Breaking News
ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್
It is our duty to save the environment: Revathi Kamath

ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್

  • “ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ
  • ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು ಮಾರ್ಚ್ 08: “ಮುಂದಿನ ತಲೆಮಾರಿಗೆ ಪರಿಸರ ಉಳಿಸುವ ಮೂಲಕ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅರಿತುಕೊಳ್ಳಬೇಕು” ಎಂದು ಪರಿಸರವಾದಿ ರೇವತಿ ಕಾಮತ್ ಹೇಳಿದರು.

ಕನಕಪುರ ರಸ್ತೆಯಲ್ಲಿರುವ “ಧೀ DHEE” ಆಸ್ಪತ್ರೆಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಧೀ ಶಕ್ತಿ ಉದ್ಘಾಟಿಸಿ ಮಾತನಾಡಿದ ಅವರು, “ಜನರು ತಮ್ಮ ಅಭಿವೃದ್ಧಿ ಬಗ್ಗೆ ನೋಡುತ್ತಿದ್ದಾರೆಯೇ ಹೊರತು, ಪರಿಸರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದೇ ಇರುವುದು ಬೇಸರದ ಸಂಗತಿ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಾಲಿನ್ಯ ಮಾಡುವುದನ್ನು ತಡೆಯಬೇಕು” ಎಂದರು.
“ಬಿಲ್ಡರ್ ಗಳು ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡುತ್ತಿದ್ದಾರೆಯೇ ಹೊರತು ಅವರಿಗೆ ಪರಿಸರ ಕಾಳಜಿ ಇಲ್ಲ. ನಾವು ಕಾಳಜಿ ಬಗ್ಗೆ ಮಾತನಾಡುತ್ತೇವೆಯೇ ಹೊರತು ಯಾರು ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಮನೆಯಲ್ಲಿ ಬೆಳೆಸುವ ಸಸಿಗಳ ಬಗ್ಗೆ ನಮಗೆ ಸ್ವಲ್ಪ ಕೂಡ ತಿಳುವಳಿಕೆ ಇರುವುದಿಲ್ಲ. ಆದರೂ, ನಾವು ನಮ್ಮದಲ್ಲದ ಗಿಡಗಳನ್ನು ಬೆಳೆಸುತ್ತೇವೆ. ರೈತರು ಕೂಡ ಅನವಶ್ಯಕವಾಗಿ ಕೀಟನಾಶಕ ಬಳಕೆ ಮಾಡುತ್ತಾರೆ. ಇದು ಪರಿಸರ ವಿನಾಶವಾಗಿದೆ. ಇದರ ಬಗ್ಗೆ ಎಚ್ಚರವಹಿಸಬೇಕು” ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನುಪಮಾ ಹೊಸಕೆರೆ ಮಾತನಾಡಿ, ” ನಾವು ಇತಿಹಾಸ ನೋಡಿದರೆ, ಮಹಿಳೆಯರ ಶಕ್ತಿ ಬಹಳಷ್ಟಿದೆ. ನಾವು ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಮಹಿಳೆಯರು ಯಾವ ಕಷ್ಟ ಬಂದರೂ ಧೃತಿಗೆಡಬಾರದು. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ನಾವು ನಮ್ಮ ಇರುವಿಕೆಯನ್ನು ತೋರಿಸಬೇಕು” ಎಂದರು.

ಇದೇ ವೇಳೆ ನಟಿ ಗಿರಿಜಾ ಲೋಕೇಶ್, ಹೇಮಾ ಶಾನಭೋಗ್, ಪತ್ರಕರ್ತೆ ಮಿನಿ ಥಾಮಸ್ ಇತರೆ ಮಹಿಳಾ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ. ಸುಪ್ರಜಾ ಚಂದ್ರಶೇಖರ್ ಇತರರು ಇದ್ದರು.

ಕೋಟ್…
ಮಹಿಳೆಯರಿಗೆ ಅರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಮಹಿಳೆಯರು ಮದುವೆ ನಂತರ ಗೃಹಿಣಿಯಾಗಿ ಉಳಿಯುವುದೇ ಹೆಚ್ಚು. ನೀವು ಈ ರೀತಿ ಆಗಬೇಡಿ. ನೀವು ಆರ್ಥಿಕವಾಗಿ ಸಬಲರಾಗಬೇಕು.
ನಿರುಪಮಾ ಶಂಕರ್, ಜಂಟಿ ವ್ಯವಸ್ಥಾಪಕ ನಿರ್ದೇಶಕಿ, ಬ್ರಿಗೇಡ್ ಗ್ರೂಪ್

