ಭಾರತ ಜನಗಣತಿ: ಫೀಲ್ಡ್ ಟ್ರೇನರಗಳಿಗೆ ತರಬೇತಿ ಕರ‍್ಯಾಗಾರ
India Census: Training Workshop for Field Trainers



ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸರ‍್ಥ ತರಬೇತಿ ನೀಡಿ- ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ
ಕೊಪ್ಪಳ ಮರ‍್ಚ್ ೧೯ (ರ‍್ನಾಟಕ ವರ‍್ತೆ): ಜನಗಣತಿ ಕರ‍್ಯಕ್ಕೆ ಗಣತಿದಾರರು ಹಾಗೂ ಮೇಲ್ವಿಚಾರಕರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಫೀಲ್ಡ್ ಟ್ರೇನರಗಳು ಸರ‍್ಥವಾದ ತರಬೇತಿ ನೀಡಿ, ಕೆಲಸ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ ಹೇಳಿದರು.

ಅವರು ಇತ್ತೀಚೆಗೆ ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಭಾರತದ ಜನಗಣತಿ–೨೦೨೭ ಕರ‍್ಯದ ಅಂಗವಾಗಿ ಫೀಲ್ಡ್ ಟ್ರೇನರಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕರ‍್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು.
ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆಯಲ್ಲಿ ಜನಗಣತಿ ಅಂಕಿ-ಅಂಶಗಳು ಅಡಿಪಾಯವಾಗಿದ್ದು, ಈ ಕರ‍್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ರಾಷ್ಟ್ರ ನರ‍್ಮಾಣದ ಅಳಿಲು ಸೇವೆಯಲ್ಲಿ ಭಾಗಿಗಳಾಗುತ್ತಿದ್ದೇವೆ ಎಂಬ ಭಾವನೆಯೊಂದಿಗೆ ಪ್ರಾಮಾಣಿಕವಾಗಿ ಹಾಗೂ ಸರ‍್ಪಕವಾಗಿ ಕೆಲಸ ಮಾಡಬೇಕು. ಈ ಬಾರಿಯ ಜನಗಣತಿಯು ಹಳೆಯ ಮ್ಯಾನುಯಲ್ ಪದ್ಧತಿ ಕೈಬಿಟ್ಟು, ಸಂಪರ‍್ಣವಾಗಿ ಮೊಬೈಲ್ ಆ್ಯಪ್ ಮೂಲಕ ನಡೆಯಲಿದ್ದು, ಇದು ನಿಖರತೆ ಮತ್ತು ಪಾರರ‍್ಶಕತೆ ಹೆಚ್ಚಿಸಲಿದೆ. ಪ್ರತಿ ವರ‍್ಡ್ ಅಥವಾ ಗ್ರಾಮ ಮಟ್ಟದಲ್ಲಿ ೧೫೦ ರಿಂದ ೨೦೦ ಕುಟುಂಬಗಳನ್ನು ಒಳಗೊಂಡ ‘ಬ್ಲಾಕ್’ಗಳನ್ನು ಗುರುತಿಸಿ, ನಿಖರವಾದ ಬ್ಲಾಕ್ ನಕ್ಷೆ ಮತ್ತು ಪಟ್ಟಿಗಳನ್ನು ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಗಣತಿ ಕರ‍್ಯವು ಯಶಸ್ವಿಯಾಗಲು ಬ್ಲಾಕ್‍ಗಳ ರಚನೆ ಅತ್ಯಂತ ಪ್ರಮುಖವಾಗಿದೆ. ಬ್ಲಾಕ್ ರಚನೆಯಲ್ಲಿ ಸಣ್ಣ ತಪ್ಪುಗಳಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಬ್ಲಾಕ್‍ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ವರ‍್ಡ್ ಬಿಲ್ ಕಲೆಕ್ಟರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ ಕರ‍್ಯ ನರ‍್ವಹಿಸಬೇಕು. ಗಣತಿದಾರರನ್ನು ನೇಮಿಸುವಾಗ ಅವರು ವಾಸಿಸುವ ಅಥವಾ ಕೆಲಸ ಮಾಡುವ ಬ್ಲಾಕ್‍ಗಳಲ್ಲೇ ನಿಯೋಜಿಸಬೇಕು. ಒಂದು ವೇಳೆ ಅನಿವರ‍್ಯ ಸಂರ‍್ಭಗಳಲ್ಲಿ ಸ್ಥಳೀಯರು ಲಭ್ಯವಿಲ್ಲದಿದ್ದರೆ, ೨೦೦ ಮೀಟರ್ ವ್ಯಾಪ್ತಿಯಲ್ಲಿರುವ ರ‍್ಕಾರಿ ನೌಕರರನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂರ‍್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜನಗಣತಿ ಕೇಂದ್ರ ಕಚೇರಿ ಬೆಂಗಳೂರಿನ ಮಾಸ್ಟರ್ ಟ್ರೈನರ್ ಫಣಿ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೀಲ್ಡ್ ಟ್ರೇನರಗಳಿಗೆ ತರಬೇತಿ: ಜನಗಣತಿ ಕೇಂದ್ರ ಕಚೇರಿ ಬೆಂಗಳೂರಿನ ಮಾಸ್ಟರ್ ಟ್ರೈನರ್ ಫಣಿ ಕುಮಾರ್ ಹಾಗೂ ಯಲಬರ‍್ಗಾ ತಾಲ್ಲೂಕು ಹಿಂದುಳಿದ ರ‍್ಗಗಳ ಕಲ್ಯಾಣ ಅಧಿಕಾರಿ ಶಿವಶಂಕರ ಕರಡಕಲ್ ಅವರು ತರಬೇತಿ ನೀಡಿದರು. ಕರ‍್ಯಾಗಾರದಲ್ಲಿ ಮಾಸ್ಟರ್ ಟ್ರೈನರಗಳು, ಫೀಲ್ಡ್ ಟ್ರೇನರಗಳು ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.