ಕೊಪ್ಪಳ ಜನವರಿ 21 (ಕರ್ನಾಟಕ ವಾರ್ತೆ): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ 1ಎಂ1ಬಿ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ ತಳಕಲ್‌ನಲ್ಲಿರುವ ವಿಟಿಯು ಸ್ನಾತಕೋತ್ತರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜನವರಿ 25 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಮೇಳದಲ್ಲಿ 30 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 10ನೇ ತರಗತಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಉದ್ಯೋಗಮೇಳದ ನೇರ ಸಂದರ್ಶನದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದು. ಆಸಕ್ತರು ಜನವರಿ 23, 24 ರಂದು ಪೂರ್ವ ನೋಂದಣಿ ಮಾಡಿಕೊಳ್ಳಬಹುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಕ್ರೀಡಾ ಇಲಾಖೆ: ಜಿಮ್ ಫಿಟ್ನೆಸ್ ತರಬೇತಿ ಶಿಬಿರಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ
Sports Department: Applications invited from interested parties for gym fitness training camp
ಕೊಪ್ಪಳ ಜನವರಿ 21 (ಕರ್ನಾಟಕ ವಾರ್ತೆ): 2025-26ನೇ ಸಾಲಿನಲ್ಲಿ ಯುವಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ಆಸಕ್ತ ಯುವಜನರು ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜನವರಿ 27 ರೊಳಗಾಗಿ ಕಚೇರಿ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಹಾಗೂ ನಂತರ ಬಂದಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ತರಬೇತಿ ಶಿಬಿರವು 45 ದಿನಗಳ ಅವಧಿಯದ್ದಾಗಿದ್ದು, ಫೆಬ್ರವರಿ 1 ರಿಂದ ಮಾರ್ಚ್ 17 ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿಯನ್ನು ನೀಡಲಾಗುವುದು. ತರಬೇತಿ ಶಿಬಿರದಲ್ಲಿ 30 ಶಿಬಿರಾರ್ಥಿಗಳಿಗೆ ಸೀಮಿತಗೊಳಿಸಬೇಕಾಗಿರುವುದರಿಂದ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಶಿಬಿರದಲ್ಲಿ ಹಾಜರಾಗುವ ಯುವಜನರಿಗೆ ಉಟೋಪಹಾರ, ಪ್ರಮಾಣ ಪತ್ರ ಹಾಗೂ ಹೊರ ಜಿಲ್ಲೆಗಳಿಂದ ಭಾಗವಹಿಸುವ ಯುವಜನರಿಗೆ ಸಾಮಾನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಅರ್ಜಿದಾರರು ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, 18 ರಿಂದ 35 ವರ್ಷದೊಳಗಿರಬೇಕು. ದೈಹಿಕವಾಗಿ ಸದೃಢವಾಗಿರಬೇಕು. ಕರ್ನಾಟಕ ರಾಜ್ಯದವರಾಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಕಡ್ಡಾಯವಾಗಿ ಆರ್.ಡಿ. ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸಿರಬೇಕು. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ಪ್ರತಿಯನ್ನು ಲಗತ್ತಿಸಬೇಕು. ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಶಿಸ್ತು ಹಾಗೂ ಸಂಯಮದಿAದ ವರ್ತಿಸಬೇಕು. ಅನುಚಿತವಾಗಿ ವರ್ತಿಸಿದಲ್ಲಿ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವಜನರಿಗೆ ಲಘು ಉಪಹಾರ ಒದಗಿಸಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12ನೇ ಶತಮಾನದಲ್ಲಿ ಶರಣರು ಸಮ ಸಮಾಜಕ್ಕಾಗಿ ಶ್ರಮಿಸಿದ್ದರು – ಶಾಸಕ ಕೆ.ರಾಘವೇಂದ್ರ ಹಿಟ್ನಾಳ
In the 12th century, the Sharanas worked for an equal society - MLA K. Raghavendra Hitnal
ಕೊಪ್ಪಳ ಜನವರಿ 21 (ಕರ್ನಾಟಕ ವಾರ್ತೆ): 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ ಆದಿಯಾಗಿ ಅಂದಿನ ಶರಣರು ಸಾಮಾಜಿಕ ಮೌಡ್ಯಗಳ ನಿರ್ಮೂಲನೆ ಮಾಡುವ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಬುಧವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಂಬಿಗರ ಚೌಡಯ್ಯನವರು ತಮ್ಮ ಕಾಯಕದ ಮೂಲಕ ನಿಜ ಶರಣರಾಗಿದ್ದರು. ಅವರು ತಮ್ಮ ವಚನಗಳ ಮೂಲಕ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಅವರ ಜಯಂತಿ ಆಚರಣೆ ಮಾಡಿದರೆ ಸಾಲದು ಅವರ ತತ್ವ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಿಳಿಯಬೇಕೆಂಬ ಉದ್ದೇಶದಿಂದಲೇ ನಮ್ಮ ಸರಕಾರ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡುತ್ತಿದೆ ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಸಿದ್ರಾಮಯ್ಯ ಸಾಹೇಬರು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಇದರಿಂದ ರಾಜ್ಯದ ಲಕ್ಷಾö್ಯಂತರ ಬಡ ಜನರಿಗೆ ಅನುಕೂಲವಾಗಿದೆ. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸಂವಿಧಾನ ಕೊಡದಿದ್ದರೆ ಇಂದು ನಾನು ಶಾಸಕನಾಗಿರುತ್ತಿರಲಿಲ್ಲ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕೆಟಗರಿಗಳು ಬಂದ ನಂತರ ನಮಗೆ ಸಮಾನ ಅವಕಾಶಗಳು ಸಿಕ್ಕವು. ಸಮಾಜದ ಅಭಿವೃದ್ಧಿಯ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು. ನಾವು ಇದೇ ಜಾತಿಯಲ್ಲಿ ಹುಟ್ಟುತ್ತೆವೆ ಎಂದು ಯಾರು ಅರ್ಜಿ ಹಾಕಿ ಹುಟ್ಟಿಲ್ಲ. ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಹುಟ್ಟು ಹಾಕಿದ್ದಾರೆ. ನಾವು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು. ಅಂಬಿಗರ ಚೌಡಯ್ಯ ಸಮುದಾಯ ಭವನಕ್ಕೆ 2 ಕೋಟಿ ಕೊಡಬೇಕೆನ್ನುವ ಸಮಾಜದ ಮುಖಂಡರ ಬೇಡಿಕೆ ಇದ್ದು, ಈಗ 50 ಲಕ್ಷ ಕೊಡುವ ಕೆಲಸ ಮಾಡುತ್ತಿದ್ದೆನೆ. ಉಳಿದ ಹಣವನ್ನು ನೀಡಲಾಗುವುದು. ತಮಗೆಲ್ಲರಿಗೂ ಅಂಬಿಗರ ಚೌಡಯ್ಯ ಜಯಂತಿ ಶುಭಾಶಯಗಳು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ವಚನಕಾರರಾಗಿದ್ದ ಅಂಬಿಗರ ಚೌಡಯ್ಯನವರು ಕಾಯಕ, ವಚನ ಮತ್ತು ದಾಸೋಹವನ್ನು ತಮ್ಮ ಜೀವನದಲ್ಲಿ ನಡೆಸಿಕೊಂಡು ಬಂದಿದ್ದರು. ಅವರು ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದರು. ಅವರ ವಚನಗಳು ಬಹಳ ಅರ್ಥಗರ್ಭಿತವಾಗಿವೆ. ಅವುಗಳನ್ನು ನಾವು ಓದಿ ತಿಳಿದುಕೊಳ್ಳಬೇಕು. ಸಮಾಜದಲ್ಲಿ ಸೌಲಭ್ಯಗಳನ್ನು ಪಡೆಯಬೇಕಾದರೆ ನಾವು ಮೊದಲು ಶಿಕ್ಷತರಾಗಬೇಕೆಂದು ಹೇಳಿದರು. ಸರಕಾರಿ ಪದವಿಪೂರ್ವ ಕಾಲೇಜು ಭಾಗ್ಯನಗರ ಇತಿಹಾಸ ಪ್ರಾಧ್ಯಾಪಕ ರಾಜಕುಮಾರ ಡಿ.ಎಸ್. ಅವರು ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂಬಿಗರ ಚೌಡಯ್ಯನವರು ತಮ್ಮ ಕಾಯಕ ನಿಷ್ಠಿಯ ಮೂಲಕ ಬಸವಣ್ಣನವರ ಪರಮ ಭಕ್ತರಾಗಿದ್ದರು. ಅವರು ಸರ್ವರ ಒಳಿತನ್ನೆ ಬಯಸಿದವರಾಗಿದ್ದರು. ಮಂಗಳೂರು ಮತ್ತು ಕಲಬುರಗಿ ವಿಶ್ವವಿದ್ಯಾಲಯಗಳಲ್ಲಿ ಅಂಬಿಗರ ಚೌಡಯ್ಯನವರ ಕುರಿತು ಅಧ್ಯಯನ ಪೀಠಗಳನ್ನೆ ತೆರೆಯಲಾಗಿದೆ. ಅವರ ವಚನಗಳು ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಹೋಗಲಾಡಿಸುತ್ತವೆ ಎಂದು ಹೇಳಿದರು. ಸಮಾಜದ ಮುಖಂಡರಾದ ರಾಜು ಕಲೆಗಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಯಂತಿ ಆಚರಣೆ ಪ್ರಯುಕ್ತ ಬುಧವಾರ ಬೆಳಿಗ್ಗೆ ಶ್ರೀ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ಕೊಪ್ಪಳ ನಗರದ ಶಿರಸಪ್ಪಯ್ಯನ ಮಠದಿಂದ ಗಡಿಯಾರ ಕಂಬದ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಮಹೇಶ ಮಾಲಗಿತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮಾಜದ ಮುಖಂಡರಾದ ಹುಲುಗಪ್ಪ ಭಾರಕೇರ್, ರಾಜು ಕಲೆಗಾರ್, ವಿರೂಪಾಕ್ಷ ಭಾರಕೇರ್, ಈರಪ್ಪ ಕರಿಗಾರ್, ರಮೇಶಪ್ಪ ಕಬ್ಬೇರ್, ಹುಲುಗಪ್ಪ ನರೇಗಲ್, ಶಿವ್ವಪ್ಪ ಕಬ್ಬೇರ್, ಉದಯ ಕಬ್ಬೇರ್, ಹನುಮಂತಪ್ಪ ಗಿಡ್ಡಾರಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹನುಮಂತಪ್ಪ ಎಲಿಗಾರ ಸೇರಿದಂತೆ ಸಮಾಜದ ಯುವಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಓಬಿಸಿ ಉಪಾಧ್ಯಕ್ಷರಾಗಿ ವರಗಳ ಶೆಟ್ಟಿ ನೇಮಕ
Varagala Shetty appointed as District Congress OBC Vice President
ವರದಿ: ಬಂಗಾರಪ್ಪ .ಸಿ ಚಾಮರಾಜನಗರ : ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ಯುತ ವರಗಳ ಶೆಟ್ಟಿಯಾದ ನಮ್ಮನ್ನು ನೇಮಕ ಮಾಡಿ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಪಕ್ಷದ ಕೊಡುಗೆ ಮತ್ತು ಸಂಘಟನೆಗಳಲ್ಲಿ ಹಿಂದುಳಿದ ವರ್ಗಗಳ ಯುವಕರು ಮತ್ತು ಮಹಿಳೆಯರನ್ನು ಸಂಘಟಿಸಿ,
ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕಕ್ಕೆ ನನ್ನನ್ನು ನೇಮಕ ಮಾಡಲು ಕಾರಣಕರ್ತರಾದ ಹನೂರು ವಿಧಾನ ಸಭಾ ಮಾಜಿ ಶಾಸಕರಾದ ಆರ್ ನರೇಂದ್ರ ,ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಚೇತನ್ ಕುಮಾರ್ ಹಾಗೂ ಪಕ್ಷದ ಎಲ್ಲಾ ಮುಖಂಡರು ಹಾಗೂ ಪದಾಧಿಕಾರಿಗಳಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ವರಗಳ ಶೆಟ್ಟಿ ತಿಳಿಸಿದರು.