ಸುರಕ್ಷತೆ ಮತ್ತು ಭದ್ರತೆ ನಾವು ಬೇರೆಯವರು ಮಾಡಿಕೊಡುವುದಿಲ್ಲ. ನಾವು ಮಾಡಿಕೊಳ್ಳುವುದಾಗಿದೆ. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಮಹಿಳೆಯರು ಆತ್ಮವಿಶ್ವಾಸ ಇಟ್ಟುಕೊಂಡು ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯಬೇಕು.
ಡಾ.ವಿ. ಬಿ.ಆರತಿ, ಸಂಸ್ಥಾಪಕರು, ವಿಬು ಅಕಾಡೆಮಿ

ನಮ್ಮ ಆಸ್ಪತ್ರೆಯಲ್ಲಿ ದಾನಿಗಳಿಂದ ಸಹಾಯ ಪಡೆದು ಬಹುತೇಕ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಿಕೊಟ್ಟಿದ್ದೇವೆ. ಇದರಿಂದ ಬಹುತೇಕರು ಇಂದು ಕ್ರೀಡಾ ಪಟುಗಳಾಗಿ ಉಳಿದುಕೊಂಡಿದ್ದಾರೆ. ನಾವು ಗುಣಮಟ್ಟ ಚಿಕಿತ್ಸೆಯನ್ನು ನೀಡುತ್ತೇವೆ.

  • ಡಾ. ಚಂದ್ರಶೇಖರ್, ನರ ರೋಗ ತಜ್ಞ, ಧೀ ಶಕ್ತಿ ಆಸ್ಪತ್ರೆ
ಗಂಗಾವತಿ ನಗರ ಸಭೆ ಬೇಜವಬ್ದಾರಿ:ಕ್ರಿಮಿ ಕೀಟಗಳ ತಾಣವಾಗಿ ಮಾರ್ಪಟ್ಟ ಲೇಔಟ್- ನಿವಾಸಿಗಳ ಜೀವದ ರಕ್ಷಣೆ ಯಾರ ಹೊಣೆ
Gangavathi City Council irresponsible: Layout has become a breeding ground for insects - Who is responsible for protecting the lives of residents?

ಗಂಗಾವತಿ ನಗರ ಸಭೆ ಬೇಜವಬ್ದಾರಿ:ಕ್ರಿಮಿ ಕೀಟಗಳ ತಾಣವಾಗಿ ಮಾರ್ಪಟ್ಟ ಲೇಔಟ್-ಕಷ್ಟಗಳ ಮಧ್ಯೆಯೇ ನಿವಾಸಿಗಳ ಜೀವನ

ಅಮೃತ ಸಿಟಿ ಯೋಜನೆ ಮೂಲಕ ಸಿಟಿ ಕಾಗದದಲ್ಲಿ ಮಾತ್ರ

ನಗರದ  ಬಹುತೇಕ ಎಲ್ಲಾವಾರ್ಡ್‌ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಪ್ರತಿ ಓಣಿಗಳಲ್ಲಿ ತ್ಯಾಜ್ಯ ಸಾಮಾನ್ಯ ರಾಶಿಗಟ್ಟಲೇ ತ್ಯಾಜ್ಯವಿದ್ದರೂ, ವಿಲೇವಾರಿಯಾಗುತ್ತಿಲ್ಲ

ಗಂಗಾವತಿ :ನಗರದ 35ನೇ ವಾರ್ಡ್‌ನಲ್ಲಿ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸವಾಗಿರುವ ಪ್ರತಿಷ್ಠಿತ ಮಹಾಬಳೇಶ್ವರ ಲೇಔಟ್‌ನಲ್ಲಿ ಯುಜಿಡಿ ಕಳಪೆ ಕಾಮಗಾರಿಯಿಂದ ಬಡಾವಣೆ ಕೊಳಚೆ ಪ್ರದೇಶವಾಗಿದೆ.

ಕಳೆದ 12 ವರ್ಷಗಳಿಂದ ಯುಜಿಡಿ ಕಾಮಗಾರಿ ನಗರದ ನಾನಾ ವಾರ್ಡ್ ಗಳಲ್ಲಿ ನಡೆದಿದೆ. ಆದರೆ ಇದುವರೆಗೂ ಯಶಸ್ವಿಯಾಗಿ ಪೂರ್ಣಗೊಂಡಿಲ್ಲ. 35ನೇ ವಾರ್ಡ್‌ ಮಹಾಬಲೇಶ್ವರ ಲೇಔಟ್‌ನಲ್ಲಿ ಯುಜಿಡಿ ಕಾಮಗಾರಿ ಕೈಗೊಂಡು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಯುಜಿಡಿ ತ್ಯಾಜ್ಯ ಹೋಗಲು ವಾಡ್ ೯ನಿಂದ ಲಿಂಕ್ ಕೊಟ್ಟಿಲ್ಲ. ಹಾಗಾಗಿಯೇ ಡ್ರೈನೇಜ್ ತುಂಬಿಕೊಂಡು ಹೊರಗಡೆ ಲೀಕ್ ಆಗಿ, ಲೇಔಟ್‌ನ ಉದ್ಯಾನವನದ ಪಕ್ಕದಲ್ಲಿ ಸೋರಿಕೆಯಾಗುತ್ತಿದೆ.

