ಹಿರೇಬೆಣಕಲ್ ಅಭಿವೃದ್ಧಿಗೆ ಸಾಕ್ಷಾತ್ ಶಿವನ ಮೊರೆ: ಮಂಜುನಾಥ ಗುಡ್ಲಾನೂರ್ ಅವರ ಮೌನ ಧ್ಯಾನದ ಸಂಕಲ್ಪ

screenshot 2026 02 04 18 30 33 94 7352322957d4404136654ef4adb64504.jpg

ಹಿರೇಬೆಣಕಲ್ ಅಭಿವೃದ್ಧಿಗೆ ಸಾಕ್ಷಾತ್ ಶಿವನ ಮೊರೆ: ಮಂಜುನಾಥ ಗುಡ್ಲಾನೂರ್ ಅವರ ಮೌನ ಧ್ಯಾನದ ಸಂಕಲ್ಪ

ಜಾಹೀರಾತು
A true prayer to Lord Shiva for the development of Hirebenakal: Manjunatha Gudlanur's silent meditation resolution

ಗಂಗಾವತಿ ತಾಲೂಕಿನ ಪ್ರಾಗೈತಿಹಾಸಿಕ ಹಿರೇಬೆಣಕಲ್ ನೆಲೆ ಈಗ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಆದರೆ, ಈ ಐತಿಹಾಸಿಕ ಸ್ಥಳದ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ದಶಕಗಳಿಂದ ನಿಸ್ವಾರ್ಥ ಸೇವಕನಂತೆ ಸೇವೆಸ್ಸಲ್ಲಿಸುತ್ತಿರುವವರು ಮಂಜುನಾಥ ಗುಡ್ಲಾನೂರರು ಒಬ್ಬರು
ಡಾ. ಶರಣಬಸಪ್ಪ ಕೊಲ್ಕರ್ ಅವರ ನಂತರ, ಸೇವಕರಾಗಿ ಹಿರೇಬೆಣಕಲ್ಗೆ ಸೇವೆ ಸಲ್ಲಿಸಿದವರು ಇವರೇ. ಈ ನೆಲೆಯನ್ನು ಪರಿಚಯಿಸಲು, ಸಂಶೋಧಕರನ್ನೂ, ವಿದ್ಯಾರ್ಥಿಗಳನ್ನೂ, ಮಠಾಧೀಶರನ್ನೂ ಕರೆತಂದು ತೋರಿಸಿದವರು. ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಪ್ರಚಾರ ಮಾಡಿದವರು. ಇಂದಿಗೂ ಅವರ ಉಸಿರು, ಈ ನೆಲೆಯ ಗುಂಗಿನಲ್ಲೇ ಸಾಗುತ್ತಿದೆ; ಅವರ ಆಲೋಚನೆ, ಅದರ ಅಭಿವೃದ್ಧಿಯ ಕೂಗಿನಲ್ಲೇ ಮಗ್ನವಾಗಿದೆ.

ಇದು ಕೇವಲ ಅಭಿಮಾನವಲ್ಲ, ಒಂದು ಆತ್ಮೀಯ ಪ್ರೇಮ. ‘ಹಿರೇಬೆಣಕಲ್’ ಎನ್ನುವಾಗಲೇ ಅವರ ಹೃದಯ ಬಡಿಯುತ್ತದೆ. ಅದರ ರಕ್ಷಣೆ, ಪ್ರವಾಸಿಗರ ಆಗಮನ – ಇದೇ ಅವರ ಜೀವನದ ಸಂಕಲ್ಪ. ದೀರ್ಘಕಾಲದ ಸೇವೆಯ ನಡುವೆ, ರಾಜಕಾರಣಿಗಳು, ಸಚಿವರು, ಶಾಸಕರು, ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳ ಎದುರು ಅವರು ಅನೇಕ ಬಾರಿ ಮನವಿ ಸಲ್ಲಿಸಿದರು, ವಿನಂತಿಸಿದರು. ಆದರೆ, ‘ಈವರೆಗೂ ಒಂದು ಕೆಲಸವಾಗಿಲ್ಲ’ ಎಂಬ ನೋವು-ನಿರಾಶೆ ಅವರನ್ನು ಕಾಡುತ್ತಿದೆ.

ಆದ್ದರಿಂದ, ಅವರು ಈಗ ಮೊರೆ ಹೋಗಲು ನಿರ್ಧರಿಸಿದ್ದು, ಯಾವ ಅಧಿಕಾರಿ ಅಥವಾ ರಾಜಕಾರಣಿಯನ್ನ ಲ್ಲ… ಮೊರೆ ಹೋಗಿರುವುದು ಸಾಕ್ಷಾತ್ ಮಹಾಪಶುಪತಿ ನಾಥನಿಗೆ, ಅಂದರೆ ಶಿವನಿಗೆ!

