Wild animals that destroyed the corn crop.

ಜೋಳದ ಪಸಲನ್ನು ಹಾಳು ಮಾಡಿದ ಕಾಡು ಪ್ರಾಣಿಗಳು .

ವರದಿ: ಬಂಗಾರಪ್ಪ ಸಿ .
ಹನೂರು : ರೈತರು ಸಾಲ ಮಾಡಿ ಬೆಳೆದ ಬೆಳೆಯು ಮನೆಗೆ ಸೆರಿಸುವಷ್ಟರಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳು ನಾಶವಾಗುತ್ತದೆ , ಹೊಲಗಳಲ್ಲಿ ಬೆಳೆದ ಬೆಳೆಗೆ ಹೆಚ್ಚಿನ ಶ್ರಮ ವಹಿಸಬೇಕು ಅಂತಹದರಲ್ಲಿ ಇಂತಹ ಘಟನೆಗಳು ನಡೆದರೆ ರೈತನ ಸ್ಥಿತಿಯನ್ನು ಉಹಿಸಲು ಕಷ್ಟ ವಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಬಸವರಾಜು ಇ ರವರು ತಿಳಿಸದರು.
ಹನೂರು ತಾಲೂಕಿನ ಸೂಳೆರಿಪಾಳ್ಯ. ಗ್ರಾಮ ಪಂಚಾಯಿತಿಯ ಕಾಂಚಳ್ಳಿ ಗ್ರಾಮ ರೈತನಾದ ಇರಸೆಗೌಡ ಕೃಷ್ಣೇಗೌಡರ ಸರ್ವೆ ನಂಬರಲ್ಲಿ 438 ರಲ್ಲಿ 7 ಎಕರೆ ಇದರಲ್ಲಿ 3 ಎಕ್ರೆಗೆ ಮೆಕ್ಕೆಜೋಳ ಹಾಕಿದ್ದು ತಡರಾತ್ರಿ ಬಂದ ಕಾಡು ಪ್ರಾಣಿಗಳು ಹಾಳು ಮಾಡಿದ್ದಾವೆ ಅಧಿಕಾರಿಗಳು ಗಮನಿಸಿ ಸೂಕ್ತ ಪರಿಹಾರ ನೀಡಬೇಕಾಗಿ ತಿಳಿಸಿದರು.