ನಗರದ 35ನೇ ವಾರ್ಡ್ನ ಮಹಾಬಲೇಶ್ವರ ಲೇಔಟ್ನಲ್ಲಿ ಯುಜಿಡಿ ತ್ಯಾಜ್ಯ ಸಂಗ್ರಹವಾಗಿರುವುದು. 35ನೇ ವಾರ್ಡ್‌ನಲ್ಲಿ ನಿರ್ಮಿಸಿರುವ ಶೌಚಾಲಯ ನಿರ್ವಹಣೆಯಿಲ್ಲದೇ ಹಾಳಾಗಿರುವುದು. 31ನೇ ವಾರ್ಡ್‌ ಮುಖ್ಯ ರಸ್ತೆ ಹಾಳಾಗಿದ್ದು, ಮಳೆಯಿಂದ ಗುಂಡಿಯಲ್ಲಿ ನೀರು ನಿಂತುಕೊಂಡಿರುವುದು.

ಯುಜಿಡಿ ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ಹೊರ ಬರುತ್ತಿದ್ದು, ತ್ಯಾಜ್ಯದ ಹೊಂಡವಾಗಿ ನಿರ್ಮಾಣಗೊಂಡಿದೆ. ಯುಜಿಡಿ ಲೀಕ್ ಆಗುತ್ತಿರುವುದು ಅಕ್ಕಪಕ್ಕದ ಮನೆಯವರಿಗೆ ಕೆಟ್ಟ ವಾಸನೆ ಹರಡುತ್ತಿದೆ.

ಅದನ್ನು ಸರಿಪಡಿಸಲು ನಗರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎಂಬುದು ಸ್ಥಳೀಯರ ದೂರು  ಲೆಕ್ಕಕ್ಕಿಲ್ಲ.ಸಂದಪಟ್ಟವರಿಗೆ ಪೋನ್ ಮಾಡಿದರೆ ಉತ್ತರಿಸುತ್ತಿಲ್ಲ. ಪತ್ರಿಕೆಯಲ್ಲಿ ಬಂದರು ಲೆಕ್ಕಕಿಲ್ಲ.ನಗರಸಭೆಗೆ ಹೋಗಿ ಕೇಳಿದರೆ ಸೈಟ್ ನಲ್ಲಿಇದ್ದರೆ ಹೇಳುತ್ತಾರೆ.

ಸಾರ್ವಜನಿಕ ಜನಿಕರು ಸಮಸ್ಯೆ ಯಾರಿಗೆ ಹೇಳಬೇಕು ??

  

.

ನರೇಗಾದಲ್ಲಿ ಪುರುಷ-ಮಹಿಳೆಗೆ ಸಮಾನ ಕೂಲಿ-  ಪಿಡಿಓ ಸುರೇಶ ಚಲವಾದಿ
Equal wages for men and women in Narega
Waddarahatti Gram PDO Suresh Chalawadi

ನರೇಗಾದಲ್ಲಿ ಪುರುಷ-ಮಹಿಳೆಗೆ ಸಮಾನ ಕೂಲಿ
ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿಕೆ
ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೇಕ್ ಕತ್ತರಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ


ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ನರೇಗಾ ಕೂಲಿಕಾರರು ಕಲಿಕೇರಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಭಾನುವಾರ ಆಚರಿಸಲಾಯಿತು.
ಈ ವೇಳೆ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ನರೇಗಾ ಯೋಜನೆಯಲ್ಲಿ ಯಾವುದೇ ಲಿಂಗ ತಾರತಮ್ಯ ಇಲ್ಲದೇ ಪುರುಷ-ಮಹಿಳೆಗೆ ಸಮಾನ ಕೂಲಿ ನೀಡಲಾಗುತ್ತಿದೆ. ಬಾಣಂತಿ ಮತ್ತು ಗರ್ಬಿಣಿಯರಿಗೆ ಕೆಲಸದಲ್ಲೂ ರಿಯಾಯತಿ ಕೂಡ ಇರುತ್ತದೆ ಎಂದರು.
ಮಹಿಳೆ ಇಂದು ಎಲ್ಲ ರಂಗಗಳಲ್ಲೂ ಛಾಪು ಮೂಡಿಸುತ್ತಿದ್ದು, ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯಬೇಕಿದೆ. ಮಹಿಳೆಯರು ಸರಕಾರದಿಂದ ದೊರೆಯುವ ಯೋಜನೆಗಳ ಉಪಯೋಗ ಪಡೆದುಕೊಳ್ಳಳಬೇಕು. ಮಹಿಳೆಯರಿಗೆ ಮನೆಯಲ್ಲಿಯೂ ಪಾಲಕರು ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದರು.
ಕೂಲಿಕಾರರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ವೇಳೆ, ಗ್ರಾಪಂ ಕಂಪ್ಯೂಟರ್ ಆಪರೇಟರ್ ಮಹ್ಮದ್, ಜಿಕೆಎಂ ಸುಜಾತ, ಕಾಯಕಬಂಧುಗಳು ಇದ್ದರು.

ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್,ಸಂಸ್ಥೆ ಯಿಂದ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
Pyramid Spiritual Society Movement, an organization celebrating International Women's Day

ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್,ಸಂಸ್ಥೆ ಯಿಂದ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಹಿಳೆಯರಲ್ಲಿ ಸ್ತ್ರೀ-ತತ್ವಗಳಾದ ಪ್ರೀತಿ, ಸಹನೆ, ಕ್ಷಮೆ ಮುಂತಾದವುಗಳು ಜಾಗೃತವಾದರೆ ಉತ್ತಮ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲಿದೆ: ಶ್ರೀಮತಿ ಲಲಿತಾ ಕಂದಗಲ್

ಗಂಗಾವತಿ: ಸ್ತ್ರೀ ಎಂದರೆ ಪ್ರೀತಿ, ಕರುಣೆ, ಸಹನೆ, ತ್ಯಾಗ, ಮಮತೆ, ಹೊಂದಾಣಿಕೆ, ಸ್ಪೂರ್ತಿ, ಶಕ್ತಿ, ಪ್ರೇರಣೆ, ಕ್ಷಮೆ ಹೀಗೆ ಹಲವಾರು ತತ್ವಗಳಿಗೆ ಪ್ರತಿಕ, ಆದರೆ ಇಂದಿನ ಕೆಲಸದ ಒತ್ತಡ, ಬದಲಾದ ಜೀವನ ವಿಧಾನ, ಆಹಾರ ಪದ್ಧತಿ ಆಲೋಚನಾ ವಿಧಾನಗಳಿಂದಾಗಿ ಸ್ತ್ರೀಯರಲ್ಲಿ ಸ್ತ್ರೀ-ತತ್ವಗಳಾದ ಪ್ರೀತಿ, ಹೊಂದಾಣಿಕೆ, ಸಹನೆ ಮುಂತಾದವುಗಳಲ್ಲಿ ಲೋಪವಾಗಿ ಸ್ವಾರ್ಥ, ಅಸಹನೆ, ಅಸೂಯೆ, ನಕರಾತ್ಮಕ ಸ್ಪರ್ಧಾ ಮನೋಭಾವ ಒಣ ಪ್ರತಿಷ್ಠೆ ಯಂತಹ ಅವಗುಣಗಳು ಬೆಳೆಯುತ್ತಿರುವುದು ಆತಂಕದ ವಿಷಯ.

ಇವು ಪರಮಾಣು ಬಾಂಬುಗಿಂತ ವಿನಾಶಕಾರಿ, ಅಪಾಯಕಾರಿ, ಪರಮಾಣು ಬಾಂಬುಗಳು ಒಂದೇ ಬಾರಿಗೆ ಜೀವ ಹಾನಿ ಮಾಡಿದರೆ ಈ ನಕರಾತ್ಮಕ ಗುಣ ಸ್ವಭಾವ ವ್ಯಕ್ತಿತ್ರ ಸಂಬಂಧ ಬಾಂಧವ್ಯ ಕುಟುಂಬ ವ್ಯವಸ್ಥೆ ಸಮಾಜದ ಸೌಹಾರ್ದತೆ ರಾಷ್ಟ್ರೀಯ ಭಾವೈಕ್ಯತೆ ವಿಶ್ವ ಪ್ರೇಮವನ್ನ ಹಾಳು ಮಾಡುತ್ತಿದೆ ಎಂದು ಒಂದನೇ ಪ್ಯಾರದ ಕೊನೆಯ ಸಾಲಿನಲ್ಲಿ ರಾಜ್ಯತಾಸ್ತ್ರ ಉಪನ್ಯಾಸಕಿ ಹಾಗೂ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವೈಂಟ್ ನ ಮನ್ವಂತರ ಧ್ಯಾನ ಕೇಂದ್ರದ ರೂವಾರಿ ಶ್ರೀಮತಿ ಲಲಿತ ನಾರಾಯಣ ಕಂದಗಲ್ ಕಳವಳ ವ್ಯಕ್ತಪಡಿಸಿದರು.

