Breaking News
ಮುಸ್ಟೂರು ನ ಹೆಬ್ಬಾಳ ಗ್ರಾಮದಲ್ಲಿ  ನಾಗರಿಕರಿಗೆ ಆನೆಕಾಲು ಮತ್ತು ಮಲೇರಿಯಾ ರೋಗ ಪತ್ತೆ ಹಚ್ಚುವ ರಾತ್ರಿ ರಕ್ತ ಲೇಪನ ಕಾರ್ಯಕ್ರಮ  ಜರುಗಿತು

ಮುಸ್ಟೂರು ನ ಹೆಬ್ಬಾಳ ಗ್ರಾಮದಲ್ಲಿ  ನಾಗರಿಕರಿಗೆ ಆನೆಕಾಲು ಮತ್ತು ಮಲೇರಿಯಾ ರೋಗ ಪತ್ತೆ ಹಚ್ಚುವ ರಾತ್ರಿ ರಕ್ತ ಲೇಪನ ಕಾರ್ಯಕ್ರಮ  ಜರುಗಿತು

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು
A night blood smear program was held to screen citizens for elephantiasis and malaria in Hebbal village of Mustur.

 

ಗಂಗಾವತಿ: ಕಾರಟಗಿ ತಾಲೂಕಿನ  ದಿ,20 /01/2026 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರು ನ ಹೆಬ್ಬಾಳ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಗ್ರಾಮದ ಎಲ್ಲ ನಾಗರಿಕರಿಗೆ ಆನೆಕಾಲು ಮತ್ತು ಮಲೇರಿಯಾ ರೋಗ ಪತ್ತೆ ಹಚ್ಚುವ ರಾತ್ರಿ ರಕ್ತ ಲೇಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸದರಿ ಕಾರ್ಯಕ್ರಮವು ರಾತ್ರಿ 9:30ಕ್ಕೆ ಪ್ರಾರಂಭಿಸಿ 11 ಗಂಟೆಯವರೆಗೂ ರಕ್ತ ಲೇಪನ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕ ಮೇಲ್ವಿಚಾರಕರಾದ ದೇವೇಂದ್ರ ಗೌಡ ಆನೆಕಾಲು ರೋಗವು ಗದ್ದೆಗಳಲ್ಲಿ ಹಾಗೂ ಚರಂಡಿಗಳಲ್ಲಿ ವಾಸ ಮಾಡುವ ಕ್ಯೂಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಮತ್ತು ಸೊಳ್ಳೆ ಕಚ್ಚುವುದರಿಂದ ಬರುವ ಖಾಯಿಲೆ ಆಗಿರುವುದರಿಂದ ಯಾರಿಗಾದರೂ ಆನೆಕಾಲು ರೋಗ ಬಂದಿರಬಹುದು ಹಾಗೂ ಹೆಬ್ಬಾಳ ಗ್ರಾಮದಲ್ಲಿ ಈಗಾಗಲೇ ಮೂರು ಪ್ರಕರಣಗಳು ಆನೇಕಲ್ ರೋಗ ದೃಢಪಟ್ಟಿರುವುದರಿಂದ ಗ್ರಾಮದ ಸುತ್ತಮುತ್ತ ಚರಂಡಿಗಳು ಮತ್ತು ಗದ್ದೆಗಳು ಆನೆಕಲ್ಲು ರೋಗ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳು ಇರುವುದರಿಂದ ಆರೋಗ್ಯ ಇಲಾಖೆಯಿಂದ ರಾತ್ರಿ ರತ್ತ ಲೇಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಮೇಲ್ವಿಚಾರಕರಾದ ದೇವೇಂದ್ರಗೌಡ ಅವರು ಮಾಹಿತಿ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಾಫರ್ ಮಾತನಾಡಿ ಮನುಷ್ಯ ನಿದ್ರಾ ಅವಸ್ಥೆ ತಲುಪಿದಾಗ ದೇಹದಲ್ಲಿರುವ ರೋಗಾಣು ರಕ್ತನಾಳದಲ್ಲಿ ಎಚ್ಚರಗೊಳ್ಳುವುದರಿಂದ ಅಂದರೆ ರಾತ್ರಿ 9:00 ಮೇಲೆ ಮಾತ್ರ ಆನೆಕಲ್ಲು ರೋಗ ಪತ್ತೆಹಚ್ಚಲು ಜನರ ರಕ್ತಸಂಗ್ರಹ ಮಾಡಬೇಕಾಗಿರುವುದರಿಂದ ಸದ್ರಿ ಕಾರ್ಯಕ್ರಮ ಕೇವಲ ರಾತ್ರಿ ಹೊತ್ತು ಮಾತ್ರ ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ್ ಹಿರೇಮಠ ಮಾತನಾಡಿ ಆನೆಕಾಲು ರೋಗ ಹರಡುವಿಕೆ ತಡೆಗಟ್ಟುವ ವಿಧಾನ ಆನೆಕಲ್ಲು ರೋಗ ರಕ್ತಲೇಪನ ಸಂಗ್ರಹ ಕಾರ್ಯಕ್ರಮದ ಉದ್ದೇಶ ಹಾಗೂ ರೋಗ ನಿಯಂತ್ರಣದಲ್ಲಿ ಜನಸಾಮಾನ್ಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಹೆಬ್ಬಾಳ ಗ್ರಾಮದಿಂದ ಈಗಾಗಲೇ ವರದಿಯಾದ ಆನೇಕಲ್ ರೋಗ ಪ್ರಕರಣಗಳಿಗೆ ಮನೆ ಭೇಟಿಕೊಟ್ಟು ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಕಾರ್ಯಾಲಯದಿಂದ ಆನೆಕಾಲ ರೋಗ ತಡೆಗಟ್ಟುವ morbidity management kit ವಿತರಿಸಲಾಯಿತು ಹಾಗೂ ಬಳಸುವ ವಿಧಾನಗಳನ್ನು ಸಹ ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಯೋಗಶಾಲ ಅಧಿಕಾರಿಗಳಾದ ಇನಯತ್ ಭಾಷಾ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಆದ ಬಸಮ್ಮ, ಮಂಜುಳಾ k, ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಪಂಪಾಪತಿ, ರಮ್ಯಾ, ಜ್ಯೋತಿ, ಆಶಾ ಕಾರ್ಯಕರ್ತರಾದ ದುರ್ಗಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನರಿಗೆ ಆರೋಗ್ಯ ಶಿಕ್ಷಣ ನೀಡಿ 121 ಜನರಿಗೆ ರಕ್ತ ಲೇಪನ ಪರೀಕ್ಷೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು..

Leave a Reply

Your email address will not be published. Required fields are marked *