Historic resolution to ban alcohol, gambling, and matka in Ulenur village villagers' meeting
‘ಗ್ರಾಮದಲ್ಲಿ ಮದ್ಯ ಮಾರಾಟ, ಇಸ್ಪೀಟು ಹಾಗೂ ಮಟ್ಕಾದಂತ ಕಾನೂನು ಬಾಹಿರ ಜೂಜು ದಂದೆಗಳು ಯಾವುದೇ ಆತಂಕವಿಲ್ಲದೆ ನಡೆಯುತ್ತಿವೆ. ಇವುಗಳನ್ನು ಕಾನೂನು ಕ್ರಮ ತೆಗೆದುಕೊಳ್ಳಲು ಊರಿನ ಹಿರಿಯರ ಮತ್ತು ಮಹಿಳೆಯರ ಆಗ್ರಹಿಸಿದರು.
ಕಾರಟಗಿ :ತಾಲೂಕಿನ ಉಳೇನೂರಿನ ಗ್ರಾಮದ ದ್ಯಾವಮ್ಮನ ದೇವಸ್ಥಾನದ ಆವರಣದಲ್ಲಿ ಬೂದಗುಂಪ ಗ್ರಾಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಅಬಕಾರಿ ಇಲಾಖೆ, ತಹಸೀಲ್ದಾರ್ ಕಾರ್ಯಲಯ ಮತ್ತು ಪೊಲೀಸ್ ಇಲಾಖೆ, ಪಂಚಾಯತ್ ಅಧಿಕಾರಿಗಳ ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಗ್ರಾಮಸ್ಥರು ಗ್ರಾಮ ಸಭೆಯನ್ನು ನಡೆಸಿದರು. ಗ್ರಾಮ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಬುದಗುಂಪ ಶಿಕ್ಷಕರಾದ ಭೀಮಣ್ಣ ಸರ್ ಮಾತನಾಡಿ, ಉಳೇನೂರು ಗ್ರಾಮವು ಕಲೆ ಮತ್ತು ಕ್ರೀಡೆಯಲ್ಲಿ ಮುಂದಿರುವ ಹಾಗೂ ಬಹಳಷ್ಟು ಜನ ಯುವಕರನ್ನು ಒಳಗೊಂಡಿರುವ ಗ್ರಾಮವಾಗಿದೆ. ಆದರೆ ಆ ಯುವಕರು ಒಂದು ಸರಿಯಾದ ದಾರಿಯಲ್ಲಿ ನಡೆಯುವಂತಹ ಕೊರತೆ ಎದ್ದು ಕಾಣುತ್ತಿದೆ. ಆದರೆ ಇಂದು ಮಧ್ಯಪಾನ ಓಸಿ, ಇಸ್ಪೆಟ್ ಅಂತಹ ದುಶ್ಚಟಗಳನ್ನು ನಿಷೇಧಿಸಿ, ವ್ಯಸನ ಮುಕ್ತ ಗ್ರಾಮ ವನ್ನಾಗಿ ಮಾಡುವಂತೆ ತೆಗೆದುಕೊಂಡಿರುವ ಈ ನಿರ್ಣಯ ಪ್ರಸಂಶನೀಯವಾಗಿದೆ ಎಂದರು.
ಅಬಕಾರಿ ಇಲಾಖೆಯ ನಿರೀಕ್ಷಕರಾದ ವಿಠಲ್ ಅವರು ಮಾತನಾಡಿ ಇಂದು ಇಲಾಖೆ ಮಾಡುವಂತಹ ಕಾರ್ಯವನ್ನ ಊರಿನ ಯುವಕರು ಮಾಡಿರುವುದು ತುಂಬಾ ಖುಷಿಯ ವಿಚಾರ ಹಾಗೆಯೇ ಗಂಗಾವತಿಯ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ಎಂಟು ಹಳ್ಳಿಗಳಲ್ಲಿ ಮದ್ಯಪಾನ ನಿಷೇಧ ಮಾಡಿ ವ್ಯಸನಮುಕ್ತ ಗ್ರಾಮಗಳಾಗಿ ಸ್ವಯಂ ಘೋಷಣೆಯಾಗಿವೆ. ಅದರಲ್ಲಿ ಉಳೆನೂರು ಗ್ರಾಮವು ಕೂಡ ಒಂದಾಗಿದೆ. ಈ ರೀತಿಯಾಗಿ ಗ್ರಾಮ ಸಭೆಯಲ್ಲಿ ಅಧಿಕಾರಿಗಳನ್ನು ಕರೆದು, ಒಂದಿಷ್ಟು ವಿಚಾರಗಳ ಚಿಂತನೆಗಳನ್ನು ನಡೆಸಿ, ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ವ್ಯಸನ ಮುಕ್ತ ಗ್ರಾಮ ವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವುದು ಮತ್ತು ಮೊದಲ ಬಾರಿಗೆ ಈ ರೀತಿಯ ಸಭೆಯಲ್ಲಿ ಭಾಗವಹಿಸಿ ಇಂತಹ ಕಾರ್ಯಕ್ರಮದಲ್ಲಿ ನಾನು ಇದರಲ್ಲಿ ಒಬ್ಬನ್ನಾಗಿ ಭಾಗವಹಿಸಿರುವುದು ಸಂತಸ ತಂದಿದೆ. ಉಳೆನೂರಿನ ಮಹಿಳೆಯರ ಈ ನೋವಿನ ಆಕ್ರಂದನದ ಮಾತನ್ನು ಕೇಳಿದರೆ, ಈ ಮಧ್ಯಪಾನ ಎಂಬುದು ಎಷ್ಟು ಕುಟುಂಬಗಳನ್ನು ಬೀದಿಪಾಲ್ ಮಾಡಿದೆ ಎಂಬುದು ಅರ್ಥವಾಗುತ್ತಿದೆ. ಹಾಗಾಗಿ ಯಾವುದೇ ರೀತಿಯ ಅಕ್ರಮವಾಗಿ ಮಧ್ಯಪಾನ ಮಾರಾಟ ಮಾಡುವಂತಹ ಸಂದರ್ಭ ಕಂಡು ಬಂದರೆ ಧೈರ್ಯವಾಗಿ ನಮಗೆ ತಿಳಿಸಿ ಇಲಾಖೆಗೆ ಸಂಪರ್ಕಿಸಿ ಕಾನೂನಿನ ಮೂಲಕ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದರು.