ಅವರು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳಲ್ಲಿ ಯಾವುದೇ ಬಿರುದು ಸನ್ಮಾನಗಳಿಗೆ ಆಶಿಸದೇ ಎಲೆಮರೆಯ ಕಾಯಿಯಾಗಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಹಲವು ಮಹಿಳೆಯರನ್ನು ಇಂದು ಆಧ್ಯಾತ್ಮಿಕ ಸಂಸ್ಥೆಯಾದ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್, ಗಂಗಾವತಿ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಈ ಮಹಿಳಾ ದಿನಾಚರಣೆ ಮೂಲಕ ಎಲ್ಲರಲ್ಲಿಯೂ ಸ್ತ್ರೀ ತತ್ವಗಳಾದ ಪ್ರೀತಿ ಸಹನೆ, ಕ್ಷಮೆ ಮುಂತಾದವುಗಳು ಜಾಗೃತವಾದರ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ವಿಶ್ವ ಭ್ರಾತೃತ್ವ ವಿಶ್ವ ಪ್ರೇಮ ನಮ್ಮ ಮೂಲಕ, ನಮ್ಮ ಕುಟುಂಬದಿಂದಲೇ ಆರಂಭವಾಗಬೇಕು. ಅದಕ್ಕೆ ಇಂತಹ ದಿನಾಚರಣೆಗಳು ವೇದಿಕೆಯಾಗಬೇಕು ಎಂದು ಇದೇ ಸದುದ್ದೇಶದಿಂದ ಇಂದು ಮುಖ್ಯವಾಗಿ ಪೌರ ಕಾರ್ಮಿಕ ಮಹಿಳೆ ಹುಲಿಗೆಮ್ಮ ನ್ಯಾಯಾಂಗ ಇಲಾಖೆಯ ರೇಣುಕಾ, ಕೆಇಬಿ ಭಾರತಿ ಜೋಶಿ, ಶಿಕ್ಷಣ ಇಲಾಖೆಯ ಜಯಶ್ರೀ ಎಂ, ಆರೋಗ್ಯ ಇಲಾಖೆಯ ಪದ್ಮಾ ಅಂಚೆ ಇಲಾಖೆಯ ಪೂರ್ಣಿಮಾ, ಸಾರಿಗೆ ಇಲಾಖೆಯ ಸೌಮ್ಯ ಹಾಗೂ ಬಿಸಿ ಊಟದ ಮುಖ್ಯ ಅಡಿಗೆದಾರ್ತಿ ಸುನಿತಾ ಸಜ್ಜನ್ ಸೇರಿದಂತೆ ಹಲವರನ್ನು ಸನ್ಮಾನಿಸಿ ಅವರು ಇಲಾಖೆಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಸರಿಸಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸೊಸೈಟಿ ಮೂವಮೆಂಟಿನ ಮುಖ್ಯ ರೂವಾರಿಗಳಾದ ಲಲಿತ ನಾರಾಯಣ ವಗ್ಗ ನಾಗರಾಜ ಕಾಜಿ, ಕೆ ಶರಣಮ್ಮ ತಾರಾ ತಿರುಪತಿ ಜೋಶಿ, ಮಾಲಾ 1. ಮಂಜುನಾಥ್, ವಿನಯ್ ಕುಮಾರ್, ಶಿವಕುಮಾರ್, ಇನ್ನಿತರ ಪಿರಮಿಡ್ ಮೇಷ್ಟ್ರುಗಳು ಉಪಸ್ಥಿತರಿದ್ದರು.

d: 9480772332

ಕಾರ್ಮಿಕ ಇಲಾಖೆಯಿಂದ ಮಂಜುರಾ ತಿ ಗೊಂಡ ಒಂದುವರೆ ಲಕ್ಷದ ವಿವಿಧಕಿಟ್ ವಿತರಣೆ. ಪಾಂಡು.ನಾ ಯ್ಕ್.
Distribution of various kits worth one and a half lakh to Manjura Thi Gond from Labor Department. Pandu.na yk.

ಕಾರ್ಮಿಕ ಇಲಾಖೆಯಿಂದ ಮಂಜುರಾ ತಿ ಗೊಂಡ ಒಂದುವರೆ ಲಕ್ಷದ ವಿವಿಧಕಿಟ್ ವಿತರಣೆ. ಪಾಂಡು.ನಾ ಯ್ಕ್.


