Distribution of sports equipment by Sri Swami Vivekananda Rural Development Sports and Cultural Youth Association to S.H.P.R. School, Hirebenakal village

ಹಿರೇಬೆಣಕಲ್ ಗ್ರಾಮದ ಸ.ಹಿ.ಪ್ರಾ ಶಾಲೆಗೆ
ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘದಿಂದ
ಕ್ರೀಡಾ ಸಾಮಗ್ರಿಗಳ ವಿತರಣೆ

ಗಂಗಾವತಿ: ತಾಲೂಕಿನ ಹಿರೇಬೆಣಕಲ್ ಗ್ರಾಮದ ಸ.ಹಿ.ಪ್ರಾ ಶಾಲೆಯ ಎಸ್.ಡಿ.ಎಂ.ಸಿ ಇತ್ತೀಚೆಗೆ ರಚನೆಯಾಗಿದ್ದು, ನೂತನ ಎಸ್.ಡಿ.ಎಂ.ಸಿ ಸದಸ್ಯರಿಗೆ ಮಾರ್ಚ್-24 ಮಂಗಳವಾರ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘದ ವತಿಯಿಂದ ಅಭಿನಂದನೆ ತಿಳಿಸಿ, ನಮ್ಮ ಸಂಘದ ವತಿಯಿಂದ ಶಾಲೆಗೆ ವಾಲಿಬಾಲ್, ಥ್ರೋಬಾಲ್, ನೆಟ್, ಸ್ಕಿಪಿಂಗ್, ಚೆಸ್‌ಬೋರ್ಡ್ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು ಸಂಘದ ಅಧ್ಯಕ್ಷರಾದ ಬಸವನಗೌಡ ಹೊಸಳ್ಳಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಸಂಘದ ಪದಾಧಿಕಾರಿಗಳಾದ ಬಸನಗೌಡ ಹೊಸಳ್ಳಿ, ಮಲ್ಲೇಶ ಡಣಾಪುರ, ನಿಂಗಜ್ಜ ಕಿಡದಾಳ, ಧನರಾಜ್ ನೀರಲೂಟಿ, ಮೂಕಪ್ಪ ಮುಜವರ, ನಾಗರಾಜ ಮಾದಿನಾಳ, ಮಂಜುನಾಥ್ ಜೋಗುಳದ, ಹನುಮೇಶ ಬೋವಿ, ರಾಜಸಾಬ್ ಮುಜವಾರ್, ಶರಣಪ್ಪ ಬಳೆಗಾರ, ಶೇಖಪ್ಪ ಪೂಜಾರಿ, ಗ್ರಾಮದ ಮುಖಂಡರು ಹಾಜರಿದ್ದರು