ಊರಿನ ಅನೇಕ ಮಹಿಳೆಯರು, ಸಂತ್ರಸ್ತೆಯರು ನಮ್ಮೂರಿನಲ್ಲಿ ಈ ಮಧ್ಯಪಾನ ನಿಷೇಧ ಆಗಲೇಬೇಕು, ಇವತ್ತು ನಮ್ಮ ಮಕ್ಕಳು ನನ್ನ ಗಂಡಂದಿರು ಕುಡಿದು ಗಲಾಟೆ ಮಾಡಿ ಎಷ್ಟೋ ಸಂಸಾರಗಳು ಹಾಳಾಗಿದ್ದಾವೆ, ಅದಕ್ಕಾಗಿ ಇವತ್ತಿನ ನಮ್ಮೂರಲ್ಲಿ ಮಧ್ಯಪಾನ ಮಾರಾಟ ನಿಷೇಧ ಆಗಲೇಬೇಕು ಈ ಗ್ರಾಮ ಸಭೆ ಮಾಡಿ ನಿರ್ಧಾರ ತೆಗೆದುಕೊಂಡು ತುಂಬಾ ಒಳ್ಳೆಯ ಕೆಲಸ ಎಂದರು. “ಉಳೇನೂರು ಗ್ರಾಮದಲ್ಲಿ ಮಧ್ಯಪಾನ, ಇಸ್ಪೀಟು ಮತ್ತು ಓ.ಸಿಯಂತಹ ದುಶ್ಚಟಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಮದ್ಯಪಾನ ಮಾರಾಟ, ಇಸ್ಪೀಟು ಮತ್ತು ಓಸಿಗಳಂತಹ ಕಾನುನು ಬಾಹಿರ ಚಟುವಟಿಕೆ, ದುಶ್ಚಟಗಳು ಹೆಚ್ಚಾಗಿವೆ. ಇತ್ತೀಚಿಗೆ ಊರಿನ ಯುವಕರು ಕುಡಿತಕ್ಕೆ ಬಲಿಯಾಗಿ ಮಾರಕವಾದ ಖಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅನೇಕ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮದ್ಯಪಾನಕ್ಕೆ ಬಲಿಯಾಗಿದ್ದಾರೆ. ಉನ್ನತ ಶಿಕ್ಷಣ, ಉನ್ನತ ಮೌಲ್ಯಗಳನ್ನು ಕಲಿಯುವ ವಯಸ್ಸಿನಲ್ಲಿ ಮದ್ಯಪಾನದ ದುಶ್ಚಟಕ್ಕೆ ದಾಸರಾಗುತ್ತಿರುವುದು ದುರಂತ” ಬೇಸರ ವ್ಯಕ್ತಪಡಿಸಿದರು. ನಂತರ ಗ್ರಾಮದಲ್ಲಿ ಸಾರಾಯಿ ಮಾರಾಟ, ಇಸ್ಪೀಟ್ ಹಾಗೂ ಜೂಜಾಟಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದರಿಂದ ಸಮಾಜಿಕ ಸ್ವಾಸ್ಥ್ಯ ಮತ್ತು ನೆಮ್ಮದಿ ಹಾಳಾಗುತ್ತಿರುವುದರಿಂದ ಸಂಪೂರ್ಣವಾಗಿ ಈ ಚಟುವಟಿಕೆ ನಿಲ್ಲಬೇಕೆಂದು ಆಗ್ರಹಿಸಿ ಕಾರಟಗಿ ತಹಶೀಲ್ದಾರರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿದರು. ಈ ವೇಳೆಯಲ್ಲಿ ಊರಿನ ಅನೇಕ ಮಹಿಳೆಯರು, ಮುಖಂಡರು, ಹಿರಿಯರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. ಊರಿನ ಸಾವಿರಾರು ಜನರು ಭಾಗವಹಿಸಿದ್ದರು.