ಗಂಗಾವತಿ. ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘಕ್ಕೆ ಮಂಜೂರಾತಿ ಗೊಂಡ ಅಂದಾಜು ಒಂದುವರೆ ಲಕ್ಷ ದ ವಿವಿಧ ಕಿಟ್ ಗಳನ್ನು ರವಿವಾರದಂದು ವಿರುಪಾಪುರ ತಾಂಡದಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಾಂಡು.ನಾಯ್ಕ್ ಸಂಘದ ಫಲಾನುಭವಿಗಳಿಗೆ ಕಿಟ್ಟ ಗಳನ್ನು ವಿತರಿಸುವುದರ ಮೂಲಕ ಮಾತನಾಡಿ ಕಾರ್ಮಿಕ ಇಲಾಖೆ ವಿದ್ಯುತ್ ಬುನಾದಿ. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಅಗತ್ಯ ಮೂರು ಹಂತದ ಪರಿಕರಗಳನ್ನು ಕಲ್ಪಿಸಲಾಗಿದ್ದು ನೀಡಲಾಗಿರುವ ಕಿಟ್ಟುಗಳಲ್ಲಿ ಮತ್ತಷ್ಟು ಗುಣಮಟ್ಟದ ಪರಿಕರಗಳನ್ನು ಕಲ್ಪಿಸುವ ಅವಶ್ಯಕತೆ ಇತ್ತು ಎಂದು ತಿಳಿಸಿದವರು ಕಳೆದ ಮೂರು ವರ್ಷದಿಂದ ಅಸ್ತಿತ್ವಕ್ಕೆ ಬಂದ ಸಂಗವು ಈಗಾಗಲೇ ಕಾರ್ಮಿಕರ ಸದಸ್ಯರುಗಳಿಗಾಗಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ವಿಶೇಷವಾಗಿ ಕಾರ್ಮಿಕರ ಇಲಾಖೆ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಿಟ್ಟುಗಳನ್ನು ಕಲ್ಪಿಸಬೇಕಾಗಿದೆ ಯಾವುದೇ ವಿದ್ಯಾರ್ಥಿ ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದು ಜೊತೆಗೆ ವಿದ್ಯಾರ್ಥಿ ವೇತನ ರಕ್ಷಿಸುವಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುನ್ನೂರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಂತಹ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ ಮುಂದಿನ ದಿನಗಳಲ್ಲಿ ಸಂಗಾಪೂರ ತಾಂಡ. ಸೂರ್ಯನಾಯಕತಾಂಡ ಭಾಗದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಕಾರ್ಮಿಕ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸುವ ಸದುದ್ದೇಶ ತಾವು ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಪ್ಪ ನಾಯ್ಕ್. ಉಪಾಧ್ಯಕ್ಷ ಬಾಲಾಜಿ ಮೇಸ್ತ್ರಿ ಹನುಮಂತಪ್ಪ ಮೇಸ್ತ್ರಿ ಖಜಾಂಚಿ ರವಿಚಂದ್ರ ಸದಸ್ಯರುಗಳಾದ ಕೃಷ್ಣ ಭೋಜ ರವಿ ನಾಯ್ಕ್. ಸೇರಿದಂತೆ ಫಲಾನುಭವಿಗಳು ಪಾಲುಗೊಂಡಿದ್ದರು.

ಪುಸ್ತಕಗಳ ಅಧ್ಯಯನ ಹಾಗೂ ಜೀವನದ ಅನುಭವಗಳ ಸಾರದಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ- ಎಸ್ ವಿ ಪಾಟೀಲ್ ಗುಂಡೂರ.
One can become a good poet only through the study of books and the essence of life experiences-S. V. Patil Gundura.

ಪುಸ್ತಕಗಳ ಅಧ್ಯಯನ ಹಾಗೂ ಜೀವನದ ಅನುಭವಗಳ ಸಾರದಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ- ಎಸ್ ವಿ ಪಾಟೀಲ್ ಗುಂಡೂರ.


