ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಅಪ್ರತಿಮ ನಾಯಕ ಮಾಜಿ ಸಂಸದ ಹೆಚ್.ಜಿ.ರಾಮುಲು ರವರ ಪುತ್ರ ಸರಳತೆಯ ಸಕಾರ ಮೂರ್ತಿ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ್ ಇವರಿಗೆ ಜನೆವರಿ ೨೯ ಗುರುವಾರ ಬೆಳಗ್ಗೆ ೧೦.೩೦ಕ್ಕೆ ನಗರದ ರಾಯಚೂರು ರಸ್ತೆಯ ಶ್ರೀ ಇಂಟರ್ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ಅಭಿಮಾನಿಗಳು ಅದ್ಧೂರಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಆಗಮಿಸಿ ಯಶಸ್ವಿಗೊಳಿಸಲು ಸಂಘಟಕರು ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಸರ್ವ ಸಮಾಜದ ಮಠಾಧೀಶರು, ಗಣ್ಯರು, ಮಾಜಿ ಸಚಿವರು, ಹಾಲಿ ಸಚಿವರು, ಶಾಸಕರು ಮಾಜಿ ಶಾಸಕರು ವರ್ತಕರು, ವಿವಿಧ ಸಂಘಟನಗಳು ಮುಖಂಡರು, ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ೧೦.೩೦ಕ್ಕೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು, ೧೧.೦೦ ಗಂಟೆಗೆ ನಾಗರೀಕರಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ ನಂತರ ಮಧ್ಯಾಹ್ನ ೧೨.೦೫ಕ್ಕೆ ಮಠಾಧೀರಿಂದ ಆಶೀರ್ವಚನ, ಗಣ್ಯರಿಂದ ಅಭಿನಂದನಾ ನುಡಿ ಜರುಗತ್ತಿದ್ದು ಮಧ್ಯಾಹ್ನ ೧ ಗಂಟೆಗೆ ಭೋಜನಾ ವ್ಯವಸ್ಥೆ ಏರ್ಪಡಿಸಲಾಗಿದೆ.
ಕೊಲೆ ಆರೋಪಿ ಅಮುಲ್ ರಾಜ್ ನಿಗೆ ಜೀವವಧಿ ಶಿಕ್ಷೆ ಪ್ರಕಟಿಸಿದ ಕೊಳ್ಳೆಗಾಲದ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಲಯ .
The Kollegala Apar District and Sessions Court has sentenced murder accused Amul Raj to life imprisonment
ವರದಿ: ಬಂಗಾರಪ್ಪ .ಸಿ . ಹನೂರು :ಪತ್ರಸಂಖ್ಯೆ:-ಸಅ:ಅಜಿಸನ್ಯಾ:ಶಿಕ್ಷೆ:02/2026 ಸರ್ಕಾರಿ ಅಭಿಯೋಜಕರ ಕಚೇರಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಳ್ಳೇಗಾಲ,ದಿನಾಂಕ:27/1/2026 ವಿಷಯ:- ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿ ಅಮಲ್‌ರಾಜ್ ಬಿನ್ ಥೋಮಸ್: ಕಲಂ: 103(1) 238 ಬಿ.ಎನ್.ಎಸ್. ಅಪರಾಧಕ್ಕೆ ಶಿಕ್ಷೆ ವಿಧಿಸಿರುವ ಬಗ್ಗೆ ದೈನಂದಿನ ಪತ್ರಿಕೆಗಳಲ್ಲಿ ವರದಿ ಪ್ರಕಟಿಸುವ ಬಗ್ಗೆ,
