ಹಾಗೂ ಶ್ರೀಮತಿ ಯೋಗಲಕ್ಷ್ಮಿ ಸೇರಿದಂತೆ ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದು, ಆಸ್ಪತ್ರೆಗಳ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಕುರಿತು ಚರ್ಚಿಸಿದರು.

Total Views: 0
ಜಾಹೀರಾತು
Share This Article