Grand Jayanti Celebration of Nijasharan Ambigara Choudaiah
ಸರ್ವ ಸಮುದಾಯದ ಜೊತೆಗೂಡಿ ನಿಜಶರಣ ಅಂಬಿಗರ ಚೌಡಯ್ಯನವರ ಅದ್ಧೂರಿ ಜಯಂತಿ ಆಚರಣೆ ಚೌಡಯ್ಯನವರ ವಚನಗಳು ಸರ್ವ ಕಾಲದಲ್ಲಿಯೂ ಅನುಕರಣೀಯ: ಪರಣ್ಣ ಮುನವಳ್ಳಿ
ಗಂಗಾವತಿ, ಜ.21: ನಗರ ಗ್ರಾಮ ದೇವತೆ ಶ್ರೀ ದುರ್ಗಮ್ಮದೇವಿ ದೇವಸ್ಥಾನ ಬಳಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವವನ್ನು ಗಂಗಾಮತ ಸಮುದಾಯದ ಬಾಂಧವರು ಸರ್ವ ಸಮುದಾಯದವರ ಜೊತೆಗೂಡಿ ಬುಧವಾರದಂದು ಅದ್ಧೂರಿಯಾಗಿ ಆಚರಿಸಿದರು. ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಬಂಡಾಯ ಶರಣರೆಂದೇ ಗುರುತಿಸಿಕೊಂಡಿದ್ದ ಅಂಬಿಗರ ಚೌಡಯ್ಯನವರ ವಚನಗಳು ಸರ್ವ ಕಾಲದಲ್ಲಿಯೂ ಅನುಕರಣೀಯವಾಗಿವೆ. ಇವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಎಲ್ಲಾ ಸಮುದಾಯದವರು ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ಸರ್ವ ಸಮುದಾಯದವರ ಜೊತೆಗೂಡಿ ಗಂಗಾಮತ ಸಮುದಾಯದ ಬಾಂಧವರು ಪ್ರತಿವರ್ಷವೂ ಆಚರಿಸುವ ಅಂಬಿಗರ ಚೌಡಯ್ಯ ಜಯಂತಿಯು ಅನುಕರಣೀಯ ಎಂದರು. ನಂತರ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಹೆಚ್.ಆರ್.ಶ್ರೀನಾಥ ಅವರು, ಹಿಂದುಳಿದ ಸಮುದಾಯದಲ್ಲಿ ಜನಿಸಿ ಬಂಡಾಯ ಸಾಹಿತಿಯಾಗಿ ಬಸವಣ್ಣವರ ಸಹವರ್ತಿಯಾಗಿದ್ದ ಅಂಬಿಗರ ಚೌಡಯ್ಯನವರು ನಮ್ಮೆಲ್ಲರಿಗೂ ಸ್ಫೂರ್ತಿ. ಗಂಗಾಮತ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಆರ್ಥಿಕವಾಗಿಯೂ ಕೂಡ ಹಿಂದುಳಿದಿದ್ದಾರೆ. ನದಿ ದಂಡೆಗಳಲ್ಲಿ ವಾಸವಿದ್ದು ಮೀನುಗಾರಿಕೆ ಮಾಡುತ್ತಿರುವ ಸಾವಿರಾರು ಕುಟುಂಬಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ಮನೆ ನಿರ್ಮಿಸಿಕೊಡಬೇಕು. ಬೇರೆ ಸಮುದಾಯಗಳಿಗೆ ನೀಡಿದಂತೆ ಈ ಸಮುದಾಯದ ಏಳ್ಗೆಗಾಗಿ ಸರಕಾರವು ಅಗತ್ಯ ಅನುದಾನಗಳನ್ನು ನೀಡಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಗಂಗಾಮತ ಸಮುದಾಯದ ತಾಲೂಕು ಅಧ್ಯಕ್ಷ ಹನುಮೇಶ ಬಟಾರಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ವ ಸಮುದಾಯದವರ ಜೊತೆಗೂಡಿ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ನೀರಿಲ್ಲದ ಸ್ಥಳವಿಲ್ಲ. ಅದೇ ರೀತಿ ನಿಜಶರಣರ ವಚನಗಳಲ್ಲಿ ಜಗತ್ತಿಗೆ ಸಾರದ ಸಂದೇಶಗಳಿಲ್ಲ. ಬಂಡಾಯಶರಣ ಅಂಬಿಗರ ಚೌಡಯ್ಯನವರ ವಚನಗಳು ಸ್ವಲ್ಪ ಕಟುವಾಗಿದ್ದರೂ ಕೂಡ ಸಮಾಜ ಸುಧಾರಣೆ ಹಾಗೂ ಸಮಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ಎಂಎಲ್ಸಿ ತಿಪ್ಪಣ್ಣ ಕಮಕನೂರು ಅವರು ವಿಧಾನಸೌಧದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿದ್ದಾರೆ. ಈ ಕಾರ್ಯವನ್ನು ಶೀಘ್ರದಲ್ಲಿಯೇ ಮಾಡಬೇಕು. ತಪ್ಪಿದಲ್ಲಿ ಸಮುದಾಯದ ವತಿಯಿಂದ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಹೆಚ್ ನರಸಿಂಹಯ್ಯ ಪ್ರಶಸ್ತಿ ಪುರಸ್ಕøತ ಲಿಟಲ್ ಆಟ್ರ್ಸ್ ಸ್ಕೂಲಿನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾಜಿ ಸಂಸದ ಶಿವರಾಮೇಗೌಡ, ಗಂಗಾಮತ ಸಮುದಾಯದ ಮುಖಂಡ ರಾಜಶೇಖರ್ ಮುಷ್ಟೂರು, ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ ಅವರು ಮಾತನಾಡಿದರು. ಈ ವೇಳೆ ತಹಸೀಲ್ದಾರ್ ಯು.ನಾಗರಾಜ್, ಕಾಡಾ ಮಾಜಿ ಅಧ್ಯಕ್ಷ ಗಿರೇಗೌಡ, ನಗರಸಭೆ ಸದಸ್ಯ ಪರಶುರಾಮ ಮಡ್ಡೇರ್, ಅಂಬಿಗರ ಅಂಜಿನಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವುಕುಮಾರ ಅರಿಕೇರಿ, ವೈ.ಬಿ.ಮನಗುಳಿ, ವಿರೂಪಾಕ್ಷಪ್ಪ ವಕೀಲರು, ಮರಳಿ ನಿರುಪಾದಿ, ಹೊಸಳ್ಳಿ ಸಿದ್ದಪ್ಪ, ಮರಿಯಪ್ಪ, ಮಲ್ಲಾಪುರ ಯರ್ರಿಸ್ವಾಮಿ, ಗಂಗಾಮತ ಸಮುದಾಯದ ತಾಲೂಕು ಉಪಾಧ್ಯಕ್ಷ ದೊಡ್ಡ ಭರಮಪ್ಪ, ಅಂಬಿಗರ ಚೌಡಯ್ಯ ತಾಲೂಕು ಯುವಕ ಸಂಘದ ಅಧ್ಯಕ್ಷ ಭೈರೇಶ, ರಾಘವೇಂದ್ರ, ಚಂದ್ರಶೇಖರ ಮುಕ್ಕುಂದಿ, ದೇವರಾಜ್, ಗೋಪಿ, ಪೂಜಾರಿ ಹನುಮೇಶ ಸೇರಿದಂತೆ ಗಂಗಾಮತ ಸಮುದಾಯದ ಸ್ಥಳೀಯ ಹಿರಿಯರು, ಯುವಕರು, ವಿವಿಧ ಗ್ರಾಮಗಳ ಮುಖಂಡರು, ಯುವಕರು ಇದ್ದರು.
