Breaking News
ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಕೃಷಿ ಸಲಕರಣೆಗಳನ್ನು ವಿತರಿಸಲು ಮತ್ತು ಅಂಬಾ ಮಠಕ್ಕೆ ಬಸ್ ಕಲ್ಪಿಸಲು ರೈತ ಮುಖಂಡರಿಂದ ಮನವಿ

  ಎ.ಐ.ಕೆ.ಕೆ.ಎಂ.ಎಸ್ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಕಾರಟಗಿ ತಾಲ್ಲೂಕಿನ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಕೃಷಿ ಸಲಕರಣೆಗಳನ್ನು ವಿತರಿಸಲು ಮತ್ತು ಅಂಬಾ ಮಠಕ್ಕೆ ಬಸ್ ಕಲ್ಪಿಸಲು ರೈತ ಮುಖಂಡರ ಆಗ್ರಹ.

Farmer leaders appeal to distribute adequate agricultural equipment to farmers on time and provide buses to Amba Math

ಗಂಗಾವತಿ: ಎ.ಐ.ಕೆ.ಕೆ.ಎಂ.ಎಸ್ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಕಾರಟಗಿ ತಾಲ್ಲೂಕಿನ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕ ಕೃಷಿ ಸಲಕರಣೆಗಳನ್ನು ವಿತರಿಸಲು ಅಗ್ರಹಿಸಿ ಮಾನ್ಯ ಸಹಾಯಕ ಕೃಷಿ ನಿರ್ದೇಶಕರಿಗೆ ಮತ್ತು ಸಿದ್ದಾಪುರ ಬಸ್ ನಿಲ್ದಾಣದಿಂದ ಉಳೇನೂರು ನಂದಿಹಳ್ಳಿ ಮಾರ್ಗವಾಗಿ ಸಿಂಗಾಪುರ ಅಂಬಾಮಠದವರೆಗೆ ಹೊಸದಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಸಂಘದ ಕಾರ್ಯಕರ್ತರು ಗಂಗಾವತಿ ಸಾರಿಗೆ ವಿಭಾಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ AIKKMS ತಾಲ್ಲೂಕು ಕಾರ್ಯಕರ್ತರು ಮಾತನಾಡಿ ಪ್ರತಿ ವಾರ್ಷಿಕ ಬೆಳೆಯಲ್ಲಿ ರೈತರಿಗೆ ಲಭ್ಯವಾಗಬೇಕಿದ್ದಂತಹ ಟ್ರ್ಯಾಕ್ಟರ್ ಉಪಕರಣಗಳು, ಔಷಧ ಉಪಕರಣಗಳು, ಬಿತ್ತನೆ ಮತ್ತು ಕಟಾವಿಗೆ ಸಂಬಂಧಿಸಿದಂತೆ ಇನ್ನಿತರ ರೈತರಿಗೆ ಅವಶ್ಯಕ ವಾಗಿರುವ ಕೃಷಿ ಸಲಕರಣೆಗಳು ಬಡ ರೈತ ಕೃಷಿ ಕಾರ್ಮಿಕರಿಗೆ ತಲುಪುತ್ತಿಲ್ಲ. ಹಾಗೆಯೇ ಈ ಕೃಷಿ ಸಲಕರಣೆಗಳ ಕುರಿತಂತೆ ಅನೇಕ ಹಳ್ಳಿ ಭಾಗದ ರೈತರಿಗೆ ಮಾಹಿತಿಯೇ ತಿಳಿದಿಲ್ಲ ಮತ್ತು ಉಪಕರಣಗಳು ಅವರಿಗೆ ಲಭ್ಯವಾಗುತ್ತಿಲ್ಲ. ಹಾಗೆಯೇ ಪ್ರತಿ ವರ್ಷ ಬೆಳೆ ಬೆಳೆದ ನಂತರ ರೈತರಿಗೆ ಮಣ್ಣಿನ ಫಲವತ್ತತೆಯ ಕುರಿತಂತೆ ಯಾವುದೇ ಮಾಹಿತಿಯು ಲಭ್ಯವಾಗುತ್ತಿಲ್ಲ.ಕೂಡಲೇ ತಾಲೂಕಿನ ಎಲ್ಲಾ ಹಳ್ಳಿಯ ರೈತರಿಗೆ ಕೃಷಿ ಸಲಕರಣೆಗಳು ತಲುಪುವಂತೆ ಕ್ರಮ ವಹಿಸಬೇಕು ಹಾಗೂ ಸರಿಯಾದ ಅನುದಾನದ ಮೂಲಕ ಸಲಕರಣೆಗಳ ವಿತರಣೆಯ ಕಾರ್ಯವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕೆಂದರು.
ನಂತರ ಉಳೇನೂರು ನಂದಿಹಳ್ಳಿ ಮಾರ್ಗವಾಗಿ ಸಿಂಗಾಪುರ ಅಂಬಾಮಠದವರೆಗೆ ಹೊಸದಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಗಂಗಾವತಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಸಿಂಗಾಪುರದಿಂದ ಗಂಗಾವತಿಗೆ ಹಲವಾರು ಸಾರ್ವಜನಿಕರು ಪ್ರಯಾಣ ಮಾಡುತ್ತಿರುವುದರಿಂದ, ಹಾಗೆಯೇ ಸಿದ್ದಾಪುರ ಈಳಿಗನೂರು,ಉಳೇನೂರು, ಬೆನ್ನೂರು ಕೊಕ್ಕರುಗಳ್, ನಂದಿಹಳ್ಳಿಯಿಂದಲೂ ಕೂಡ ಸಿಂಗಾಪುರ ಮತ್ತು ಅಂಬಾಮಠಕ್ಕೆ ಹೋಗುವಂತಹ ಪ್ರಯಾಣಿಕರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ. ಸಾರ್ವಜನಿಕರು ಅಂಬಾ ಮಠ ಸಿಂಗಾಪುರದಿಂದ ಗಂಗಾವತಿಗೆ ಪ್ರಯಾಣ ಮಾಡುವಂತಹ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ. ಸಾರ್ವಜನಿಕರ ಬೇಡಿಕೆಯು ಕೂಡ ಇರುವುದರಿಂದ. ಸಿದ್ದಾಪುರ ದಿಂದ ನಂದಿಹಳ್ಳಿ ಮಾರ್ಗವಾಗಿ ಅಂಬಾಮಠದವರೆಗೆ ಹೊಸದಾಗಿ ಎರಡು ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಿಬೇಕು ಎಂದರು.
ಸಂಘಟನೆಯ ತಾಲ್ಲೂಕು ಮುಖಂಡರಾದ ಅಮರೇ ಗೌಡ ಅಂಜನಪ್ಪ ಹಳ್ಳಳ್ಳಿ,ಬಸವರಾಜಪ್ಪ, ಯಮನೂರು ಕಾರಟಗಿ ಸದಸ್ಯರಾದ ನಿರೂಪಾದಿ ನಾಯಕ್, ಶರಣಪ್ಪ ನಾಯಕ್,ಮಲ್ಲಯ್ಯ, ವೆಂಕಟೇಶ್ ಇಟಗಿ ಹೊನ್ನೂರಪ್ಪಪಾಳೆ,ಗಾದಿಲಿಂಗಪ್ಪ ಕುರುಬರ,ಹೊನ್ನೂರಪ್ಪ,ಗಂಗರಾಜ ಅಳ್ಳಳ್ಳಿ ಮತ್ತು ಇತರರಿದ್ದರು

ಗ್ರಾಮ ಪಂಚಾಯತಿ ಆನೆಗುಂದಿ ವತಿಯಿಂದ 10 ನೇ ತರಗತಿ ಫಲಿತಾಂಶ ಸುಧಾರಣೆಗಾಗಿ ಮಿಷನ್ 40 ಸಲಕರಣೆ ವಿತರಣೆ.