5:2:23/12/202450 ಸಂಜೆ 5ರ ಸಮಯದಲ್ಲಿ ಶೋಭರನ್ನು ಮದ್ಯಪಾನ ಮಾಡಲು,ಹಣವನ್ನು ಕೇಳಿದಕ್ಕೆ ಶೋಭ ಹಣ ಕೊಡದೆ ಇದ್ದ ವಿಚಾರದಲ್ಲಿ ಗಲಾಟೆ ಮಾಡಿ, ಶೋಭಳನ್ನು ತನ್ನ ಮನೆಯೊಳಗೆ ಎಳೆದುಕೊಂಡು ಹೋಗಿ, ಮನೆಯ ಬಾಗಿಲನ್ನು ಹಾಕಿಕೊಂಡು ಶೋಭರವರನ್ನು ಹೊಡೆದು ನೋವುಂಟು ಮಾಡಿದಾಗ ರಾತ್ರಿ 9 ಗಂಟೆ ಸಮಯದಲ್ಲಿ ಪೋಲಿಸ್ ಕಂಪ್ಲೇಟ್ ಕೊಡುತ್ತೇನೆಂದು ಶಿವುರವರ ಜಮಿನಿನ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಅಮಲ್‌ರಾಜ್ ಒಂದು ದೊಣ್ಣೆಯನ್ನು ತೆಗೆದುಕೊಂಡು ಶೋಭರವರನ್ನು ಕೊಲೆ ಮಾಡುವ ಉದ್ದೇಶದಿಂದ ದೊಣ್ಣೆಯಿಂದ ಹೊಡೆದು ಶೋಭರವರ ಎಡಮುಂಗೈ ಮುರಿದು ಅವಳ ಹಿಂದೆ ಓಡಿಹೋಗಿ ಕೆಳಕ್ಕೆ ಬೀಳಿಸಿ ಹೊಡೆದು ನೋವುಂಟು ಮಾಡಿ, ತನ್ನ ಕೈಗಳಿಂದ ಶೋಭರವರ ಕುತ್ತಿಗೆಯನ್ನು ಇಸುಕಿ ದೊಣ್ಣೆಯಿಂದ ಮನಬಂದಂತೆ ಹೊಡೆದು ಕೋಲ್ಲಲಾಗಿದೆ, ಸ್ಥಳದಲ್ಲಿಯೇ ಕೊಲೆ ಮಾಡಿ ಸಾಕ್ಷ್ಯ ನಾಶಮಾಡುವ ಸಲುವಾಗಿ ಹೊಡೆದ ದೊಣ್ಣೆಯನ್ನು ಮುಳ್ಳಿನ ಪೊದೆಯಲ್ಲಿ ಆಡಗಿಸಿಟ್ಟು ಕೊಲೆ ಮಾಡಿರುವುದು ದೃಡಪಟ್ಟ ಮೇರೆಗೆ ಈ ಬಗ್ಗೆ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ.
ಮಾನ್ಯ ನ್ಯಾಯಾಲಯಕ್ಕೆ 103(1) 238 ಬಿ.ಎನ್. ಎಸ್. ಮೊ.ನಂ.215/2024 ರಂತೆ ಪ್ರಕರಣ ದಾಖಲಿಸಿಕೊಂಡು ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ತನಿಖಾಧಿಕಾರಿ ಶ್ರೀ ಪಿ.ಎನ್. ಶೇಷಾದ್ರಿ ಪಿ.ಐ ರಾಮಾಪುರ ಪೋಲಿಸ್ ಠಾಣೆರವರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದ್ದು, ಅದರಂತೆ ವಿಚಾರಣೆ ನಡೆಸಿ, ಮಾನ್ಯ ನ್ಯಾಯಾಲಯವು ಈ ಪ್ರಕರಣದಲ್ಲಿ ಅಮಲ್‌ರಾಜ್ :27/1/2026 0 800: 103(1) 238, ಹತ್ತು ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.
ಮಾನ್ಯ ನ್ಯಾಯಾಧೀಶರಾದ ಶ್ರೀ. ಟಿ.ಸಿ ಶ್ರೀಕಾಂತ್ ರವರು ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಕೊಳ್ಳೇಗಾಲ ಇವರು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದು, ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ. ಸಿ.ಬಿ ಗಿರೀಶ್ ರವರು ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಸಲುವಾಗಿ ಈ ಮಾಹಿತಿಯನ್ನು ಉಚಿತವಾಗಿ ದೈನಂದಿನ ಪತ್ರಿಕೆಗಳಲ್ಲಿ ಸರ್ಕಾರದ ವತಿಯಿಂದ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ತಮ್ಮನ್ನು ಕೋರಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಗೀರಿಶ್ ವಾದ ಮಂಡಿಸಿ ತಿಳಿಸಿರುತ್ತಾರೆ .
ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ: ಸಮಾಜಮುಖಿ ಕಾರ್ಯಗಳ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಸಿದ್ಧರಾಮೇಶ್ವರರು- ಅರವಿಂದ ವಡ್ಡರ್
Shri Shivayogi Siddarameshwar Jayanti: Siddarameshwar became a Kayaka Yogi through his social work - Arvind Vadder
ಕೊಪ್ಪಳ ಜನವರಿ 27 (ಕರ್ನಾಟಕ ವಾರ್ತೆ): ಸಮಾಜ ಸುಧಾರಣೆಯ ಜೊತೆಗೆ ಸಮಾಜ ಮುಖಿ ಕಾರ್ಯಗಳನ್ನು ಮಾಡುವುದರ ಮೂಲಕ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮೇಶ್ವರರು ಎಂದು ಗಜೇಂದ್ರಗಡದ ಎಸ್.ಎಸ್.ಭೂಮರೆಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಅರವಿಂದ ಎಸ್.ವಡ್ಡರ್ ಹೇಳಿದರು. ಅವರು ಮಂಗಳವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು. 12ನೇ ಶತಮಾನಕ್ಕೂ ಪೂರ್ವದಲ್ಲಿ ಈ ನಾಡಿನಲ್ಲಿ ಮೌಢ್ಯತೆ, ರಾಜ್ಯ ಪ್ರಭುತ್ವದೊಳಗೆ ಗುಲಾಮಗಿರಿಯ ಅಟ್ಟಹಾಸ ನಡೆದಿತ್ತು. ಜಾತಿ ವ್ಯವಸ್ಥೆಯು ತುಂಬಿ ತುಳುಕಿ ಜನರು ಶೋಷಣೆಗೆ ಒಳಗಾಗಿದ್ದರು. ಇಂತಹ ಸಂದರ್ಭದಲ್ಲಿ 12ನೇ ಶತಮಾನದ ಬಸವಾದಿ ಶರಣರ ಹೋರಾಟದಿಂದ ಕಲ್ಯಾಣ ಕ್ರಾಂತಿ ಉಘಮವಾಯಿತು. ಈ ಹೋರಾಟವು ಪ್ರಪಂಚದ ಅತೀದೊಡ್ಡ ಕಲ್ಯಾಣ ಕ್ರಾಂತಿಯಾಗಿದೆ. ಸಮಾಜದ ಸುಧಾರಣೆಯ ಪ್ರತಿಫಲವಾಗಿ ವಚನ ಸಾಹಿತ್ಯ ಹುಟ್ಟಿಕೊಂಡು, ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕನ್ನು ನೀಡಿದ್ದಾರೆ. ಅಂತಹ ಮಹನೀಯರುಗಳಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ವಿಶಿಷ್ಟ ವಚನಕಾರರಾಗಿ ರೂಪುಗೊಂಡವರು ಮಹಾನ್ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಎಂದರು. ಶಿವಯೋಗಿ ಸಿದ್ಧರಾಮೇಶ್ವರರು ಪ್ರಸಿದ್ದ ಸಮಾಜ ಸೇವಕರಾಗಿದ್ದರು. ಅವರು ತಮ್ಮ ಕುಲಕಸುಬನ್ನು ನಿರ್ವಹಿಸುವ ಮೂಲಕ ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಮಾಡುವ ಕೆಲಸಗಳಲ್ಲಿ ಕೀಳರಿಮೆ ಬಿಟ್ಟು ಸ್ವಾಭಿಮಾನಿಯಾಗಿರಬೇಕು ಎಂಬುದನ್ನು ಅವರು ತಿಳಿಸಿ ಕೊಟ್ಟಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಹಾಗಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು. ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಹಾಗೂ ಇತರೆ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಶಿಕ್ಷಣವಂತರಾಗಿ, ನಮ್ಮ ಸಮುದಾಯದ ಅಬಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಪ್ರಮುಖ ವ್ಯಕ್ತಿಗಳಾಗಿ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಬಾಗಲಕೋಟೆ ಮತ್ತು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ಕಾಯಕ ಎಂದರೆ ದೇವರು ಅದನ್ನ ಸ್ಮರಿಸಿಕೂಂಡು ಬಂದಿರುವುದೆ ಭೊವಿ ಸಮಾಜ. ಮನೆ, ಮಠ, ಮಂದಿರ, ಮಹಲ್‌ಗಳನ್ನು ಕಟ್ಟುವ ಭೋವಿ ಸಮಾಜವು ಎಲ್ಲರ ಮನಸ್ಸನ್ನು ಕಟ್ಟಿದೆ. ಶ್ರೀ ಶಿವಯೋಗಿ ಸಿದ್ದರಾಮೇಶ್ವರರು 64 ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಶಿಕ್ಷಣವು ಸರ್ವ ಸಮಸ್ಯೆಗಳಿಗೆ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅತ್ಯವಶ್ಯವಾಗಿದೆ. ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಬಗ್ಗೆ ಅರಿತುಕೊಂಡು ಮತ್ತು ಅವರು ತೋರಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು. ಭೋವಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಸುಂಕಪ್ಪ ಮಾಲಗಿತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕರ್ಣಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪುಷ್ಪಲತಾ, ಭೋವಿ ಸಮಾಜದ ಮುಖಂಡರಾದ ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಹೆಚ್. ಅಳವಂಡಿ, ರಾಮಣ್ಣ ಪೂಜಾರ, ರಮೇಶ ಬಸಾಪಟ್ಟಣ, ರಾಮಣ್ಣ ಅಳವಂಡಿ, ಲಕ್ಷ್ಮಣ ಪೂಜಾರ, ಎಕಪ್ಪ ರ‍್ಯಾವಣಕಿ, ಪರಶುರಾಮ ಹಾಗೂ ಹಲವು ಮುಖಂಡರು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. *ಮೆರವಣಿಗೆ:* ಜಯಂತಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆಯು ಶ್ರೀ ಗವಿಸಿದ್ದೇಶ್ವರ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ಸರ್ಕಲ್ ಬಳಿಯ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಈ ಮೆರವಣಿಗೆಯಲ್ಲಿ ಕುಂಭ ಹೊತ್ತು ಮಹಿಳೆಯರು, ಭೋವಿ ಸಮಾಜದವರು ಸೇರಿದಂತೆ ಹಲವಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಪ್ರಚಾರ ಸಮಿತಿಯ ಹನೂರು ವಿಧಾನ ಸಭಾ ಕ್ಷೇತ್ರದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಶ್ರೀ ಆರ್ ಸಿದ್ದರಾಜು.
