
Inauguration of BMS Lab and Digital Display System

ಬಿಎಂಎಸ್ ಲ್ಯಾಬ್ ಮತ್ತು ಡಿಜಿಟಲ್ ಡಿಸ್ಪ್ಲೇ ಸಿಸ್ಟಮ್ ಉದ್ಘಾಟನೆ

ಬೆಂಗಳೂರು ಏಪ್ರಿಲ್ 9; ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಬಿಎಂಎಸ್‌ಸಿಇ ಎಐಸಿಟಿಇ ಐಡಿಯಾ ಸಹಯೋಗದಲ್ಲಿ ಲ್ಯಾಬ್ ಮತ್ತು ಡಿಜಿಟಲ್ ಡಿಸ್ಪ್ಲೇ ಸಿಸ್ಟಮ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ವಿದ್ಯಾಶಂಕರ್ ಎಸ್. ಬಿಎಂಎಸ್‌ಇಟಿ ಅಧ್ಯಕ್ಷ ಡಾ|| ಬಿ.ಎಸ್. ರಾಗಿಣಿ ನಾರಾಯಣ್ ವಿದ್ಯುಕ್ತವಾಗಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಡಾ. ಪಿ. ದಯಾನಂದ ಪೈ, ಅವಿರಾಮ್ ಶರ್ಮಾ ಭಾಗವಹಿಸಿದ್ದರು.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಪ್ರಾಂಶುಪಾಲ ಬೀಮ್ ಶಾ,ಈ ಲ್ಯಾಬ್ ಮತ್ತು ಡಿಜಿಟಲ್ ಡಿಸ್ ಪ್ಲೈ ನಿಂದ 3500 ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ,ಇಂಜಿನಿಯರಿಂಗ್ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ಪ್ರಯೋಗಿಕ ಕೌಶಲ್ಯವನ್ನು ನೀಡುವ ಉದ್ದೇಶದಿಂದ ಐಡಿಯಾ ಲ್ಯಾಬ್ ಸ್ಥಾಪಿಸಲಾಗಿದೆ,ವಿದ್ಯಾರ್ಥಿಗಳು ಇಂಜಿನಿಯರ್ ಆಗಿ ಹೊರಬರುವ ಮೊದಲೇ ನಾಲ್ಕು ಕೌಶಲ್ಯವನ್ನು ಮೈಗೂಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ ಜೊತೆಗೆ ಉದ್ಯೋಗವಕಾಶ ದೊರೆಯಲಿದೆ ಎಂದು ಹೇಳಿದರು.
ಒಂದನೇ,ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ತಯಾರು ಮಾಡಲು ಐಡಿಯಾ ಲ್ಯಾಬ್ ಅನುಕೂಲವಾಗಲಿದೆ ಎಂದು ತಿಳಿಸಿದರು.