ಗ್ರಾಮ ಪಂಚಾಯತಿ ಆನೆಗುಂದಿ ವತಿಯಿಂದ 10 ನೇ ತರಗತಿ ಫಲಿತಾಂಶ ಸುಧಾರಣೆಗಾಗಿ ಮಿಷನ್ 40 ಸಲಕರಣೆ ವಿತರಣೆ.

Distribution of Mission 40 equipment for improving 10th class results by Gram Panchayat Anegundi.

ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ    ಗ್ರಾಮೀಣ ಸ್ಥಳೀಯ ಸರಕಾರಗಳು ಪಂಚಾಯತಿ ವ್ಯಾಪ್ತಿಯ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಬೇಕಿರುವ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕಾಂಪೌಂಡ್, ಮೈದಾನ, ಅಡುಗೆ ಕೋಣೆ ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಆದರೆ ಆನೆಗುಂದಿ ಗ್ರಾಮ ಪಂಚಾಯತಿಯು, ಪಂಚಾಯತಿ ವ್ಯಾಪ್ತಿಯ ಮಕ್ಕಳ SSLC ಫಲಿತಾಂಶ ಸುಧಾರಣೆಗಾಗಿ ಅಗತ್ಯವಿರುವ ಮಿಷನ್ 40 ಪರಿಕರಗಳನ್ನು ಒದಗಿಸಿಕೊಟ್ಟಿದೆ .

ಪಂಚಾಯತ್ ಒಂದು ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ನ ಪಾಸಾಗಿ ಮಕ್ಕಳು ಮುಂದಿನ ವಿದ್ಯಾಭ್ಯಾಸ ಕುಂಠಿತವಾಗದಂತೆ ದೂರಾಲೋಚನೆ ಮಾಡಿರುವುದು ಮಾದರಿಯಾಗಿದೆ.


ಹಿನ್ನೆಲೆ : ಕಳೆದ ಒಂದುವಾರದ ಹಿಂದೆ ಶಾಲೆಯಲ್ಲಿ ಎಸ್ಡಿಎಂಸಿ ರಚನೆಯಾಗಿದೆ, ರಚನೆಯಾದ ನಂತರ ಎಸ್ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಫಲಿತಾಂಶ ಸುಧಾರಣೆಗಾಗಿ ಮಾಡಬಹುದಾದ ಕ್ರಮಗಳಬಗ್ಗೆ ಸದಸ್ಯರು ಮತ್ತು ಚರ್ಚಿಸಿ, ವಿಶೇಷ ತರಗತಿಗಳು ಹಮ್ಮಿಕೊಳ್ಳುವುದು, ಬಸ್ ವ್ಯವಸ್ಥೆ, ಮಿಷನ್ 40 ಕುರಿತು ಚರ್ಚೆಯಾಗಿದ್ದು.

ಈಗಾಗಲೇ ಅಂಜನಾದೇವಿ ಅವರ ನೇತೃತ್ವದಲ್ಲಿ ಪಂಚಾಯತಿ ಲೈಬ್ರರಿಯಲ್ಲಿ ಸಾಯಂಕಾಲ ಮತ್ತು ಬೆಳಿಗ್ಗೆ ವಿಶೇಷ ತರಗತಿಗಳು ನಡೆಯುತ್ತಿವೆ.

ಇದೀಗ ಪಂಚಾಯತಿ ವತಿಯಿಂದ ಮಿಷನ್ 40 ಪರಿಕರಗಳನ್ನು ಇಂದು ಪ್ರಾರ್ಥನಾ ಅವಧಿಯಲ್ಲಿ ಒದಗಿಸಲಾಯಿತು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ, ಎಸ್ಡಿಎಂಸಿ ಅಧ್ಯಕ್ಷರಾದ ತಿಮ್ಮೊತಿ, ತಾಲೂಕ ಗ್ಯಾರಂಟಿ ಅಧ್ಯಕ್ಷ ಡಾ. ವೆಂಕಟೇಶ ಬಾಬು, ಗ್ರಾಮ ಸದಸ್ಯರಾದ ಮಲ್ಲಿಕಾರ್ಜುನ ಹೆಚ್ ಎಂ, ಪೂರ್ಣಿಮಾ, ಹೊನ್ನಪ್ಪ ಶಾಲಾ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.

ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಕಲ ಸಿದ್ಧತೆ

ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ: ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಸಕಲ ಸಿದ್ಧತೆ

Vaikuntha Ekadashi celebrations at TTD temple in Bengaluru: Special darshan arrangements for devotees and all preparations for Vaikuntha Dwara darshan at Tirumala

ಬೆಂಗಳೂರು ಡಿ 27: ಪವಿತ್ರವಾದ ವೈಕುಂಠ ಏಕಾದಶಿ ಪರ್ವದಿನದ ಪ್ರಯುಕ್ತ, ಬೆಂಗಳೂರಿನ ವೈಯಾಲಿಕಾವಲ್‌ನ 16ನೇ ಕ್ರಾಸ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟಿಟಿಡಿ ಮಾಹಿತಿ ಕೇಂದ್ರದಲ್ಲಿ ದಿನಾಂಕ 30.12.2025 ರಂದು ಭಕ್ತರಿಗೆ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

ಸ್ಥಳೀಯ ದೇವಸ್ಥಾನದ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಬೆಂಗಳೂರು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ವೀರಾಂಜನೇಯಲು ಅವರು:
“ವೈಕುಂಠ ಏಕಾದಶಿಯಂದು ಭಕ್ತರಿಗೆ ಸುಗಮ ಮತ್ತು ಅನುಕೂಲಕರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಂದು ಬೆಳಗಿನ ಜಾವ 1.35 ರಿಂದ ರಾತ್ರಿ 11.45 ರ ವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪವಿತ್ರ ದಿನದಂದು ಆಗಮಿಸುವ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿನಿಯೋಗವಿರುತ್ತದೆ,” ಎಂದು ತಿಳಿಸಿದರು.

ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2.00 ಗಂಟೆಯಿಂದ ಶ್ರೀವಾರಿ ಲಡ್ಡು ಪ್ರಸಾದ ಮಾರಾಟವನ್ನು (ಪ್ರತಿ ಲಡ್ಡುವಿಗೆ ರೂ. 50/-) ಆಯೋಜಿಸಲಾಗಿದ್ದು, ದಾಸ್ತಾನು ಇರುವವರೆಗೂ ಇದು ಲಭ್ಯವಿರುತ್ತದೆ. ಭಕ್ತರ ಅನುಕೂಲಕ್ಕಾಗಿ 2026ರ ಟಿಟಿಡಿ ಡೈರಿಗಳು, ಕ್ಯಾಲೆಂಡರ್‌ಗಳು, ಅಗರಬತ್ತಿ ಮತ್ತು ಇತರೆ ಟಿಟಿಡಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹ ತೆರೆಯಲಾಗುವುದು. ಈ ಬಾರಿ 70 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.

