ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read

ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ

Student stipend program for female students

 


ಧಾರವಾಡ: ರ‍್ಯಾಪಿಡ್ ಮತ್ತು ವಿದ್ಯಾಪೋಷಕ ಇವರ ಸಹಭಾಗಿತ್ವದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮ ಧಾರವಾಡದ ಕೆ.ಎಚ್. ಕಬ್ಬೂರ ಇಸ್ಟಿಟ್ಯೂಟ್ ಆಫ್ ಇಂಜನೀಯರಿಂಗ್, ಜೆ.ಎಸ್.ಎಸ್ ಕಾಲೇಜ ಕ್ಯಾಂಪಸ್‌ನಲ್ಲಿರುವ ಪ್ರೇರಣಾ ಹಾಲ್‌ದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಐಐಟಿ ಪ್ರಾಧ್ಯಾಪಕರು ಮತ್ತು ಮೈಂಡ್ ವೇವ್ ಎಜ್ಯುಕೇಶನ್ ಹಬ್‌ನ ಪ್ರಮುಖರಾದ ಪ್ರೊ. ಎಸ್.ಎಂ. ಶಿವಪ್ರಸಾದ ಹಾಗೂ ವಿದ್ಯಾಪೋಷಕ ಸಂಸ್ಥೆಯ ಸಿ.ಇ.ಒ ಆದ ಡಾ. ಶರತ್ ಐರಣಿ ಆಗಮಿಸಿದ್ದರು. ರ‍್ಯಾಪಿಡ್ ಸಂಸ್ಥೆಯ ಶ್ರೀಮತಿ ವಾಣಿಶ್ರೀ ಪುರೋಹಿತ ಅವರು ವಿದ್ಯಾರ್ಥಿನಿಯರಿಗೆ ಧನಸಹಾಯದ ಮಹತ್ವವನ್ನು ತಿಳಿಸಿದರು.
ಸಂಕಷ್ಟದಲ್ಲಿರುವ ಕುಟುಂಬದ ೮೧ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗಲು ಈ ಕಾರ್ಯಕ್ರಮದಲ್ಲಿ ಅಂದಾಜು ೭.೭೭ ಲಕ್ಷ ರೂಪಾಯಿಗಳ ಧನಸಹಾಯವನ್ನು ನೀಡಲಾಯಿತು. ಇದೆ ಸಂದರ್ಭದಲ್ಲಿ ಆರ್ಥಿಕ ಸಹಾಯದ ಜೊತೆಗೆ ವಿದ್ಯಾರ್ಥಿನಿಯರಲ್ಲಿ ಸ್ಪೂರ್ತಿ ತುಂಬಲು ಪ್ರಸಿದ್ಧ ಪ್ರೇರಕ ಭಾಷಣಕಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ ಗುಡಿ ಇವರಿಂದ “ ಸ್ಟಾಪ್ ಇಂಪ್ರೆಸ್ಸಿಂಗ್ ಸ್ಟಾರ್ಟ್ ಇನ್ಸ್ಪೈರಿಂಗ್ ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿಯರು ಮತ್ತು ವಿದ್ಯಾಪೋಷಕ ಸಂಸ್ಥೆಯ ಶ್ರೀಮತಿ ರತ್ನಾ ಹಿಪ್ಪರಗಿ ಸಿಬ್ಬಂದಿ ವರ್ಗ, ರ‍್ಯಾಪಿಡ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು

Total Views: 0
Share This Article