
ಶ್ರೀ ಸಾದ್ವಿ ಶಿರೋಮಣಿ. ತುರಡಗಿ ತಿಮ್ಮಮ್ಮನವರ. 213.ನೇ ಆರಾಧನಾ ಮಹೋತ್ಸವ.

Sri Sadvi Shiromani. Turadagi Thimmamma. 213th Aradhana Mahotsav.

ಕುಷ್ಟಗಿ… ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರು ಸೀಮಾ ವ್ಯಾಪ್ತಿಯ ಶ್ರೀ ಕ್ಷೇತ್ರ ಅಮ್ಮನ ಕಟ್ಟೆಯಲ್ಲಿ ಸೋಮವಾರದಂದು ಶ್ರೀ ಸಾದ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 213 ನೆಯ ಆರಾಧನಾ ಮಹೋತ್ಸವ ಸಹಸ್ರಾರುಸಂಖ್ಯೆಯ ಭಕ್ತಾದಿಗಳ ನಡುವೆ ಸಂಭ್ರಮದಿಂದ ಜರಗಿತು.
ಅಮ್ಮನವರ ಪತಿಯ ಊರಾದ ಹೂನೂರು ಗ್ರಾಮದಿಂದ ಅಮ್ಮನವರ ಉತ್ಸವದ ಮೂರ್ತಿಯನ್ನು ಸಕಲ ವಾದ್ಯ ವೈಭವದೊಂದಿಗೆ ಅಮ್ಮನ ಕಟ್ಟೆಗೆ ಬರಲಾಯಿತು
ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳು ಯುವಕರು ಬಾಲಕರು ಮಹಿಳೆಯರು ಪುರುಷರು ದೀಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆ ಸಮರ್ಪಿಸಿದರು.
ಹುಣಸಿಹೊಳೆ ಕಣ್ವ ಮಠದ ಪೀಠಾಧಿಕಾರಿಗಳಾದ 108 ಶ್ರೀ ವಿದ್ಯಾರಣ್ಯ ವಿರಾಜತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಸಲಾಯಿತು.. ಅಮ್ಮನವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಮತ್ತೆ ಇತರ ಪೂಜಾ ಕಾರ್ಯಕ್ರಮಗಳು ಜರುಗಿತು. ಜವಳ ಉಪನಯನ. ಸನ್ಮಾನ ಕ್ಯಾಲೆಂಡರ್ ಬಿಡುಗಡೆ ಮುದ್ರಾ ಧಾರಣೆ ಹಾಗೂ ಆಶೀರ್ವಚನ ಭಾಷಣ ಪೀಠಾಧಿಕಾರಿಗಳು ನೆರೆವೇರಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ವಿಧಾನಪರಿಷತ್ ಸದಸ್ಯ ಅಂದಾನಪ್ಪ ಪಾಟೀಲ್ ಭಾಗವಹಿಸಿದ್ದರು