ತಿರುಮಲದ ಸಿದ್ಧತೆಗಳ ಕುರಿತು ಮಾತನಾಡಿದ ಟಿಟಿಡಿ ಮಂಡಳಿ ಸದಸ್ಯರಾದ ಶ್ರೀ ಎಸ್. ನರೇಶ್ ಕುಮಾರ್ ಅವರು
“ತಿರುಮಲದಲ್ಲಿಯೂ ವೈಕುಂಠ ಏಕಾದಶಿಯ ಪ್ರಯುಕ್ತ ಬೃಹತ್ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ವೈಕುಂಠ ದ್ವಾರದ ಮೂಲಕ ಪ್ರತಿದಿನ ಸುಮಾರು 80,000 ಕ್ಕೂ ಹೆಚ್ಚು ಭಕ್ತರಿಗೆ ದರ್ಶನ ಭಾಗ್ಯವನ್ನು ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿ ಯೋಜಿಸಿದೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಾಯುವ ಸಮಯದಲ್ಲಿ ಅನ್ನಪ್ರಸಾದ ಮತ್ತು ಪಾನೀಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ವಿವರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:
ಈ ಪವಿತ್ರ ಸಂದರ್ಭವನ್ನು ಗುರುತಿಸಲು ಬೆಂಗಳೂರಿನ ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್ (HDPP) ವತಿಯಿಂದ ದಿನವಿಡೀ ದೇವಸ್ಥಾನದ ಆವರಣದಲ್ಲಿ ಭಕ್ತಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಸಮಸ್ತ ಭಕ್ತಾದಿಗಳು ಈ ವೈಕುಂಠ ಏಕಾದಶಿ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ.

ಎಸ್‌ಬಿಐ ನಿಂದ ಡಿ.29 ರಂದು ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ
SBI's Your Money, Your Rights campaign on December 29

ಎಸ್‌ಬಿಐ ನಿಂದ ಡಿ.29 ರಂದು ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿ, ವಿಮಾ ಕಂತುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಖಾತೆಯಲ್ಲಿನ ಹಣವನ್ನು ಹಸ್ತಾಂತರಿಸುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಡಿಸೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದಲ್ಲಿ ಖಾತೆದಾರರು, ಕಾನೂನು ಬದ್ಧ ವಾರಸುದಾರರು ಬ್ಯಾಂಕ್‌ಗಳಲ್ಲಿ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ನಿಷ್ಕಿçಯವಾಗಿರುವ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸೂಕ್ತ ಅಗತ್ಯ ದಾಖಲೆಗಳು ಮತ್ತು ಪುರಾವೆಗಳೊಂದಿಗೆ ಭಾಗವಹಿಸಿ ಹಕ್ಕು ಪಡೆಯದ ಹಣವನ್ನು ಮರು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಿಮ್ಮ ತಂದೆ, ತಾಯಿ, ಅಜ್ಜಿ, ತಾತಂದಿರು ಬ್ಯಾಂಕ್ ಖಾತೆಗಳಲ್ಲಿ ಹಣವಿಟ್ಟು ಮರೆತಿದ್ದರೆ ಅಂತಹ ಹಣವನ್ನು ಪಡೆಯಬಹುದು. ಈ ಖಾತೆಗಳಿಗೆ ನಾಮನಿರ್ದೇಶನ ಮಾಡಿದ್ದರೆ ಅಂತವರಿಗೆ ಹಣ ದೊರೆಯುತ್ತದೆ. ಇಲ್ಲದಿದ್ದರೆ ವಂಶವೃಕ್ಷ ಮತ್ತು ಪ್ರಮಾಣ ಪತ್ರಗಳನ್ನು ಪಡೆದು ಸಂಬAಧಿಸಿದ ವಾರಸುದಾರರಿಗೆ ಈ ನಿಷ್ಕಿçಯ ಖಾತೆಗಳಲ್ಲಿರುವ ಹಣ ನೀಡಲಾಗುತ್ತದೆ.
ನಿಷ್ಕಿçಯ ಖಾತೆಯಲ್ಲಿನ ಹಣದ ಮಾಹಿತಿಯನ್ನು  https://udgram.rbi.org.in     ನಲ್ಲಿ ಆನ್‌ಲೈನ್ ಮೂಲಕವೂ ಪಡೆಯಬಹುದು. ನಿಷ್ಕಿçಯ ಖಾತೆಗಳಿಗೆ ಸಂಬAಧಪಟ್ಟವರು ಅಂದು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಈ ಅಭಿಯಾನವು ಬ್ಯಾಂಕ್‌ಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಮಾರುತಿ ಕರ್ಪಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ಸೇವಾ ಪ್ರಾಧಿಕಾರದಿಂದ ರಾಷ್ಟçಕ್ಕಾಗಿ ಮಧ್ಯಸ್ಥಿಕೆ 2.0 ಅಭಿಯಾನ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ರಾಜ್ಯಾದ್ಯಂತ 2026ರ ಜನವರಿ 2 ರಿಂದ 90 ದಿನಗಳ ಕಾಲ ರಾಷ್ಟçಕ್ಕಾಗಿ ಮಧ್ಯಸ್ಥಿಕೆ 2.0 ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅಭಿಯಾನದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಬಹÅದಾಗಿದೆ. ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬAಧಿಸಿದ ಕ್ಲೇಮುಗಳು, ಭೂ ಸ್ವಾಧೀನ ಪ್ರಕರಣಗಳು, ಚೆಕುö್ಕ ಅಮಾನ್ಯದ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳು, ವೈವಾಹಿಕ, ಕುಟುಂಬ ನ್ಯಾಯಾಲಯದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುತ್ತದೆ.
ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದವು ಬಗೆಹರಿಯುತ್ತದೆ. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹÅದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ, ಟೋಲ್ ಪಿs್ರÃ ಸಂಖ್ಯೆ 15100 ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ನೇರವಾಗಿ ಸಂಪರ್ಕಿಸಬಹÅದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮಹಾಂತೇಶ ದರಗದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕೊಪ್ಪಳ ನಗರಸಭೆ: ಆಸ್ತಿ ಕಣಜದಲ್ಲಿ ಕರಡು ಇ-ಖಾತಾ ಪ್ರಕಟ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): ಸರಕಾರವು ಮನೆಯಲ್ಲಿಯೇ ಅತಿ ಸರಳವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಿಗದಿತ ಕಾಲಾವಧಿಯಲ್ಲಿ ಇ-ಖಾತಾ ಸೇವೆಯನ್ನು ಪಡೆಯಲು ತಂತ್ರಾAಶ ರೂಪಿಸಿದ್ದು, ಅದರಂತೆ ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿರುತ್ತದೆ. ಸಾರ್ವಜನಿಕರು ಈ ಮಾಹಿತಿಯನ್ನು ನೇರವಾಗಿ ವೀಕ್ಷಿಸಬಹುದಾಗಿದೆ.  
ಮಾಹಿತಿಗಳ ಬಗ್ಗೆ ತಕರಾರು ಇದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾAಶದಲ್ಲಿನ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದಾಗಿದೆ. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರಸಭೆಯು ಪರಿಶೀಲಿಸಿ ಅನುಮೋದಿಸಲಾಗುವುದು. ಅಂತಿಮ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಳಿತು ಪಡೆಯಬಹುದಾಗಿದೆ.  ಈ-ಖಾತಾ ಪಡೆಯಲು ಮಾಲೀಕರ ಭಾವಚಿತ್ರ , ಆಸ್ತಿ ತೆರಿಗೆ ಹಾಗೂ ನೀರಿನ ಕರದ ಚಲನ್, ಸ್ವತ್ತಿನ ದಾಖಲೆಗಳು ಕ್ರಯಪತ್ರ, ದಾನಪತ್ರ, ಹಕ್ಕು ಬಿಡುಗಡೆ ಪತ್ರ, ವಾರಸಾ ಪ್ರಮಾಣ ಪತ್ರ, ವಿದ್ಯುತ್ ಆರ್.ಆರ್. ನಂಬರ್, ಸ್ವತ್ತಿನ ಛಾಯಾಚಿತ್ರ, ಋಣಭಾರ ನಮೂನೆ-15/16 (ಇಆ), ಆಧಾರ್ ಕಾರ್ಡ ಪ್ರತಿ, ಪಹಣಿ ಪತ್ರಿಕೆ, ಮ್ಯುಟೇಶನ ಪ್ರತಿ, ಸರ್ವೆ ನಕ್ಷೆ ಹಾಗೂ ಸ್ವತ್ತಿಗೆ ಸಂಬAಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಕರ್ನಾಟಕ-1 ಕೇಂದ್ರಗಳಲ್ಲಿ ಸಹ ನಾಗರೀಕರು ತಂತ್ರಾAಶವನ್ನು ಬಳಸಿ ಸೇವೆಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9019788143, 9902061158, 7676701684, 8660686901, 9902599883  ವೆಬ್‌ಸೈಟ್ ವಿಳಾಸ  www.eaasti.karnataka.gov.in  ಅಥವಾ ನಗರಸಭೆಯ ಕಂದಾಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ನಗರಸಭೆ ಕಾರ್ಯಾಲಯದ ಪ್ರಕಟಣೆಯ ತಿಳಿಸಿದೆ.



ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಡಿ.29 ರಂದು ಪೂರ್ವಭಾವಿ ಸಭೆ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): 2025-26 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜಿಲ್ಲಾ ಮಟ್ಟದಲ್ಲಿ ಸಂಘಟಿಸುವ ಸಲುವಾಗಿ ಡಿಸೆಂಬರ್ 29 ರಂದು ಸಂಜೆ 5.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ವಹಿಸಿಕೊಳ್ಳುವರು. ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಸಿಎಂ: ಪಿಎಚ್.ಡಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): 2025-26 ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಎಚ್‌ಡಿ ಅಧ್ಯಯನ ಪ್ರಾರಂಭಿಸಿರುವ (ದಿನಾಂಕ: 26/12/2025 ಮತ್ತು ಅದರ ನಂತರ ಪ್ರಥಮ ವರ್ಷದ ಪಿ.ಎಚ್‌ಡಿ ಪ್ರಾರಂಭಿಸಿರಬೇಕು) ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ವ್ಯಾಸಂಗ ವೇತನ, ಫೆಲೋಶಿಪ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2025-26 ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ದ ವಿಶ್ವವಿದ್ಯಾಲಯಗಳಲ್ಲಿ, ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ರೂ.4.50 ಲಕ್ಷ, ಪ್ರವರ್ಗ-2ಎ, 3ಎ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ರೂ.3.50 ಲಕ್ಷ ಇರಬೇಕು. ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಗಳು ಪೂರ್ಣಾವಧಿ ಪಿ.ಎಚ್‌ಡಿ ಅಧ್ಯಯನಕ್ಕಾಗಿ ಮಾಡಿಸುವ ನೋಂದಣಿ ದಿನಾಂಕವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ವ್ಯಾಸಂಗ  ವೇತನ, ಫೆಲೋಶಿಫ್‌ಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸುವ ಕೊನೆಯ ದಿನಾಂಕಕ್ಕೆ ಹಿಂದಿನ 2 ವರ್ಷದೊಳಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಾಲಿನಿಂದ ಪ್ರಥಮ ವರ್ಷದ ಪಿ.ಎಚ್‌ಡಿ ಅಧ್ಯಯನದಲ್ಲಿ ತೊಡಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್  https://bcwd.karnataka.gov.in     ವೀಕ್ಷಿಸಬಹುದು. ಸಹಾಯವಾಣಿ ಸಂಖ್ಯೆ: 8050770004 (ಕಛೇರಿ ಕಾರ್ಯನಿರ್ವಹಿಸುವ ಸಮಯ ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ) ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.30 ರಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೆöÊಮಾಸಿಕ ಸಭೆ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೆöÊಮಾಸಿಕ ಸಭೆಯನ್ನು ಡಿಸೆಂಬರ್ 30 ರಂದು ಸಾಯಂಕಾಲ 5.15 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ವಹಿಸಿಕೊಳ್ಳುವರು. ಸಭೆಯಲ್ಲಿ ಪ್ರಾಧಿಕಾರದ ಮಾಸಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು. ಸಂಬAಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ

ಕೊಪ್ಪಳ ಡಿಸೆಂಬರ್ 26, (ಕರ್ನಾಟಕ ವಾರ್ತೆ): ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು 1.5 ಲಕ್ಷಗಳ ದಂಡ ಸಹಿತ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
      ಗಂಗಾವತಿಯ ಎಚ್.ಆರ್.ಎಸ್ ಕಾಲೋನಿಯ ನಿವಾಸಿ ಹುಲ್ಲೇಶ ಕೊಜ್ಜ ಎಂಬ ಆರೋಪಿಯು ಪ್ರಕರಣದ ಅಪ್ರಾಪ್ತ ವಯಸ್ಸಿನ ಬಾಧಿತಳು ಶಾಲೆಗೆ ಹೋಗಿ ಬರುವಾಗ ಬಾಧಿತಳನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದನು. 2022 ರ ಸೆಪ್ಟೆಂಬರ್ 7 ರಂದು ಬೆಳಿಗೆಗ 9 ಗಂಟೆಗೆ ಬಾಧಿತಳು ಶಾಲೆಗೆ ಹೋಗುವ ಸಮಯದಲ್ಲಿ  ಹೊಸಳ್ಳಿ ಕ್ರಾಸ್ ಹತ್ತಿರ ತನ್ನ ಮಾವನ ಮೋಟಾರ ಸೈಕಲ್ ತೆಗೆದುಕೊಂಡು ಬಂದು ಶಾಲೆಗೆ ಬಿಡುವುದಾಗಿ ಹೇಳಿ ಮೋಟಾರ್ ಸೈಕಲ್ ಮೇಲೆ ಹತ್ತುವಂತೆ ಹೇಳಿದಾಗ ಬಾಲಕಿ ನಿರಾಕರಿಸಿದ್ದಳು. ಅವಳನ್ನು ಹೆದರಿಸಿ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಶಾಲೆಗೆ ಬಿಡದೇ ಬಲವಂತವಾಗಿ ಮಲ್ಲಾಪುರ ಸೀಮಾದ ವಾನಭದ್ರೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ 2 ದಿನಗಳ ಕಾಲ ಅತ್ಯಾಚಾರ ಎಸಗಿದ್ದನು. ಹಾಗೂ ಈ ವಿಷಯವನ್ನು ಯಾರಿಗಾದರು ಹೇಳಿದಲ್ಲಿ ನಿನ್ನ ಮತ್ತು ನಿನ್ನ ಅಪ್ಪನನ್ನು ಸಾಯಿಸುವುದಾಗಿ ಜೀವ ಹೆದರಿಕೆ ಹಾಕಿದ್ದನು.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಲೀಸ್ ನೀರಿಕ್ಷಕ ಮಂಜುನಾಥ ಎಸ್. ಅವರು ದೂರು ಸ್ವೀಕರಿಸಿ ಪ್ರಕರಣದ ತನಿಖೆಯನ್ನು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.  
ಪ್ರಕರಣವು ಸ್ಪೇ.ಎಸ್‌ಸಿ[ಪೋಕ್ಸೊ] ಸಂ: 13/2024 ರಲ್ಲಿ ದಾಖಲಾಗಿ ವಿಚಾರಣೆಗೊಂಡಿದ್ದು, ವಿಚಾರಣೆಯನ್ನು ನಡೆಸಿದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಆರೋಪಿಯ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುವಂತೆ ಹಾಗೂ ರೂ. 1,50,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಡಿಸೆಂಬರ್ 19 ರಂದು ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವಿಶ್ವನಾಥ ಹಾಗೂ ಮಂಜುನಾಥ ಇವರು ನ್ಯಾಯಾಲಯದಲ್ಲಿ ಸಾಕ್ಷಿದಾರರನ್ನು ಸಕಾಲಕ್ಕೆ ಹಾಜರುಪಡಿಸಿ ಸಹಕರಿಸಿರುತ್ತಾರೆ ಎಂದು ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ತುಂಗಭದ್ರಾ ಜಲಜಾಗೃತಿ ಪಾದಾಯಾತ್ರೆ ಚಾಲನೆಗೆ ಸುಭಾಷ್‌ಚಂದ್ರ ಬೋಸ್ ಮೊಮ್ಮಗಳು೧೬೦ ಕಿಲೋಮೀಟರ್ ಪಾದಯಾತ್ರೆ ನಾಳೆ ಆರಂಭ: ಬಹುಸಂಖ್ಯೆಯಲ್ಲಿ ಪಾಲೊಗಳ್ಳಿ: ಪರಣ್ಣ ಮುನವಳ್ಳಿ