Shri R. Siddharaju has been appointed as the District Vice President of the Congress Campaign Committee for Hanur Assembly Constituency
ವರದಿ : ಬಂಗಾರಪ್ಪ .ಸಿ.
ಹನೂರು: ಚಾ.ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಿತಿಯ ರಾಜ್ಯ ಮುಖ್ಯ ಸಂಯೋಜಕರೂ ಆದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಡಾ.ಎಸ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೇಮಕಾತಿ ಸಭೆಯಲ್ಲಿ ಆರ್ ಸಿದ್ದರಾಜು ಆದ ನನ್ನನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಹನೂರು ವಿಧಾನಸಭಾ ಕ್ಷೇತ್ರದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕಾತಿ ಮಾಡಿ ಆದೇಶ ಪ್ರತಿ ನೀಡಿದರು. ಈ ಸಂಬಂದವಾಗಿ ಮಾತನಾಡಿದ ಅವರು , ಮಾಜಿ ಶಾಸಕ ಆರ್. ನರೇಂದ್ರಣ್ಣರವರ ಆರ್ಶಿವಾದದಂತೆ ನಮ್ಮಪಕ್ಷಕ್ಕಾಗಿ ಕಾಯವಾಚ ಮನಸ ದುಡಿದು ಪಕ್ಷಕ್ಕೆ ಮತ್ತು ನಮ್ಮ ಮುಖಂಡರಾದ ನರೇಂದ್ರರವರ ಕೈ ಬಲ ಪಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಇತರೆ ಹಿರಿಯ ನಾಯಕರು ಪಕ್ಷದ ಸಂಘಟನೆಯ ಕಾರ್ಯವೈಖರಿಯನ್ನು ಮೆಚ್ಚಿ ನನಗೆ ಕರ್ನಾಟಕ ಕಾಂಗ್ರೇಸ್ ಪ್ರಚಾರ ಸಮಿತಿಯ ಹನೂರು ವಿಧಾನ ಸಭಾ ಕ್ಷೇತ್ರದ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅದರಂತೆಯೇ ಎಲ್ಲರ ಸಹಕಾರ ಪಡೆದು ಪಕ್ಷದ ಕಾರ್ಯಕ್ರಮಗಳ ಪ್ರಚಾರದ ಜತೆಗೆ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಮುಂಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಎ.ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ಆರ್. ನರೇಂದ್ರ, ಶಾಸಕರುಗಳಾದ ಎಮ್ ಗಣೇಶ್ ಪ್ರಸಾದ್ ,ಪುಟ್ಟರಂಗಶೇಟ್ಟಿ , ಉದ್ಯಮಿ ಪೊನ್ನಾಚಿ ರಂಗಸ್ವಾಮಿ, ಚಾಮುಲ್ ನಂಜುಂಡಸ್ವಾಮಿ, ಹನೂರು, ರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮುಕುಂದವರ್ಮ ,ಈಶ್ಚರ್ , ಕಾಡಾ ಅಧ್ಯಕ್ಷ ಮರಿಸ್ವಾಮಿ,ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಚಂದ್ರು, ಹಾಗೂ ಇನ್ನಿತರರು ಹಾಜರಿದ್ದರು.