What should you do to sleep well at night?

ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು?

ರಾತ್ರಿ ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ಎನ್ನುವುದಕ್ಕಿಂತ ಏನು ಮಾಡಬಾರದು ಎನ್ನುವುದು ಬಹಳ ಮುಖ್ಯ.
ನಿದ್ದೆ ಎನ್ನುವುದು ಸರಳವಾಗಿ ಶರೀರ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ಕೊಡುವ ಸಮಯ.
ಆದ್ದರಿಂದ ಮನಸ್ಸು ಪ್ರಶಾಂತವಾಗಿ ಇದ್ದರೆ ಮಾತ್ರ ನಿದ್ರೆ ಬೇಗ ಆವರಿಸಿಕೊಳ್ಳುತ್ತದೆ.
ಮನಸ್ಸು ಪ್ರಶಾಂತವಾಗಿ ಇರಬೇಕೆಂದರೆ ಯಾವುದೇ ಆತಂಕ, ಖಿನ್ನತೆ, ಕೋಪ, ದ್ವೇಷ, ಅಸೂಯೆ, ಇತ್ಯಾದಿ ಭಾವನೆಗಳು ನಮ್ಮನ್ನು ಆವರಿಸಿಕೊಳ್ಳದಂತೆ ನೋಡಿಕೊಳ್ಳಬೇಕು.
ನಮಗೆ ಮನೆಯವರೊಡನೆ, ಸ್ನೇಹಿತರೊಡನೆ, ವ್ಯವಹಾರದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಮನಸ್ಸಿಗೆ ಅಹಿತ ಉಂಟಾದರೆ ಅದು ಸರಿಹೋಗುವವರೆಗೆ ಮನಸ್ಸು ಪ್ರಶಾಂತತೆಗೆ ಬರುವುದಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಸರಿಯಾಗಿ ಯೋಚಿಸಿ ಒಂದು ನಿರ್ಧಾರ ತೆಗೆದುಕೊಂಡು ಮನಸ್ಸನ್ನು ಪ್ರಶಾಂತಗೊಳಿಸಿಕೊಳ್ಳುವ ಕ್ರಿಯೆ ಅಭ್ಯಾಸ ಮಾಡಬೇಕು.
ಜೊತೆಗೆ ನಾವೂ ಕೂಡ ಯಾವುದೇ ದುರಭ್ಯಾಸಗಳಿಗೆ ಒಳಗಾಗಿ ಸುಳ್ಳು ಹೇಳುವುದು, ಕೋಪ ಮಾಡಿಕೊಳ್ಳುವುದು, ಇತ್ಯಾದಿ ಮನಸ್ಸಿಗೆ ಒತ್ತಡ ತರುವಂತಹ ಕೆಲಸಗಳನ್ನು ಮಾಡಬಾರದು.
ಶಾರೀರಿಕವಾಗಿ ಒಂದಷ್ಟು ಕೆಲಸಗಳನ್ನು ಮಾಡಿ ಶರೀರವನ್ನು ದಣಿಸುವುದು ಒಳ್ಳೆಯದು.
ಜೊತೆಗೆ ಮಲಗುವಂತಹ ಜಾಗವನ್ನು ಸ್ವಚ್ಛತೆಯಿಂದ ಇಟ್ಟುಕೊಂಡು ಸಮಯದ ಪ್ರಕಾರ ಮಲಗಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.