ತುಂಗಭದ್ರಾ ಜಲಜಾಗೃತಿ ಪಾದಾಯಾತ್ರೆ ಚಾಲನೆಗೆ ಸುಭಾಷ್‌ಚಂದ್ರ ಬೋಸ್ ಮೊಮ್ಮಗಳು
೧೬೦ ಕಿಲೋಮೀಟರ್ ಪಾದಯಾತ್ರೆ ನಾಳೆ ಆರಂಭ: ಬಹುಸಂಖ್ಯೆಯಲ್ಲಿ ಪಾಲೊಗಳ್ಳಿ: ಪರಣ್ಣ ಮುನವಳ್ಳಿ

Subhash Chandra Bose’s granddaughter to launch Tungabhadra Water Awareness Walk 160-kilometer walk begins tomorrow: Palogalli in large numbers: Paranna Munavalli

oplus 0
oplus_0

ಗಂಗಾವತಿ: ದೇಶದ ಬಹುತೇಕ ನದಿಗಳು ಕುಡಿಯಲು ಯೋಗ್ಯವಾಗದಷ್ಟು ಕಲುಷಿತಗೊಂಡಿರುವ ಕುರಿತು ವರದಿಗಳು ಸ್ಪಷ್ಟಪಡಿಸುತ್ತಿದ್ದು, ಭವಿಷ್ಯತ್ತಿನ ಹಿತದೃಷ್ಟಿಯಿಂದ ತುಂಗಭದ್ರ ನದಿಯ ಮಲೀನ್ಯ ತಡೆಯಬೇಕಾದ ಅನಿವಾರ್ಯತೆಯಿದೆ ಸರಕಾರದ ಗಮನಸೆಳೆಯಲು ಮತ್ತು ಜನಜಲಜಾಗೃತಿಗಾಗಿ ನಾಳೆ ಡಿ.೨೭ ಬೆಳಗ್ಗೆ ೧೦.೩೦ಕ್ಕೆ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾಪತಿ ದೇವಸ್ಥಾನದ ವೇದಿಕೆ ಕಾರ್ಯಕ್ರಮದ ನಂತರ ಮಂತ್ರಾಲಯದವರೆಗೆ ಪಾದಯಾತ್ರೆ ಆರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು, ವರ್ತಕರು, ಗಣ್ಯರು ಸರ್ವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು.
ಅವರು ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಜಲಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿಯಾನದ ಪ್ರಮುಖರಾದ ಬಸವರಾಜ್ ಬಸವರಾಜ್ ವೀರಾಪುರ ಮಾತನಾಡಿ, ಅತಿಯಾದ ರಸಾಯನಿಕ ಬಳಕೆ, ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಬಿಡುತ್ತಿರುವುದರಿಂದ ದೇಶದ ೮೦ಕ್ಕು ಹೆಚ್ಚು ನದಿಗಳು ಕಲುಷಿತಗೊಂಡಿದ್ದು, ತುಂಗಭದ್ರ ನದಿಯು ಇದಕ್ಕೆ ಹೊರತಾಗಿಲ್ಲ, ಶಿವಮೊಗ್ಗಾದಿಂದ ಕಿಷ್ಕಂಧೆವರೆಗೆ ಎರಡು ಹಂತದ ಪಾದಯಾತ್ರೆ ಯಶಸ್ವಿಯಾಗಿ ಪೂರೈಸಿದ್ದು, ಮೂರನೆ ಹಂತದ ಪಾದಯಾತ್ರೆ ಗಂಗಾವತಿಯಿAದ ಆರಂಭಗೊಳ್ಳಲಿದೆ, ನದಿಯಲ್ಲಿನ ಮರಳು ಗಣಗಾರಿಕೆಯಿಂದ ಭೂ ಸವಕಳಿ, ರೈತರು ಕ್ರಿಮಿ ನಾಶಕ ಬಳಸಿದ ಹೊಲಗದ್ದೆಗಳ ನೀರು ಹಾಗು ಶೌಚಾಲಯಗಳ ನೀರು ಹಳ್ಳಗಳ ಮೂಲಕ ನದಿ ಸೇರುವುದಿರಂದ ಕಲುಷಿತಗೊಳ್ಳುತ್ತಿದ್ದು ಇದಕ್ಕಾಗಿ ಜನ ಜಾಗೃತಿ ಮೂಲಕ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವುದು ಅತ್ಯಗತ್ಯವಾಗಿದ್ದು, ಪಾದಯಾತ್ರೆ ವೇದಿಕೆ ಕಾರ್ಯಕ್ರಮವನ್ನು ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗಳು ಕೊಲ್ಕೊತ್ತಾದ ರಾಜಶ್ರೀ ಚೌದರಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಲಜಾಗೃತಿ ಕ್ರಾಂತಿಯ ರಾಜೇಂದ್ರ ಸಿಂಗ್ ರಾಜಸ್ತಾನ್, ಗದಗಿನ ಡಿ.ಆರ್.ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು, ಪಾಲ್ಗೊಳ್ಳಲಿದ್ದಾರೆ ಎಂದರು. ನಿರ್ಮಲ ತುಂಗಭದ್ರ ಜಾಗೃತಿ ಅಭಿಯಾನದ ಕೊಪ್ಪಳ ಜಿಲ್ಲಾ ಸಂಚಾಲಕರಾದ ಶಿವುಕುಮಾರ್ ಮಾಲಿಪಾಟೀಲ್ ಮಾತನಾಡಿ, ಅಭಿಯಾನಕ್ಕೆ ಹಲವಾರು ಜನತೆ ಸಾತ್ ನೀಡಿದ್ದು, ವೈದ್ಯರು, ಸಾಹಿತಿಗಳು, ಸಮಾಜ ಸೇವಕರು, ಸಂಘ ಸಂಸ್ಥೆಗಳು ಹಾಗು ಗಣ್ಯಮಾನ್ಯರು ಸಹಕಾರೊಂದಿಗೆ ಪಾದಯಾತ್ರೆ ಯಶಸ್ವಿಗೊಳ್ಳುವ ಭರವಸೆ ಇದೆ, ಪಾದಯಾತ್ರೆಗೆ ಹಲವಾರು ಜನರು ಹೆಸರು ನೊಂದಾಯಿಸಿದ್ದು, ಪ್ಲಾಸ್ಟಿಕ್ ಮುಕ್ತವಾಗಿರಲಿದೆ, ವೇದಿಕೆ ಕಾರ್ಯಕ್ರಮಕ್ಕೆ ಎಂಟನೂರಕ್ಕು ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಜಲಜಾಗೃತಿ ಪಾದಯಾತ್ರೆ ಪೋಷ್ಟರ್ ಬಿಡುಗಡೆಗೊಳಿಸಲಾಯಿತು. ನಿರ್ಮಲ ತುಂಗಭದ್ರ ಜನಜಾಗೃತಿ ರಾಯಬಾರಿ ಲಲಿತಾರಾಣಿ ಶ್ರೀ ರಂಗದೇವರಾಯಲು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಜಗನ್ನಾಥ ಆಲಂಪಲ್ಲಿ, ವಿಷ್ಣುತೀರ್ಥ ಜೋಷಿ, ಪವನ್ ಕುಮಾರ್ ಗುಂಡೂರು, ಮಂಜುನಾಥ ಕಟ್ಟಿಮನಿ, ಅರ್ಜುನ್ ಹಾಗು ಶಿವುಕುಮಾರ ಇತರರಿದ್ದರು.