ನಿಷ್ಠುರವಾದಿ ಸತ್ಯಾನ್ವೇಷಕ ನಿಜಶರಣ ಅಂಬಿಗರ ಚೌಡಯ್ಯ : ಪ್ರೊ. ಕರಿಗೂಳಿ
Nijasharan Ambigara Chowdary, a staunch truth seeker: Prof. Kariguli
ಗಂಗಾವತಿ: ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ಅಂಬಿಗರ ಚೌಡಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರದ ಪ್ರೊ. ಕರಿಗೂಳಿಯವರು, ಮಾತನಾಡಿ , ಬಸವ ಚಿಂತನೆಯ ಅತ್ಯಂತ ನೇರ,ನಿಷ್ಠುರ ಶರಣರಾದ ಅಂಬಿಗರ ಚೌಡಯ್ಯನವರ ವಚನಗಳು ಇಂದಿಗೂ ಕೂಡ ಆತ್ಮವಿರೋಧಿ ಗುರುಗಳನ್ನು ಪ್ರಶ್ನಿಸುವಂತಿವೆ, ಅವರ ವಿಮರ್ಶಾತ್ಮಕ ವಚನಗಳು, ಆಡಂಭರದ, ಮೂಢ ನಂಬಿಕೆಯ,ಅಸಮಾನತೆಯ ಹಾಗೂ ಇತರೆ ಎಲ್ಲಾ ರೀತಿಯ ಭಕ್ತಿರಹಿತ ಆಚರಣೆಗಳನ್ನು ವಿರೋಧಿಸುವ ಪ್ರಮುಖ ಜ್ಞಾನಸೂಕ್ತಿಗಳಾಗಿವೆ. ಸತ್ಯದ ಅನ್ವೇಷಣೆಗಾಗಿ ತುಂಬಾ ನಿಷ್ಠುರವಾಗಿ ಆಲೋಚಿಸಿದ ವಚನ ಸಾಹಿತ್ಯದ ಮಹನೀಯರು ಚೌಡಯ್ಯನವರು ಎಂದರು. ಅಂಬಿಗರ ಚೌಡಯ್ಯರoತಹ ಶರಣರ ವಿಚಾಗಳನ್ನು ಇವತ್ತಿನ ಯುಗದಲ್ಲಿ ಹೇಳಬೇಕಾದರೂ ಕೂಡ ಒಂದು ಅರ್ಹತೆ ಬೇಕು ಎನ್ನುವಷ್ಟರ ಮಟ್ಟಿಗೆ ಅವರ ಕಟುವಾಗಿವೆ ಆದರೂ ಸತ್ಯವಾಗಿವೆ.
