
Support for Home Minister Priyanka Kharge who is demanding RSS registration: Bharadwaj

ಆರ್.ಎಸ್.ಎಸ್ನೊಂದಣಿಗಾಗಿ ಒತ್ತಾಯಿಸುತ್ತಿರುವ
ಗೃಹ ಸಚಿವ ಪ್ರಿಯಾಂಕ್ಖರ್ಗೆಗೆ ಬೆಂಬಲ: ಭಾರಧ್ವಾಜ್

ಗಂಗಾವತಿ: ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಪ್ರಿಯಾಂಕ್ಖರ್ಗೆಯವರು ಆರ್.ಎಸ್.ಎಸ್ಸಂಘಟನೆ ಬಗ್ಗೆ ಪ್ರಶ್ನೆ ಮಾಡಿ, ನೋಂದಣಿ ಮಾಡಿಸಿಕೊಳ್ಳಿ ಎಂದು ಕಟುವಾಗಿ ಸೂಚಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಕ್ರಾಂತಿ ಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ಹೇಳಿದ್ದಾರೆ.
ನಮ್ಮ ದೇಶದಲ್ಲಿ ಯಾವುದೇ ಸಂಘಟನೆ ಇರಲಿ, ಸಂವಿಧಾನಬದ್ಧವಾಗಿ ನೋಂದಾಯಿಸಿಕೊಳ್ಳಬೇಕು, ಆದರೆ ಆರ್.ಎಸ್.ಎಸ್ಸಂಘಟನೆ ಸಂವಿಧಾನಬದ್ಧವಾಗಿ ಯಾವುದೇ ನೋಂದಣಿ ಮಾಡಿಸಿಕೊಳ್ಳದೇ ವಿದೇಶಗಳಿಂದ ಸಾವಿರಾರು ಕೋಟಿ ಅನುದಾನ ಪಡೆದುಕೊಂಡು, ಯಾವುದೇ ರೀತಿಯಲ್ಲಿ ಬಹಿರಂಗವಾಗಿ ಲೆಕ್ಕಪತ್ರಗಳನ್ನು ತೋರಿಸದೇ, ನಮ್ಮ ದೇಶದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಕೋಮು ಗಲಭೆ ಸೃಷ್ಟಿಮಾಡುವಲ್ಲಿ ಆರ್.ಎಸ್.ಎಸ್ದೇಶದ್ರೋಹಿ ಕೆಲಸದಲ್ಲಿ ಭಾಗಿಯಾಗಿದೆ. ಇಂತಹ ಸಂಘಟನೆಯ ಬಗ್ಗೆ ಗೃಹ ಸಚಿವ ಪ್ರಿಯಾಂಕ್ಖರ್ಗೆಯವರು ಕಠಿಣವಾಗಿ ಪ್ರಶ್ನಿಸಿ, ಕಡ್ಡಾಯವಾಗಿ ನೋಂದಾಯಿಸಿಕೊಳ್ಳಿ, ಸರಿಯಾದ ರೀತಿಯಲ್ಲಿ ಲೆಕ್ಕಪತ್ರಗಳನ್ನು ನಿರ್ವಹಿಸಿ ಎಂದು ಸೂಚಿಸಿರುವುದು ಉತ್ತಮ ಕ್ರಮವಾಗಿದೆ. ಪ್ರಿಯಾಂಕ್ಖರ್ಗೆಯವರ ಈ ನಡೆಗೆ ನಮ್ಮ ಕ್ರಾಂತಿಚಕ್ರ ಬಳಗದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