ಗಂಗಾವತಿಯ ಶರಣಬಸವೇಶ್ವರ ನಗರದಲ್ಲಿ ಯಶಸ್ವಿಯಾಗಿ ಜರುಗಿದನಾದಯೋಗಿ ಜನಪದ ಸಂಗೀತ ಸಂಭ್ರಮ

ಗಂಗಾವತಿಯ ಶರಣಬಸವೇಶ್ವರ ನಗರದಲ್ಲಿ ಯಶಸ್ವಿಯಾಗಿ ಜರುಗಿದ
ನಾದಯೋಗಿ ಜನಪದ ಸಂಗೀತ ಸಂಭ್ರಮ

Nadayogi folk music festival successfully held in Sharanabasaveshwara Nagar, Gangavathi

whatsapp image 2025 12 26 at 12.40.57 pm

ಗAಗಾವತಿ: ಡಿಸೆಂಬರ್-೨೫ ರಂದು ಶ್ರೀ ನಾದಯೋಗಿ ಸಂಗೀತ ಹಾಗೂ ಸಾಂಸ್ಕೃತಿಕ ಸಂಸ್ಥೆ (ರಿ) ಗಂಗಾವತಿ ಇವರಿಂದ ನಗರದ ಶರಣಬಸವೇಶ್ವರನಗರದ ಸರಕಾರಿ ಶಾಲೆಯ ಆವರಣದಲ್ಲಿ ನಾದಯೋಗಿ ಜನಪದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲೆಯ ಜನಪದ ಅಕಾಡೆಮಿಯ ಸದಸ್ಯರಾದ ಚಂದ್ರಶೇಖರ್ ಲಿಂಗದಳ್ಳಿ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ, ಈಗಿನ ಕಾಲದಲ್ಲಿ ಸಂಗೀತ ನಶಿಸಿ ಹೋಗುತ್ತಿದೆ, ಮೂಲ ಜಾನಪದಗಳು ಮರೆಯಾಗುತ್ತಿವೆ. ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ಕಲಾವಿದ ಹುಟ್ಟಬೇಕು, ಅಶ್ಲೀಲ ಜಾನಪದಗಳಿಗೆ ಮಾರುಹೋಗದೇ, ಶಾಸ್ತçಬದ್ಧವಾಗಿ ಹಾಡುವುದನ್ನು ಕಲಿಯಬೇಕು, ಇದಕ್ಕಾಗಿ ಗಂಗಾವತಿಯಲ್ಲಿ ಶ್ರೀಮತಿ ಸಂಗೀತ ಶರಣಪ್ಪ ರವರು ಸಂಗೀತ ಶಾಲೆ ಪ್ರಾರಂಭಿಸಿ, ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡಲಿದ್ದಾರೆ. ಇದಕ್ಕಾಗಿ ಎಲ್ಲಾ ಪಾಲಕರು ಮಕ್ಕಳಲ್ಲಿ ಸಂಗೀತ ಆಸಕ್ತಿ ಬೆಳೆಸುವ ಮೂಲಕ ಸಂಗೀತವನ್ನು ಉಳಿಸುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ಮಾಜಿ ನಗರಸಭೆ ಸದಸ್ಯರಾದ ಶ್ರೀಮತಿ ಪಾರ್ವತಮ್ಮ ದುರ್ಗೇಶ್ ದೊಡ್ಡಮನಿ ವಹಿಸಿ ಮಾತನಾಡಿ, ನಿಜವಾದ ಸಂಗೀತ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಮೊದಲಿನ ಸಂಗೀತಕ್ಕೂ ಈಗಿನ ಸಂಗೀತಕ್ಕೂ ಬಹಳ ವ್ಯತ್ಯಾಸವಿದೆ. ಹಳ್ಳಿಯ ಸೊಗಡು, ರೈತರ ಒಂದು ಭಾವನೆ, ಪ್ರೀತಿ ವಿಶ್ವಾಸವನ್ನು ಕುರಿತು ಸಾಹಿತ್ಯಗಳು ಸೃಷ್ಟಿಯಾಗುತ್ತಿದ್ದವು ಆದರೆ ಈಗಿನ ಹಾಡುಗಳನ್ನು ಕೇಳಿದರೆ ಮನಸ್ಸಿಗೆ ಬಹಳ ಬೇಸರವಾಗುತ್ತದೆ, ಹಾಡುಗಳು ಒಬ್ಬ ಕಲಾವಿದ ಹಾಡಿದರೆ ಮನಸ್ಸು ಹಗುರವಾಗುವುದು ನೆಮ್ಮದಿ ಸಿಗುವುದು, ಆದರೆ ಈಗಿನ ಹಾಡುಗಳಿಂದ ಹೃದಯಾಘಾತವಾಗುವ ಸಂಭವ ಉದ್ಭವಿಸಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸರಿಗಮ ಹನುಮಂತಪ್ಪ, ಶಿವಣ್ಣ ನೀಲಕಮಲ್, ಸಿದ್ದಪ್ಪ ಅಧಿಕಾರಿ, ಪಕೀರಪ್ಪ ಅರಿಕೇರಿ, ಮಂಜುನಾಥ ಕನಕಗಿರಿ, ನವೀನ್ ಕುಮಾರ್, ಮಲ್ಲಪ್ಪ ಹಿರೇನಂದಿಹಾಳ, ಅಮೀದ್ ಮುಲ್ಲಾ, ಯಮನೂರ ಹತ್ತಿಮರದ, ಬಸವರಾಜ ಹಡಪದ ಅವರುಗಳು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಕೀಬೋರ್ಡ್ನ್ನು ರಾಮಚಂದ್ರಪ್ಪ ಉಪ್ಪಾರ್ ಕೊಪ್ಪಳ, ತಬಲ ವಾದನವನ್ನು ಮಾರುತಿ ಬಿನ್ನಾಳ ದೊಡ್ಡಮನಿ, ರಿದಂಪ್ಯಾಡ್‌ನ್ನು ಪುಟ್ಟರಾಜ್ ಕೊಪ್ಪಳ ನುಡಿಸಿದರು, ಸಹ ಕಲಾವಿದರಾಗಿ ಮಲ್ಲೇಶಪ್ಪ ವಡ್ಡಟ್ಟಿ, ಅಲ್ಲಾಭಕ್ಷಿ ಭೀಮನೂರ್, ನರಸಿಂಹ ದರೋಜಿ, ಶ್ರೀಮತಿ ಸಂಗೀತ ಶರಣಪ್ಪ, ಗವೀಶ್ ನರೇಗಲ್, ಬಸವರಾಜ್ ಅರಸಿನಕೇರಿ, ಕುಮಾರಿ ಸೃಷ್ಟಿ, ನಯನ, ಚಾಂದಿನಿ, ಕೈಲಾಶ್, ಧನ್ಯಶ್ರೀ ಸೇರಿದಂತೆ ಇತರ ಕಲಾವಿದರು ಭಾಗವಹಿಸಿದ್ದರು.