ಎಲ್ಲಾ ರೀತಿಯ ಸಾಮಾಜಿಕ ತಾರತಮ್ಯಗಳನ್ನು ಹೋಗಲಾಡಿಸಿ, ಸಮಾನತೆಯ ಸಂಸ್ಕೃತಿಯನ್ನು ಹುಟ್ಟುಹಾಕಲು ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯರವರ ವಚನಧಾರೆಗಳನ್ನು ಅನುಸರಿಸುತ್ತ ಜೀವಿಸುವ ಕಾರ್ಯವನ್ನು ಆಧುನಿಕ ಮನುಜರು ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ, ಉಪನ್ಯಾಸಕರಾದ ವೆಂಕಟರಾಜು, ಗ್ರಂಥಾಪಾಲಕ ದೇವರಾಜ್,ಪ್ರವೀಣಕುಮಾರ್ ಹಾಗೂ ಕಾಲೇಜಿನ ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿಯವರಾದ,ಶಾಂತಿ ಚಿನ್ನವರಪ್ರಸಾದ ಹಾಗೂ ಶರಣಬಸವ ಉಪಸ್ಥಿತರಿದ್ದರು
ಗಂಗಾವತಿಯ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಶ್ರೀ ವೇಮನರ ೬೧೪ನೇ ಜಯಂತ್ಯೋತ್ಸವ ಆಚರಣೆ
Sri Vemana's 614th Jayanthyotsava Celebrations at Hemareddy Mallamma Circle, Gangavathi
ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ದೈವಜ್ಞಾನಿ ಶ್ರೀ ವೇಮನರ ೬೧೪ನೇ ಜಯಂತ್ಯೋತ್ಸವ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಜಗದೀಶಪ್ಪ, ಮಾಜಿ ಶಾಸಕರಾದ ಜಿ.ವೀರಪ್ಪ, ಮಾಜಿ ಕಾಡಾ ಅಧ್ಯಕ್ಷರಾದ ಹೆಚ್. ಗಿರೇಗೌಡ ವಕೀಲರು, ಬಿಜೆಪಿ ಮಾಜಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ್, ಮಾಜಿ ನಗರಸಭಾ ಸದಸ್ಯರಾದ ಮನೋಹರಗೌಡ ಹೇರೂರು, ತಹಶೀಲ್ದಾರ ಗ್ರೇಡ್-೨ ಆದ ಮಹಾಂತಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಮರೇಶ್ ಗೋನಾಳ್, ಜಡಿ ವೀರನಗೌಡ, ಬಸವರಾಜ ಕೊಟ್ನೇಕಲ್, ಚನ್ನಪ್ಪ ಮಳಗಿ ವಕೀಲರು, ವಿಶ್ವನಾಥ ಮಾಲಿಪಾಟೀಲ್, ರಾಜೇಶ್ ರೆಡ್ಡಿ, ಮಹಾಂತೇಶ್ ಹೇರೂರು, ಮಲ್ಲಪ್ಪ ಬಸಪಟ್ಟಣ, ಚನ್ನಬಸವ ಹೇರೂರು, ಲಿಂಗನಗೌಡ ಹೇರೂರು, ಬಸವಂತ ಪಾಟೀಲ್, ಯರಿಸ್ವಾಮಿ ಗೌಡ, ರಮೇಶ್ ಕಾಡದ್, ಪರಿಸರ ಇಲಾಖೆ ಅಧಿಕಾರಿ ಶೋಭಾ ತಳವಾರ್, ಸಮಾಜದ ಮುಖಂಡರುಗಳು, ಸಮಾಜದ ಯುವಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರೆಡ್ಡಿ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಉಮೇಶ ಸಿಂಗನಾಳರವರು ಗಂಗಾವತಿ ತಾಲೂಕು ಸಂಚಾಲಕರನ್ನಾಗಿ ವಿಜಯಕುಮಾರ ಗದ್ದಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಿ, ರೆಡ್ಡಿ ಸಂಘದ ಸಮಾಜದ ಹೇಳಿಗೆಗಾಗಿ ಶ್ರಮಿಸುವಂತೆ ತಿಳಿಸಿದರು. ಮಾಹಿತಿಗಾಗಿ ವಿಜಯಕುಮಾರ ಗದ್ದಿ
ಮುಸ್ಟೂರು ನ ಹೆಬ್ಬಾಳ ಗ್ರಾಮದಲ್ಲಿ ನಾಗರಿಕರಿಗೆ ಆನೆಕಾಲು ಮತ್ತು ಮಲೇರಿಯಾ ರೋಗ ಪತ್ತೆ ಹಚ್ಚುವ ರಾತ್ರಿ ರಕ್ತ ಲೇಪನ ಕಾರ್ಯಕ್ರಮ ಜರುಗಿತು
A night blood smear program was held to screen citizens for elephantiasis and malaria in Hebbal village of Mustur.
ಗಂಗಾವತಿ: ಕಾರಟಗಿ ತಾಲೂಕಿನ ದಿ,20 /01/2026 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರು ನ ಹೆಬ್ಬಾಳ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಗ್ರಾಮದ ಎಲ್ಲ ನಾಗರಿಕರಿಗೆ ಆನೆಕಾಲು ಮತ್ತು ಮಲೇರಿಯಾ ರೋಗ ಪತ್ತೆ ಹಚ್ಚುವ ರಾತ್ರಿ ರಕ್ತ ಲೇಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸದರಿ ಕಾರ್ಯಕ್ರಮವು ರಾತ್ರಿ 9:30ಕ್ಕೆ ಪ್ರಾರಂಭಿಸಿ 11 ಗಂಟೆಯವರೆಗೂ ರಕ್ತ ಲೇಪನ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕ ಮೇಲ್ವಿಚಾರಕರಾದ ದೇವೇಂದ್ರ ಗೌಡ ಆನೆಕಾಲು ರೋಗವು ಗದ್ದೆಗಳಲ್ಲಿ ಹಾಗೂ ಚರಂಡಿಗಳಲ್ಲಿ ವಾಸ ಮಾಡುವ ಕ್ಯೂಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಮತ್ತು ಸೊಳ್ಳೆ ಕಚ್ಚುವುದರಿಂದ ಬರುವ ಖಾಯಿಲೆ ಆಗಿರುವುದರಿಂದ ಯಾರಿಗಾದರೂ ಆನೆಕಾಲು ರೋಗ ಬಂದಿರಬಹುದು ಹಾಗೂ ಹೆಬ್ಬಾಳ ಗ್ರಾಮದಲ್ಲಿ ಈಗಾಗಲೇ ಮೂರು