-
The participation of the local community, conscientious citizens, and the youth is crucial to saving and strengthening government schools. – Dhanraj E.
ಗಂಗಾವತಿ,23,ಜುಲೈ: ಕಳೆದ ವರ್ಷಕೇವಲ 4 ವಿದ್ಯಾರ್ಥಿಗಳಿದ್ದ ನಗರದ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಯ ಪ್ರಾಥಮಿಕ ಶಾಲೆಯನ್ನು ಯುವಕರ ತಂಡ,ಮತ್ತು ಶಿಕ್ಷಕರು ಸೇರಿ ದಾಖಲಾತಿ ಆಂದೋಲನದ ಮೂಲಕ ಮುಚ್ಚದಂತೆ ಉಳಿಸಿದ್ದಾರೆ .ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಸಮಿತಿಯ ಕಾರ್ಯ ಅದ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಧನರಾಜ್ ಈ ಎಂದರು.

ಈ.ಕಳೆದ ವರ್ಷದ ಕೇವಲ 4 ಮಕ್ಕಳ ದಾಖಲಾತಿ ಯೊಂದಿಗೆ ಮುಚ್ಚಲ್ಪಡುವ ಹಂತದಲ್ಲಿದ್ದ ಗಂಗಾವತಿ ನಗರದ ಗುಂಡಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ತಗೆದು ಮುನ್ನಡೆಸಲು ಪ್ರೇರಣೆಯನ್ನು ದಾಖಲಾತಿ ಆಂದೋಲನದ ಮೂಲಕ ಜೀಪ್ ನೀಡಿದ ಇಲ್ಲಿನ ಯುವಕರ ತಂಡದ ಶ್ರೇಯಸ್ಸನ್ನು ಖಂಡಿತ ಶ್ಲಾಘಿಸಬೇಕು ಪ್ರತಿಯೊಬ್ಬರು ಗಮನಿಸ ಬೇಕಾದ ವಿಷಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಧನರಾಜ್. ಈ ತಗೆದರು.
ಈ ಆಂದೋಲನ ಕಾರ್ಯಕ್ಕೆ ಬೆಂಬಲ ನೀಡಲು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಲು ಗುಂಡಮ್ಮ ಕ್ಯಾಂಪ್
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಹಿರಿಯರಾದ ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಅವರ ನೇತೃತ್ವದ ಯುವಕರ ತಂಡದ ಯೊಂದಿಗೆ ಚರ್ಚೆ ನಡೆಸಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು “ಪ್ರತಿ ವರ್ಷ ಶೇ 19 ರಷ್ಟು ದಾಖಲಾತಿ ಕುಸಿತ ದೊಂದಿಗೆ ರಾಜ್ಯದಲ್ಲಿಯೇ ಕಳೆದ ಒಂದು ದಶಕದಿಂದ 3617 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಈಗ ಮತ್ತೆ 676 ಸರ್ಕಾರಿ ಶಾಲೆಗಳು ವಿಲೀನದ ಹೆಸರಿನಲ್ಲಿ ಇತಿಹಾಸ ಸೇರುತ್ತಿದ್ದು ವಿಷಾದನೀಯ. ಅದನ್ನು ತಡೆಗಟ್ಟಲು ಆ ಸುತ್ತಲಿನ ಪ್ರಜ್ಞಾವಂತರು, ಯುವಕರು ಹಾಗೂ ಸಮುದಾಯದ ಸಹಭಾಗಿತ್ವ ಪ್ರಯತ್ನದಿಂದ ಮಾತ್ರ ಸಾಧ್ಯವೇ ಹೊರತು ಬರೀ ಚರ್ಚೆ ಯಿಂದ ವ್ಯವಸ್ಥೆಯನ್ನು ದೋಷಿಸುವ ಪರಿಪಾಠದಿಂದಲ್ಲ.
ಕಲ್ಯಾಣ ಕರ್ನಾಟಕದಂತಹ ವಿಶಿಷ್ಟ ಸಾಮಾಜಿಕ ರಚನೆಯಿರುವ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಅಸ್ತಿತ್ವ ಮತ್ತು ಅಭಿವೃದ್ಧಿ ತುಂಬಾ ಅಗತ್ಯವಾಗಿದೆ. ಕೇವಲ ಭೌತಿಕ ಬದಲಾವಣೆಗಿಂತ, ವ್ಯಕ್ತಿತ್ವ ಮತ್ತು ಗುಣಮಟ್ಟದ ಶಿಕ್ಷಣ ಮುಖ್ಯ. .ಪಠ್ಯದ ವಿವರವಾದ ಅರ್ಥ:ಶಿಕ್ಷಣದ ಉದ್ದೇಶ: ಕೇವಲ ಕಟ್ಟಡಗಳನ್ನು ಕಟ್ಟುವುದು ಅಥವಾ ಭೌತಿಕ ಬದಲಾವಣೆ ಮಾಡುವುದು ಪರಿಹಾರವಲ್ಲ. ಬದಲಿಗೆ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು ಮುಖ್ಯವಾಗಿದೆ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಧನರಾಜ್ ಈ. ಹೇಳಿದರು.
ಪುನಶ್ಚೇತನ ಪ್ರಕ್ರಿಯೆ: ಯುವಕರ ತಂಡ ಮತ್ತು ಶಾಲಾ ಶಿಕ್ಷಕರು ಶ್ರಮಿಸಿ, ದಾಖಲಾತಿ ಆಂದೋಲನದ ಮೂಲಕ ಶಾಲೆಯನ್ನು ಉಳಿಸಲು ಮತ್ತು ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವದು ಶ್ಲಾಘನೀಯ
ಸರ್ಕಾರಿ ಶಾಲೆಗಳ ಪ್ರಾಮುಖ್ಯತೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ಶಾಲೆಗಳ ಅಸ್ತಿತ್ವ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಇಲಾಖೆಯ ತಂಡಕ್ಕೆ ಬೋಧನೆ ಮತ್ತು ಬೋಧನೇತರ ಚಟುವಟಿಕೆಗಳ ಉನ್ನತೀಕರಣಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಸನಿಕ್, ಉಲ್ಹಾಸ್, ಗಣೇಶ್, ಮಹೇಶ್ ನಾಯಕ್, ಸಾಯಿಶಂಕರ್ ಸೇರಿದಂತೆ ಪ್ರಮುಖರು ಮತ್ತು ಮುಖ್ಯ ಗುರುಗಳಾದ ಶ್ರೀನಿವಾ ಶಿಕ್ಷಕರಾದ ಪ್ರಕಾಶ್ ಅವರು ಉಪಸ್ಥಿತರಿದ್ದರು.