ಗೃಹರಕ್ಷಕದಳ ದೇಶಸೇವೆಗೆ ಮುಡಿಪಾದ ಒಂದು ಶಕ್ತಿ: ಸರಸ್ವತಿ ನಾಗರಾಜ್

ಗೃಹರಕ್ಷಕದಳ ದೇಶಸೇವೆಗೆ ಮುಡಿಪಾದ ಒಂದು ಶಕ್ತಿ: ಸರಸ್ವತಿ ನಾಗರಾಜ್

Home Guards are a force dedicated to serving the nation: Saraswati Nagaraj

whatsapp image 2025 12 26 at 3.45.16 pm (1)

ಕುಕನೂರು: ಭಾರತ ಸೇನೆಗೆ ಗೃಹರಕ್ಷಕ ದಳದ ಕೊಡುಗೆ ಅಪಾರವಾಗಿದೆ. ಈಗಿನ ಗೃಹರಕ್ಷಕರೇ ಮುಂದಿನ ವೀರಯೋಧರು. ಗೃಹರಕ್ಷಕದಳ ಸಮಾಜದ ರಕ್ಷಣೆಗೆ ನಿಂತಿದೆ. ಇವರ ಸೇವೆ ದೇಶಸೇವೆಗೆ ಮುಡಿಪಾದ ಒಂದು ಶಕ್ತಿಯಾಗಿದೆ ಎಂದು ಕಲ್ಯಾಣ ಸ್ಪೂರ್ತಿ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರಾದ ಶ್ರೀಮತಿ ಸರಸ್ವತಿ ನಾಗರಾಜ್ ಅವರು ಶ್ಲಾಘಿಸಿದರು.
ಅವರು ಡಿಸೆಂಬರ್-೨೬ ಶುಕ್ರವಾರ ಕುಕನೂರಿನ ವಿದ್ಯಾನಂದ ಗುರುಕುಲ ಕಾಲೇಜಿನ ಹುತಾತ್ಮ ಭವನದಲ್ಲಿ ಅಖಿಲ ಭಾರತ ಗೃಹರಕ್ಷಕ ದಳದ ೬೩ನೇ ವರ್ಷದ ದಿನಾಚರಣೆ ಹಾಗೂ ಕುಕನೂರು ಗೃಹರಕ್ಷಕ ದಳದ ೨೫ನೇ ವರ್ಷದ ರಜತ ಮಹೋತ್ಸವದ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಗೃಹರಕ್ಷಕ ದಳ ಒಂದು ಇಲಾಖೆಯಲ್ಲ, ಇದು ನಮ್ಮ ನಾಡಿನ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಸ್ತು, ಧೈರ್ಯ ಮತ್ತು ನಿಸ್ವಾರ್ಥ ಸೇವೆ ಹೊಂದಿ, ಸಮಾಜದ ರಕ್ಷಣೆಯಲ್ಲಿ ತೊಡಗಿರುತ್ತದೆ. ಇದೇ ರೀತಿ ಗೃಹರಕ್ಷಕದಳ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜದ ರಕ್ಷಣೆಯಲ್ಲಿ ತೊಡಗಲಿ ಎಂದು ಆಶಿಸಿದರು.
ಈ ದಿನಾಚರಣೆಯ ದಿವ್ಯ ಸಾನಿಧ್ಯವನ್ನು ಕುಕನೂರು ಶ್ರೀ ಅನ್ನದಾನೇಶ್ವರ ಶಾಖಾಮಠದ ಪ.ಪೂ ಮಹಾದೇವ ದೇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಗೃಹರಕ್ಷಕದಳದ ಜಿಲ್ಲಾ ಸಮಾಧೇಷ್ಠರಾದ ಕೆ. ಲಕ್ಷö್ಮಣ ಕಡೆಮನಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೀರಣ್ಣ ಬಡಿಗೇರ್, ಬಾಳಪ್ಪ ಕುಕುನೂರು, ಮೀರಾಸಾಬ್, ಶಿವಶರಣಪ್ಪ ಎಫ್‌ಡಿಸಿ. ಬೀದರ್, ಬಸವರಾಜ್ ಯಲಬುರ್ಗಾ, ರವೀಂದ್ರ ಬಾಕಳೆ, ಗೃಹರಕ್ಷಕದಳ ಇಲಾಖೆಯ ಸಿಬ್ಬಂದಿ ವರ್ಗದವರು ವಿವಿಧ ಘಟಕಗಳ ಅಧಿಕಾರಿಗಳು, ಗೃರಕ್ಷಕ, ಸಿ.ಮಂಜುನಾಥ್., ಪಿ.ಕುಮಾರ್, ತಿಮ್ಮಣ್ಣ ನಾಯಕ್ ಇನ್ನುಳಿದ ಗೃಹರಕ್ಷಕರು, ಗೃಹರಕ್ಷಕಿಯರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಲಾರ ಮಲ್ಲಣ್ಣ ದೇವಸ್ಥಾನದ ಜಾತ್ರಾ ಸಂಪನ್ನ

ಮೈಲಾರ ಮಲ್ಲಣ್ಣ ದೇವಸ್ಥಾನದ ಜಾತ್ರಾ ಸಂಪನ್ನ

photo 1


ಭಾಲ್ಕಿ, ಡಿ. ೨೬- ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ನಡೆದ ಒಂದು ತಿಂಗಳ ಕಾಲ ನಡೆದ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ದೇವಸ್ಥಾನದ ಹಿರಿವಗ್ಗೆ, ಪೂಜಾರಿಗಳಿಗೆ ದೇವಸ್ಥಾನದ ವತಿಯಿಂದ ಅದ್ದೂರಿ ಸನ್ಮಾನ ಮಾಡಲಾಯಿತು.
ದೇವಸ್ಥಾನದ ಸುತ್ತ-ಮುತ್ತಲಿರುವ ಗಣೇಶ ಕುಂಡ, ತೆಪ್ಪದ ಕುಂಡ, ಜ್ಯೋರ್ತಿಲಿಂಗ ದೇವಸ್ಥಾನ, ಘೃತಮಾರಿ ದೇವಸ್ಥಾನಗಳಿಗೆ ನೈವದ್ಯ ತೋರಿ ಪೂಜೆ ಸಲ್ಲಿಸಲಾಯಿತು.