ಪ್ರಕರಣಗಳು ಆನೇಕಲ್ ರೋಗ ದೃಢಪಟ್ಟಿರುವುದರಿಂದ ಗ್ರಾಮದ ಸುತ್ತಮುತ್ತ ಚರಂಡಿಗಳು ಮತ್ತು ಗದ್ದೆಗಳು ಆನೆಕಲ್ಲು ರೋಗ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳು ಇರುವುದರಿಂದ ಆರೋಗ್ಯ ಇಲಾಖೆಯಿಂದ ರಾತ್ರಿ ರತ್ತ ಲೇಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಮೇಲ್ವಿಚಾರಕರಾದ ದೇವೇಂದ್ರಗೌಡ ಅವರು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಾಫರ್ ಮಾತನಾಡಿ ಮನುಷ್ಯ ನಿದ್ರಾ ಅವಸ್ಥೆ ತಲುಪಿದಾಗ ದೇಹದಲ್ಲಿರುವ ರೋಗಾಣು ರಕ್ತನಾಳದಲ್ಲಿ ಎಚ್ಚರಗೊಳ್ಳುವುದರಿಂದ ಅಂದರೆ ರಾತ್ರಿ 9:00 ಮೇಲೆ ಮಾತ್ರ ಆನೆಕಲ್ಲು ರೋಗ ಪತ್ತೆಹಚ್ಚಲು ಜನರ ರಕ್ತಸಂಗ್ರಹ ಮಾಡಬೇಕಾಗಿರುವುದರಿಂದ ಸದ್ರಿ ಕಾರ್ಯಕ್ರಮ ಕೇವಲ ರಾತ್ರಿ ಹೊತ್ತು ಮಾತ್ರ ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ್ ಹಿರೇಮಠ ಮಾತನಾಡಿ ಆನೆಕಾಲು ರೋಗ ಹರಡುವಿಕೆ ತಡೆಗಟ್ಟುವ ವಿಧಾನ ಆನೆಕಲ್ಲು ರೋಗ ರಕ್ತಲೇಪನ ಸಂಗ್ರಹ ಕಾರ್ಯಕ್ರಮದ ಉದ್ದೇಶ ಹಾಗೂ ರೋಗ ನಿಯಂತ್ರಣದಲ್ಲಿ ಜನಸಾಮಾನ್ಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಹೆಬ್ಬಾಳ ಗ್ರಾಮದಿಂದ ಈಗಾಗಲೇ ವರದಿಯಾದ ಆನೇಕಲ್ ರೋಗ ಪ್ರಕರಣಗಳಿಗೆ ಮನೆ ಭೇಟಿಕೊಟ್ಟು ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಕಾರ್ಯಾಲಯದಿಂದ ಆನೆಕಾಲ ರೋಗ ತಡೆಗಟ್ಟುವ morbidity management kit ವಿತರಿಸಲಾಯಿತು ಹಾಗೂ ಬಳಸುವ ವಿಧಾನಗಳನ್ನು ಸಹ ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಯೋಗಶಾಲ ಅಧಿಕಾರಿಗಳಾದ ಇನಯತ್ ಭಾಷಾ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಆದ ಬಸಮ್ಮ, ಮಂಜುಳಾ k, ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಪಂಪಾಪತಿ, ರಮ್ಯಾ, ಜ್ಯೋತಿ, ಆಶಾ ಕಾರ್ಯಕರ್ತರಾದ ದುರ್ಗಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನರಿಗೆ ಆರೋಗ್ಯ ಶಿಕ್ಷಣ ನೀಡಿ 121 ಜನರಿಗೆ ರಕ್ತ ಲೇಪನ ಪರೀಕ್ಷೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು..
ಶ್ರೀ ಸಾದ್ವಿ ಶಿರೋಮಣಿ. ತುರಡಗಿ ತಿಮ್ಮಮ್ಮನವರ. 213.ನೇ ಆರಾಧನಾ ಮಹೋತ್ಸವ.
Sri Sadvi Shiromani. Turadagi Thimmamma. 213th Aradhana Mahotsav.
ಕುಷ್ಟಗಿ… ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಡದೂರು ಸೀಮಾ ವ್ಯಾಪ್ತಿಯ ಶ್ರೀ ಕ್ಷೇತ್ರ ಅಮ್ಮನ ಕಟ್ಟೆಯಲ್ಲಿ ಸೋಮವಾರದಂದು ಶ್ರೀ ಸಾದ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ 213 ನೆಯ ಆರಾಧನಾ ಮಹೋತ್ಸವ ಸಹಸ್ರಾರುಸಂಖ್ಯೆಯ ಭಕ್ತಾದಿಗಳ ನಡುವೆ ಸಂಭ್ರಮದಿಂದ ಜರಗಿತು. ಅಮ್ಮನವರ ಪತಿಯ ಊರಾದ ಹೂನೂರು ಗ್ರಾಮದಿಂದ ಅಮ್ಮನವರ ಉತ್ಸವದ ಮೂರ್ತಿಯನ್ನು ಸಕಲ ವಾದ್ಯ ವೈಭವದೊಂದಿಗೆ ಅಮ್ಮನ ಕಟ್ಟೆಗೆ ಬರಲಾಯಿತು ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳು ಯುವಕರು ಬಾಲಕರು ಮಹಿಳೆಯರು ಪುರುಷರು ದೀಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆ ಸಮರ್ಪಿಸಿದರು. ಹುಣಸಿಹೊಳೆ ಕಣ್ವ ಮಠದ ಪೀಠಾಧಿಕಾರಿಗಳಾದ 108 ಶ್ರೀ ವಿದ್ಯಾರಣ್ಯ ವಿರಾಜತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಸಲಾಯಿತು.. ಅಮ್ಮನವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಮತ್ತೆ ಇತರ ಪೂಜಾ ಕಾರ್ಯಕ್ರಮಗಳು ಜರುಗಿತು. ಜವಳ ಉಪನಯನ. ಸನ್ಮಾನ ಕ್ಯಾಲೆಂಡರ್ ಬಿಡುಗಡೆ ಮುದ್ರಾ ಧಾರಣೆ ಹಾಗೂ ಆಶೀರ್ವಚನ ಭಾಷಣ ಪೀಠಾಧಿಕಾರಿಗಳು ನೆರೆವೇರಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ವಿಧಾನಪರಿಷತ್ ಸದಸ್ಯ ಅಂದಾನಪ್ಪ ಪಾಟೀಲ್ ಭಾಗವಹಿಸಿದ್ದರು