ಗಂಗಾವತಿ. ಬರೆದದ್ದು ಗೀಚಿದ್ದು ಕವನವಲ್ಲ ಒಬ್ಬ ಉತ್ತಮ ಕವಿಯಾಗಲು ಹೆಚ್ಚು ಅಧ್ಯಯನ ಶೀಲತೆಯನ್ನು ಹಾಗೂ ಜೀವನದ ಅನುಭವಗಳನ್ನು ಹಂಚಿಕೊಂಡಾಗ ಮಾತ್ರ ಅತ್ಯುತ್ತಮವಾದ ಕವಿಯಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ಸಾಹಿತ್ಯ ಹಾಗೂ ನಾಟಕ ರಚನೆಕಾರ ಎಸ್ ವಿ ಪಾಟೀಲ್ ಗುಂಡೂರ್ ಹೇಳಿದರು.
ಅವರು ಶನಿವಾರದಂದು ಕನ್ನಡ ಜಾಗೃತಿ ಭವನ ದಲ್ಲಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಶ್ರೀ ರಾಜರಾಜೇಶ್ವರಿ ಜನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಅರಳಹಳ್ಳಿ ಇವರ ನೇತೃತ್ವದಲ್ಲಿ ಆಯೋಜಿಸಿದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭತ್ತದ ಕಣಜ ಎನಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರ ಭಾಗದಲ್ಲಿ ದಿನದಿಂದ ದಿನಕ್ಕೆ ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಶಂಶಿಯ ಕಾರ್ಯವಾಗಿದೆ. ಕವಿಗೋಷ್ಠಿಯಲ್ಲಿ ಸುಮಾರು 24 ಅಧಿಕ ಕವಿಗಳು ತಮ್ಮದೇ ಆದಂತಹ ಕವನಗಳನ್ನು ರಚಿಸಿ ವಾಚನ ಮಾಡಿರುವುದು ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡ ಕವಿಗಳು ಸ್ವಲ್ಪ ಪ್ರಾಸಗಳನ್ನು ರಚಿಸಲು ಹೋಗಿ ತ್ರಾಸು ಅನುಭವಿಸಿದ್ದು ಕಾಣಬಹುದಾಗಿದೆ ಉಳಿದಂತೆ ಕವನಗಳನ್ನು ಗಮನಿಸಿದಾಗ ನೋವು ನಲಿವು ಪ್ರೀತಿ ಭಾಷಾಭಿಮಾನ ಇತರೆ ಅಂಶಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಂತ ವೈದ್ಯ ಡಾ. ಶಿವಕುಮಾರ್ ಮಾಲಿ ಪಾಟೀಲ್. ಪಂಪಣ್ಣ ನಾಯಕ್. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ವೆಂಕಟೇಶ್ ದರೋಜಿ ಎಸ್ ಬಿ ಹಿರೇಮಠ್ kfಮುದ್ದಾಬಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತಡವಾಗಿ ಆಗಮಿಸಿದ ಬಿಚಿ. ಬಿ ಪ್ರಾಣೇಶ್ ಹಾಸ್ಯ ಚಟಾಕಿಗಳನ್ನು ಹಾರಿಸಿದರು ತಾಲೂಕ ಅಧ್ಯಕ್ಷ ಅಶೋಕ ಗುಡಿ ಕೋಟೆ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ರುದ್ರಪ್ಪ ಭಂಡಾರಿ ಜಿಲ್ಲಾಧ್ಯಕ್ಷರು ವಹಿಸಿದ್ದರು ದಿವ್ಯ ಸಾನಿಧ್ಯವನ್ನು ಅರಳಿಹಳ್ಳಿ ಶರಣಬಸವ ದೇವರು ಮಹಾಸ್ವಾಮಿಗಳು ವಹಿಸಿದ್ದರು…

ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು
Influential people who set out to build an unauthorized church overnight

ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು

ಕಾಮಗಾರಿ ತಡೆದು ನೋಟಿಸ್ ನೀಡಿದ ಗ್ರಾಮಪಂಚಾಯತ್ ಪಿಡಿಓ

ಗಂಗಾವತಿ ; ತಾಲೂಕಿನ ಮರಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರಗತಿನಗರ ಗ್ರಾಮದ 4 ನೇ ವಾರ್ಡಿನಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲು ಮಹಿಳೆ ಸೇರಿದಂತೆ ಕೆಲ ಜನ್ರು ಮುಂದಾದ ಘಟನೆ ಕಳೆದ ಎರಡನೇ ತಾರೀಖನಂದು ನಡೆದಿದೆ.
ಅನಧಿಕೃತ ಚರ್ಚ್ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಒತ್ತಡಡ ಮತಾಂತರ ಬಗ್ಗೆ ಪ್ರಗತಿನಗರ ಗ್ರಾಮದ ಜನ್ರು ಲಿಖಿತ ರೂಪದಲ್ಲಿ ಗ್ರಾಮಪಂಚಾಯತ್ , ತಾಲೂಕ ಪಂಚಾಯತ, ತಹಶಿಲ್ದಾರ್ ಕಚೇರಿಗೆ ಪತ್ರ ಬರೆದು ತಕ್ಷಣವೇ ಚರ್ಚ್ ನಿರ್ಮಾಣ ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ.

