Sri Basava Sri Employees' Cooperative Society inaugurates a water distribution system for the public
Sri Basava Sri Employees' Cooperative Society inaugurates a water distribution system for the public

ಶ್ರೀ ಬಸವ ಶ್ರೀ ನೌಕರರ ಪತ್ತಿನ ಸಹಕಾರ ಸಂಘದಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ.

ಗಂಗಾವತಿ: ಬೇಸಿಗೆಯ ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾರ್ವಜನಿಕರ ದಾಹ ನೀಗಿಸುವ ಉದ್ದೇಶದಿಂದ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ಮಾನವಿ. ಶಾಖೆ ಗಂಗಾವತಿ ವತಿಯಿಂದ ಗಂಗಾವತಿ ನಗರದ ಸಿಬಿಎಸ್ ಸರ್ಕಲ್ ಐಸಿಐಸಿ ಬ್ಯಾಂಕ್ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಪ್ರಾರಂಭಿಸಲಾಗಿದೆ.
ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಡಾ|| ಶಂಕರಗೌಡ ಎಸ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನೆರವೇರಿತು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀ ವೀರೇಶ್ ಎನ್ ಹೊಸೂರು ಅವರು ಮಾತನಾಡಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಮಾರ್ಚ್ ತಿಂಗಳಿಂದ ಹೆಚ್ಚಾಗಿರುವುದರಿಂದ ಪಟ್ಟಣಕ್ಕೆ ಬರುವ ಸಾವಿರಾರು ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಹಳ್ಳಿಗರ ನೀರಿನ ದಾಹ ತಣಿಸಲು ಸಹಕಾರಿಯಾಗಿದೆ ಎಂದರು. ನಮ್ಮ ಸಂಸ್ಥೆಯ ಶಾಖೆಗಳು ಇರುವ ಮಾನ್ವಿ ಲಿಂಗಸೂಗೂರು, ಸಿರವಾರ, ದೇವದುರ್ಗ, ರಾಯಚೂರು, ಸಿಂಧನೂರು, ಗಂಗಾವತಿ, ಹುಣಸಗಿ ಹಾಗೂ ಯಾದಗಿರಿ, ನಗರಗಳಲ್ಲಿ ದಿನ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.
ಗಂಗಾವತಿ ನಗರದ ನಿವೃತ್ತ ಆಯುಷ್ಯ ಅಧಿಕಾರಿಗಳಾದ ಡಾ|| ವೀರನಗೌಡ ಎಸ್ ಪಾಟೀಲ್ ರವರು ಅರವಟ್ಟಿಗೆಯನ್ನು ಉದ್ಘಾಟಿಸಿ ಸಂಘದ ಈ ಜನಪರ ಕಾರ್ಯವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ನಗರದ ವಕೀಲರು ಶ್ರೀ ಪ್ರಕಾಶ್ ಕೋರಿ ಶೆಟ್ಟರ್ , ಪ್ರಕಾಶ್ ಸಿಂಗನಾಳ, ಸೋಮಶೇಖರ್ ಗೌಡ, ದೇವಣ್ಣ ಸರ್, ಚಂದ್ರಶೇಖರ್ ಹೊಸಕೇರಿ, ಶ್ರೀಧರ್ ಗಡದ , ಉಪಸ್ಥಿತರಿದ್ದರು.
ಗಂಗಾವತಿ ಶಾಖಾ ವ್ಯವಸ್ಥಾಪಕರಾದ ಶ್ರೀ ಚನ್ನಬಸವ, ಮಲ್ಲಿಕಾರ್ಜುನ, ಸಂದೀಪ, ವೀರೇಶ್ ಭಾಗವಹಿಸಿ ಸಾರ್ವಜನಿಕರ ಸೇವೆಗೆ ಚಾಲನೆ ನೀಡಿದರು.
ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.