ಕಾರಣ? ಈ ಶಿಲಾಯುಗದ ನೆಲೆಯಲ್ಲಿ ಆದಿಮಾನವರ ನಾಗರಿಕತೆ ಬೆಳವಣಿಗೆಗೆ, ಕಬ್ಬಿಣದ ಶೋಧನೆಗೆ, ಕಲಾ-ಸಂಸ್ಕೃತಿಯ ಅಭಿವ್ಯಕ್ತಿಗೆ, ಗುಹಾ ಚಿತ್ರಗಳಿಗೆ, ಆಧ್ಯಾತ್ಮಿಕ ಚೇತನವೊಂದರ ಆಶೀರ್ವಾದ ಇರಲೇಬೇಕು ಎಂಬುದು ಅವರ ದೃಢ ವಿಶ್ವಾಸ. ‘ದೇವನೊಬ್ಬ, ನಾಮ ಹಲವು’ ಎಂಬಂತೆ, ಯಾರೇ ದೇವತೆಯನ್ನು ಸ್ಮರಿಸಿದರೂ, ಆ ಅನಾದಿ ಶಕ್ತಿಯೇ ಇಲ್ಲಿ ನೆಲೆಸಿದೆ ಎಂದು ನಂಬುತ್ತಾರೆ.

ಹಿರೇಬೆಣಕಲ್ ನೆಲೆಯ ಕೆಳಭಾಗದಲ್ಲಿ
ಮೌನ ಧ್ಯಾನದ ಸಂಕಲ್ಪ:

ಈ ಭಕ್ತಿ-ನಂಬಿಕೆಯಿಂದ, ಮಂಜುನಾಥ ಗುಡ್ಲಾನೂರ್ ಸಾಕ್ಷಾತ್ ಪರಮಾತ್ಮನ ಆಶೀರ್ವಾದ ಕೋರಿ ಮೂರು ದಿನಗಳ ಮೌನ ಧ್ಯಾನ ವ್ರತ ಕೈಗೊಳ್ಳಲಿದ್ದಾರೆ. ಈ ಧ್ಯಾನದ ಉದ್ದೇಶಗಳು:

1. ಈ ಪ್ರಾಗೈತಿಹಾಸಿಕ ನೆಲೆ ಸಂರಕ್ಷಿತ ಮತ್ತು ಸುರಕ್ಷಿತವಾಗಲಿ.
2. ಇಲ್ಲಿಗೆ ಬರುವ ಪ್ರವಾಸಿಗರು, ಚಾರಣಿಗರು ಸುರಕ್ಷಿತ ಮತ್ತು ಸಂತೋಷದ ಅನುಭವ ಪಡೆಯಲಿ.
3. ಸುರಕ್ಷಿತ ದಾರಿಗಳು ಮತ್ತು ಇತರ ಅವಶ್ಯಕ ಸೌಕರ್ಯಗಳ ಅಭಿವೃದ್ಧಿಗೆ ದಾರಿ ಮಾಡಿಕೊಡಲಿ.
4. ನೆಲೆಯಲ್ಲಿ ಸಂಶೋಧನೆ ಪ್ರಾರಂಭವಾಗಲಿ
5. ವಾಹನ ನಿಲುಗಡೆ, ಸುಂದರ ಪಾರ್ಕ್ ನಿರ್ಮಾಣ ವಾಗಲಿ
6. ಆದಿಮಾನವ ಸಂಕಿರಣ ಪ್ರಾರಂಭಿಸಲಿ
ಸಾರ್ವಜನಿಕ ಆಹ್ವಾನ: ಹಿರೇಬೆಣಕಲ್, ಚಿಕ್ಕಬೆಣಕಲ್, ಮುಕ್ಕುಂಬಿ, ಬಸಾಪಟ್ಟಣ, ಎಡಹಳ್ಳಿ ಹಾಗೂ ತಾಲೂಕಿನ, ಜಿಲ್ಲೆಯ, ರಾಜ್ಯದ ಮತ್ತು ದೇಶ-ವಿದೇಶಗಳಲ್ಲಿರುವ ಎಲ್ಲಾ ಅಭಿಮಾನಿಗಳನ್ನು ಗುಡ್ಲಾನೂರ ಆಹ್ವಾನಿಸಿದ್ದಾರೆ. ಈ ಮೂರು ದಿನಗಳ ಮೌನ ಧ್ಯಾನದಲ್ಲಿ ಭಾಗವಹಿಸಿ, ಸಾಕ್ಷಾತ್ ಪರಮಾತ್ಮನ ಕೃಪೆಗೆ ಪಾತ್ರರಾಗಿ, ಹಿರೇಬೆಣಕಲ್ ನೆಲೆಯ ಪ್ರಗತಿ ಮತ್ತು ಸಂರಕ್ಷಣೆಗೆ ಒಂದಾಗಿ ಆಶೀರ್ವಾದ ಬೇಡುವಂತೆ ಕೋರಿದ್ದಾರೆ.
ಇದು ಕೇವಲ ಒಬ್ಬ ವ್ಯಕ್ತಿಯ ವ್ರತವಲ್ಲ; ಒಂದು ಇಡೀ ಸಮುದಾಯದ, ಒಂದು ಇತಿಹಾಸದ, ಮತ್ತು ಒಂದು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ನಡೆಸಲಾಗುವ ಆಧ್ಯಾತ್ಮಿಕ ಯಾತ್ರೆಯಾಗಿದೆ.

Leave a Reply

Your email address will not be published. Required fields are marked *