ಪ್ರಗತಿನಗರ ಗ್ರಾಮದ ಎಂ.ಸುಶೀಲಾ ಕೃಷ್ಣರಾವ್ ಎನ್ನುವವರು ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಪಡೆಯದೇ ಈ ಮಹಿಳೆ ಕೆಲ ಪ್ರಭಾವಿಗಳ ಕರೆತಂದು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇನ್ನೂ ಯಾವುದೇ ಪರವಾನಿಗೆ ಪಡೆಯದೇ ಡಿಜೆ ಸೌಂಡ್ ಸಿಸ್ಟಮ್ ಬಳಸಿ ಹಾಡು ಹಾಕುವುದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾಮಗಾರಿ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

ಈ ಎಲ್ಲಾ ಚಟುವಟಿಕೆಗಳು ಸ್ಥಳೀಯವಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದ್ದು, ಅನಧಿಕೃತ ಚರ್ಚ್ ಕಾಮಗಾರಿ ನಿಲ್ಲಿಸುವಂತೆ ಹಾಗೂ ನಮ್ಮಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಮತಾಂತರವನ್ನು ತಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇಷ್ಟಾದ್ರೂ ಅನಧಿಕೃತ ಚರ್ಚ್ ನಿರ್ಮಾಣಕ್ಕೆ ರಾಜಕೀಯ ವ್ಯಕ್ತಿಗಳ ಸಪೋರ್ಟ್ ಇದೆ.

ನಾನು ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡ್ತೇನೆ ಎಂದು ರಾತ್ರೋರಾತ್ರಿ ಕಳೆದ ಮಾರ್ಚ್ ಎರಡರಂದು ಹೊರ ಜಿಲ್ಲೆಯ ಜನ್ರನ್ನು ಕರೆತಂದು ಈ ಮಹಿಳೆ ಕಾಮಗಾರಿ ಮುಗಿಸಲು ಮುಂದಾಗಿದ್ರು. ಇದನ್ನು ಮನಗಂಡ ಗ್ರಾಮಸ್ಥರು ತಹಶಿಲ್ದಾರ್, ತಾಲೂಕಪಂಚಾಯತ್ ಇಓ, ಪಿಡಿಓಗೆ ಕರೆ ಮಾಡಿ ಕಾಮಗಾರಿ ನಿಲ್ಲಿಸಿ ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ರು. ಇದನ್ನು ಅರಿತ ಪಿಡಿಓ ಇದೀಗ ಕಾಮಗಾರಿ ನಿಲ್ಲಿಸಿ ಕಾನೂನು ಪರಿಪಾಲನೆ ಮಾಡಿದ್ದಾರೆ.

         __________________

ಕಾಮಗಾರಿ ನಿಲ್ಲಿಸಿದ ಬಳಿಕ ಮತ್ತೆ ಪ್ರಭಾವ ಬೀರಿ ಆ ಮಹಿಳೆ ಚರ್ಚ್ ನಿರ್ಮಾಣ ಮಾಡಲು ಸಚಿವರ ಹೆಸರು ಬಳಸಿಕೊಂಡು ಕೆಲ‌ ಮುಖಂಡರಿಂದ ಕಾಮಗಾರಿ ಪ್ರಾರಂಭಿಸೋಕೆ ಸಿದ್ದತೆ ಮಾಡಿಕೊಂಡಿದ್ದಾಳಂತೆ. ಇದ್ರಿಂದ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದು, ಸಚಿವರು ಈ ರೀತಿ ಅನಧಿಕೃತ ಕಾರ್ಯಕ್ಕೆ ಒಪ್ಪಿಗೆ ನಿಡೋದಿಲ್ಲ. ನೀನು ಸಚಿವರ ಹೆಸರು ಹೇಳಿ, ಸಚಿವರ ಹೆಸರು ಬಳಕೆ ಮಾಡಿಕೊಳ್ಳಬೇಡ.. ಇದನ್ನು ನಾವೇ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ

             _________   _________

ಎಮ್ ಸುಶೀಲಾ ಕೃಷ್ಣರಾವ್ ಅವರ ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಚರ್ಚ್ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ‌. ವಸತಿ ಉದ್ದೇಶದ ನಿವೇಶನದಲ್ಲಿ ಚರ್ಚ್ ಮಾಡಲು ಬರೋದಿಲ್ಲ. ಇದರ ಪರವಾನಿಗೆ ನೀಡೋದು ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರ್ ಗೆ ಇರುತ್ತದೆ .ನಾವು ಈಗಾಗಲೇ ಕಾಮಗಾರಿ ಸ್ಥಗಿತಕ್ಕೆ ನೋಟೀಸ್ ನೀಡಿದ್ದೇವೆ. ಕಾಮಗಾರಿ ಪ್ರಾರಂಭಿಸಿದ್ರೆ, ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು

ಬಸವರಾಜ ,ಪಿಡಿಓ ಮರಳಿ ಗ್ರಾಮಪಂಚಾಯತ್