ಕಾರ್ಮಿಕ ವರ್ಗದಲ್ಲಿ ಭೇದಭಾವ ಸ ಲ್ಲದು- ನ್ಯಾಯಮೂರ್ತಿ ಸದಾನಂದನಾಯ್ಕ್

Mallikarjun
2 Min Read
ಜಾಹೀರಾತು

There should be no discrimination in the working class - Justice Sadananda Naik




ಕಾರ್ಮಿಕ ವರ್ಗದಲ್ಲಿ ಭೇದಭಾವ ಸ ಲ್ಲದು- ನ್ಯಾಯಮೂರ್ತಿ ಸದಾನಂದನಾಯ್ಕ್

ಜಾಹೀರಾತು


ಗಂಗಾವತಿ: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಲ್ಲಿ ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಇದ್ದಾಗ ಅದು ಕೈಲಾಸ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳಾದ ಶ್ರೀ ಸದಾನಂದ ನಾಯ್ಕ್ ಹೇಳಿದರು ಅವರು

ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಐದನೇ ವಾರ್ಷಿಕೋತ್ಸವ ಮತ್ತು ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗಂಗಾವತಿಯ ಉಪವಿಭಾಗ ಹಾಗೂ ಹೆರಿಗೆ ಆಸ್ಪತ್ರೆಯ ಸರ್ವ ಸಿಬ್ಬಂದಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರದಂದು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು “ಪ್ರತಿಯೊಬ್ಬ ಕೆಲಸ ಮಾಡುವವರು ಕಾರ್ಮಿಕನೇ. ನ್ಯಾಯಾಧೀಶರೂ ಕಾರ್ಮಿಕರೇ, ಕಟ್ಟಡ ಕಾರ್ಮಿಕರೂ ಕಾರ್ಮಿಕರೇ. ಯಾವುದೂ ಕನಿಷ್ಠ ಅಥವಾ ಶ್ರೇಷ್ಠ ಅಲ್ಲ. ಜಗಜ್ಯೋತಿ ಬಸವಣ್ಣನವರು ಹೇಳಿದಂತೆ ಯಾವ ಕಾಯಕದಲ್ಲಾದರೂ ಕೈಲಾಸವಿದೆ. ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯ ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗಾಗಿ ಗಂಗಾವತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

ನ್ಯಾಯಾಧೀಶ ನಾಗೇಶ್ ಪಾಟೀಲ್ ಅವರು ಮಾತನಾಡಿ, “ಕಾರ್ಮಿಕರು ನ್ಯಾಯ ಸಿಗುವ ಬಗ್ಗೆ ಅನುಮಾನಪಡಬೇಡಿ. ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಉಚಿತ ಸಲಹೆ ಹಾಗೂ ನ್ಯಾಯ ಪಡೆಯಲು ಎಲ್ಲಾ ಸೌಲಭ್ಯಗಳಿವೆ. ನಿಮ್ಮ ಹಕ್ಕುಗಳಿಗೆ ತೊಂದರೆಯಾದಲ್ಲಿ ನ್ಯಾಯಾಲಯಕ್ಕೆ ಭೇಟಿ ನೀಡಿ” ಎಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು

ನಂತರ ಸಭೆಗೆ ಆಗಮಿಸಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು, “ಆರೋಗ್ಯ ಇಲಾಖೆಯಲ್ಲೇ ವಿಶ್ವ ಆರೋಗ್ಯ ದಿನಾಚರಣೆ ಆಚರಿಸುತ್ತಿರುವುದು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣ. ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲರೂ ಆಹಾರ, ನಿದ್ರೆ, ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಂಡು ಆರೋಗ್ಯವಾಗಿ ಬಾಳಬೇಕು” ಎಂದರು.
ಈ ವೇಳೆ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ ಸರ್ವರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡಾ. ಸೋಮಶೇಖರ್, ಅಶೋಕ್, ಸ್ಮಿತಾ ಐಲಿ , ವಕೀಲ ಸಂಘದ ತಾಲೂಕ ಅಧ್ಯಕ್ಷ ಎಸ್. ಎಸ್. ನಾಯಕ್, ಅಧಿಕಾರಿ ಪ್ರಕಾಶ್ ಖುಸುಬಿ, ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು. ನಗರಸಭೆ ವ್ಯಾಪ್ತಿಯ ಪ್ರವೇಶ ಒಂದರಲ್ಲಿ ರಾಷ್ಟ್ರಮಟ್ಟದ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮೂರು ಬಾರಿ ಕಾಯಕ ರತ್ನ ಪ್ರಶಸ್ತಿ ಪಡೆದುಕೊಂಡ ಉಪ ವಿಭಾಗದ ಆಡಳಿತ ಅಧಿಕಾರಿ ಡಾಕ್ಟರ್ ಈಶ್ವರ ಸವ ಡಿ ಅವರ. ಅನುಪಸ್ಥಿತಿಯಲ್ಲಿ ಓರ್ವ ವೈದ್ಯರಿಗೆ ಶ್ರಮಜೀವಿ ಕಾಯಕ ರತ್ನ ಎಂಬ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಹಾಗೆ ಸದರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸೇರಿದಂತೆ ಒಟ್ಟು 160ಸಿಬ್ಬಂದಿಗಳಿಗೆ ಗೌರವ ಸಮರ್ಪಣೆ ಹಾಗೂ ಸನ್ಮಾನಿಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು….

Total Views: 1
Share This Article