ದೇವಸ್ಥಾನ ವತಿಯಿಂದ ಹಿರಿವಗ್ಗೆಗಳಿಗೆ ಮತ್ತು ದೇವಸ್ಥಾನದ ಆಡಳಿತಾಧಿಕಾರಿಗಳಾದ ಆನಂತರಾವ ಕುಲಕರ್ಣಿ ನೂತನ ಕಾರ್ಯದರ್ಶಿಯಾದ ಸಂಜೀವಕುಮಾರ ಸುಂದಾಳ ಅವರಿಗೂ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

photo 3

ಪಂಚನದಿ ಸಚಿವಾಲಯ ಮಾಡಿ ಹೆಚ್.ಆರ್.ಶ್ರೀನಾಥ್ ಆಗ್ರಹ

ಪಂಚನದಿ ಸಚಿವಾಲಯ ಮಾಡಿ ಹೆಚ್.ಆರ್.ಶ್ರೀನಾಥ್ ಆಗ್ರಹ

Election schedule announced for formation of Koppal District Planning Committee

oplus 0
oplus_0


ಗಂಗಾವತಿ: ಕಲುಷಿತ ನದಿಗಳು ಸ್ವಚ್ಛತೆಗಾಗಿ ಪ್ರತ್ಯೇಕ ಸಚಿವಾಲಯಗಳನ್ನು ಮಾಡುವ ಮೂಲಕ ನದಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ನಿರ್ಮಲ ತುಂಗಭದ್ರ ಅಭಿಯಾನಕ್ಕೆ ಬೆಂಬಲ ನೀಡಿ ಮಾತನಾಡಿದರು. ನದಿಗಳ ಸ್ವಚ್ಛತೆ ಕುರಿತು ಜನಜಾಗೃತಿ ಅಗತ್ಯವಿದ್ದು, ಕಲಷಿತ ನೀರು ನದಿಪಾತ್ರ ಸೇರದಂತೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ತ್ಯಾಜ್ಯಗಳು ನದಿ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ, ನೀರು ನಮ್ಮ ಜೀವನಕ್ಕೆ ಅತ್ಯಮುಲ್ಯ, ಆರೋಗ್ಯಯುತ ಜೀವನ ಸವೆಸಬೇಕಾದರೆ ದೊಡ್ಡಪ್ರಮಾಣದ ಬದಲಾವಣೆ ಆಗಬೇಕಿದೆ. ಸಚಿವಾಲಯವಾದರೆ ಮಲಿನತೆ ನಿವಾರಣೆಯಾಗಲಿದೆ. ಗಂಗಾವತಿಯಿAದ ಪಾದಯಾತ್ರೆ ಹೊರಡುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಬೇಕಿದೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ, ಸುರೇಶ್ ಗೌರಪ್ಪ ಇತರರಿದ್ದರು.

ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ ವೇಳಾಪಟ್ಟಿ ಪ್ರಕಟ

ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ ವೇಳಾಪಟ್ಟಿ ಪ್ರಕಟ

Election schedule announced for formation of Koppal District Planning Committee


ಕೊಪ್ಪಳ ಡಿಸೆಂಬರ್ 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ-2025ರ ವೇಳಾಪಟ್ಟಿ ಪ್ರಕಟಿಸಲಾಗಿದೆ.
 ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ 1996 (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) ನಿಯಮಗಳು 1996ರ ನಿಯಮ 8ರ ಪ್ರಕಾರ ಪುರಸಭೆ ಮತ್ತು ಪಟ್ಟಣ ಪಂಚಾಯತಿ ಮತ ಕ್ಷೇತ್ರದಿಂದ ಕೊಪ್ಪಳ ಜಿಲ್ಲೆಯ ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಬೇಕಾಗಿದ್ದು, ಕರ್ನಾಟಕ ಪಂಚಾಯತ್ ರಾಜ್ (ಜಿಲ್ಲಾ, ಯೋಜನಾ ಸಮಿತಿಯ ಸದಸ್ಯರುಗಳ ಚುನಾವಣೆ) ನಿಯಮಗಳು-1996 ನಿಯಮ 8 ರನ್ವಯ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಯೋಜನಾ ಸಮಿತಿ ಚುನಾವಣೆಗಳ ಪದನಿಮಿತ್ತ ಚುನಾವಣಾ ಅಧಿಕಾರಿ ವರ್ಣಿತ್ ನೇಗಿ ಅವರು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ಯೋಜನಾ ಸಮಿತಿ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಿರುತ್ತಾರೆ.
 ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ-2025ಕ್ಕೆ ಸಂಬಂಧಿಸಿದಂತೆ ಕಾರಟಗಿ ಪುರಸಭೆ ಮತ್ತು ಕುಕನೂರು, ಕನಕಗಿರಿ, ತಾವರಗೇರಾ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತಿ ಸೇರಿದಂತೆ ಈ ನಗರ ಸ್ಥಳೀಯ ಸಂಸ್ಥೆಗಳ ಪುರಸಭಾ ಕ್ಷೇತ್ರದ ಒಟ್ಟು 96 ಮತದಾರರಿದ್ದು, ಈ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಂದ 6 ಸದಸ್ಯರನ್ನು ಚುನಾಯಿಸಬೇಕಾಗಿದೆ.
*ಚುನಾವಣೆ ವೇಳಾಪಟ್ಟಿ ವಿವರ:* ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ರಚನೆಗೆ ಚುನಾವಣೆ-2025 ವೇಳಾಪಟ್ಟಿ ವಿವರ ಇಂತಿದೆ. ನಾಮ ನಿರ್ದೇಶನಗಳನ್ನು ಸಲ್ಲಿಸಲು 2025ರ ಡಿಸೆಂಬರ್ 23 ರಿಂದ 2026ರ ಜನವರಿ 5ರ ವರೆಗೆ ಬೆಳಿಗೆ 10 ರಿಂದ ಅಪರಾಹ್ನ 3 ಗಂಟೆಯವರೆಗೆ ಸಮಯವಕಾಶವಿದ್ದು, ಚುನಾವಣಾಧಿಕಾರಿಗಳು, ಜಿಲ್ಲಾ ಯೋಜನಾ ಸಮಿತಿ ಚುನಾವಣೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿ, ಕೊಪ್ಪಳ ಇಲ್ಲಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬೇಕು. 2026ರ ಜನವರಿ 6 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜನವರಿ 9 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನಾಂಕವಾಗಿದ್ದು, ಜನವರಿ 13 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 4 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಮತದಾನದ ಜರುಗಲಿದೆ. ಜ. 13ರಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯುವ ಮೂಲಕ ಈ ಚುನಾವಣೆ ಪ್ರಕ್ರಿಯ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಯೋಜನಾ ಸಮಿತಿ ಚುನಾವಣೆಯ ಚುನಾವಣಾಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
****