ವೃದ್ಧ ರೈತನಿಗೆ ಅವಮಾನಿಸಿದ ತಹಶಿಲ್ದಾರ್ ವಿರುದ್ಧ ಕರವೇ ಆಕ್ರೋಶ,

H.Mallikarjun
H.Mallikarjun - Kalyanasiri
1 Min Read
KaRaVe outraged against the Tahsildar who humiliated an elderly farmer.




ವೃದ್ಧ ರೈತನಿಗೆ ಅವಮಾನಿಸಿದ ತಹಶಿಲ್ದಾರ್ ವಿರುದ್ಧ ಕರವೇ ಆಕ್ರೋಶ,

ಜಾಹೀರಾತು

ಕೆ.ಆರ್.ಪೇಟೆ: ತಾಲ್ಲೂಕಿನ ವೃದ್ಧ ರೈತ ಅಣ್ಣಯ್ಯ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಮೇಲೆ ಕೆ.ಆರ್.ಪೇಟೆ ತಹಶಿಲ್ದಾರ್ ಶ್ರೇಯಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ನೇತೃತ್ವದಲ್ಲಿ ಕೆ.ಆರ್.ಪೇಟೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ತಹಶಿಲ್ದಾರ್ ಶ್ರೇಯಸ್ ಅವರು ಸರ್ಕಾರಿ ಅಧಿಕಾರಿ ಎಂಬ ಒಂದೇ ಕಾರಣಕ್ಕೆ ವೃದ್ಧ ರೈತರನ್ನು ಅವಮಾನಿಸಿದ್ದಾರೆ. ರೈತರ ಸಮಸ್ಯೆ ಆಲಿಸುವುದು ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಸಂಪೂರ್ಣವಾಗಿ ಖಂಡನೀಯ. ಇವರು ಜನಸೇವಕರಲ್ಲ, ದೊರೆನಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು ರೈತರೇ ಈ ದೇಶದ ಬೆನ್ನೆಲುಬು ಅವರನ್ನು ಅವಮಾನಿಸುವ ಯಾವುದೇ ಅಧಿಕಾರಿ ಕಚೇರಿಯಲ್ಲಿ ಇರಲು ಅರ್ಹರಲ್ಲ ಜಿಲ್ಲಾಧಿಕಾರಿಗಳು ಕೂಡಲೇ ತಹಶಿಲ್ದಾರ್ ಶ್ರೇಯಸ್ ಅವರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಮುಂದೆ ಬೃಹತ್ ಧರಣಿ ಮತ್ತು ರಸ್ತೆ ತಡೆ ಹೋರಾಟ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯ ಬಳಿಕ ಜಮಾಯಿಸಿದ ಕರವೇ ಕಾರ್ಯಕರ್ತರು ಮತ್ತು ರೈತರು, ತಹಶಿಲ್ದಾರ್ ಶ್ರೇಯಸ್ ಅವರು ಕಚೇರಿಗೆ ಬಂದಿದ್ದ ರೈತ ಅಣ್ಣಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿ, ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದ ವರ್ತಿಸಿದ್ದಾರೆ ಎಂದು ಘೋಷಣೆ ಕೂಗಿ ಎಚ್ಚರಿಕೆ ನೀಡಿದರು.ತಹಶಿಲ್ದಾರ್ ಶ್ರೇಯಸ್ ಗೋ ಬ್ಯಾಕ್ ರೈತ ವಿರೋಧಿ ಅಧಿಕಾರಿ ನಾಚಿಕೆ ಆಗಬೇಕು ಎಂದು ಘೋಷಣೆಗಳನ್ನು ಕರವೇ ಕಾರ್ಯಕರ್ತರು ಹೊರಹಾಕಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಕರವೇ ಅಧ್ಯಕ್ಷ ಶ್ರೀನಿವಾಸ್, ಅವಮಾನಕ್ಕೆ ಒಳಗಾದ ರೈತ ಅಣ್ಣಯ್ಯ, ನಗರ ಘಟಕ ಅಧ್ಯಕ್ಷ ಮದನ್,ಬೋರೇಗೌಡ, ಸ್ವಾಮಿ, ಶಿವಪ್ರಸಾದ್ ಸ್ವಾಮಿ, ಕಳಸಯ್ಯ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.

Total Views: 1
Share This Article