ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ

screenshot 2026 02 05 19 38 38 68 e307a3f9df9f380ebaf106e1dc980bb6.jpg
ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ
Koppal DCPU: Appeal to find missing boys

ಕೊಪ್ಪಳ ಫೆಬ್ರವರಿ 05, (ಕರ್ನಾಟಕ ವಾರ್ತೆ): ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರಡಿಯಲ್ಲಿ ನೋಂದಾಯಿತವಾಗಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ವಾರಿ ಚಾಪೆಲ್‌ನ ನಂಬಿಕೆ ಮನೆಯಲ್ಲಿ ಆಶ್ರಯ ಪಡೆದಿದ್ದ ದಿನೇಶ(17 ವರ್ಷ 1 ತಿಂಗಳು) ಹಾಗೂ ಕುಮಾರಸ್ವಾಮಿ(16 ವರ್ಷ 7 ತಿಂಗಳು) ಎಂಬ ಇಬ್ಬರು ಬಾಲಕರು ಜನವರಿ 8 ರಂದು ಬೆಳಿಗ್ಗೆ 9.45 ಗಂಟೆಯಿAದ ನಾಪತ್ತೆಯಾಗಿದ್ದು, ಬಾಲಕರನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 04/2026, ಭಾರತೀಯ ನ್ಯಾಯ ಸಂಹಿತೆ ಕಲಂ 137(2) ಅಡಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ಬಾಲಕರ ಚಹರೆ ವಿವರ:
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊರೆಬಾಳದ ದಿನೇಶ ತಂದೆ ನಿಂಗಪ್ಪ ಎಂಬ 17 ವರ್ಷದ ಬಾಲಕ 158 ಸೆಂಟಿ ಮೀಟರ್ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ಕಡು ಗ್ರೇ ಬಣ್ಣದ ಸ್ವೆಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು. ಯಲಬುರ್ಗಾ ತಾಲ್ಲೂಕಿನ ಮಾರನಾಳ ಗ್ರಾಮದ ಕುಮಾರಸ್ವಾಮಿ ತಂ.ಯಮನೂರಪ್ಪ ಎಂಬ ವರ್ಷದ ಬಾಲಕ 167 ಸೆಂಟಿ ಮೀಟರ್ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಧರಿಸಿದ್ದನು.
ಮೇಲ್ಕಂಡ ಚಹರೆಯ ಬಾಲಕರ ಬಗ್ಗೆ ಯಾರಿಗಾದರೂ ಮಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.ಸಂ: 08539-221233, ಪಿ.ಐ: 8073476715, ತನಿಖಾಧಿಕಾರಿ ಸೂರ್ಯಕಾಂತ, ಎ.ಎಸ್.ಐ: 97438421109, ಕೊಪ್ಪಳ ಕಂಟ್ರೋಲ್ ರೂಂ.: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

Leave a Reply

Your email address will not be published. Required fields are marked *