Breaking News
ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಚಾಲನೆ

ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನಕ್ಕೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಚಾಲನೆ

District Collector, ZP CEO launch 'Your Money, Your Rights' campaign

ಕೊಪ್ಪಳ ಡಿಸೆಂಬರ್ 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವಾರಸುದಾರರು ಇಲ್ಲದ ಬ್ಯಾಂಕ್ ಠೇವಣಿಗಳ ಖಾತೆಗಳಲ್ಲಿ ಉಳಿದಿರುವ ಹಣವನ್ನು ಮೂಲ ಠೇವಣಿದಾರರಿಗೆ ಅಥವಾ ನಾಮನಿರ್ದೇಶಿತರಿಗೆ ಮರುಪಾವತಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ ಅವರು ಸೋಮವಾರ ಜಿಲ್ಲಾಡಳಿತ ಭವನದಲ್ಲಿರುವ ಕೆಸ್ವಾನ್ ಸಭಾಂಗಣದಲ್ಲಿ ಚಾಲನೆ ನೀಡಿದರು.
ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಮೋನಿರಾಜ ಬೃಹ್ಮಾ ಅವರು ಮಾತನಾಡಿ, ವಾರಸುದಾರರು ಇಲ್ಲದ ಬ್ಯಾಂಕ್‌ಗಳಲ್ಲಿರುವ ಠೇವಣಿಗಳನ್ನು ಪತ್ತೆಹಚ್ಚಿ, ಸಂಬಂಧಿಸಿದ ಬ್ಯಾಂಕ್ ಖಾತೆಗಳ ಮೂಲಕ ಮೊತ್ತವನ್ನು ಮೂಲ ಠೇವಣಿದಾರರು ಅಥವಾ ನಾಮನಿರ್ದೇಶಿತರಿಗೆ ಮರುಪಾವತಿಸಲು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಡಿಇಎಎಫ್ (ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ)ಗೆ ವರ್ಗಾಯಿಸಲಾದ ಠೇವಣಿಗಳನ್ನು ಮರು ಮುಖ್ಯವಾಹಿನಿಗೆ ತಂದು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2,59,476 ಡಿಇಎಎಫ್ ಖಾತೆಗಳು ಬಾಕಿ ಉಳಿದಿದ್ದು, ರೂ. 53.35 ಕೋಟಿ ಮೊತ್ತ ವಾರಸುದಾರರು ಇಲ್ಲದೆ ಠೇವಣಿಯಾಗಿ ಉಳಿದುಕೊಂಡಿದೆ. ಇದುವರೆಗೆ 211 ಖಾತೆಗಳಲ್ಲಿರುವ ರೂ. 1.27 ಕೋಟಿ ಮೊತ್ತವನ್ನು ಗುರುತಿಸಿ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ ಕರ್ಪಾನಿ ಸೇರಿದಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೇನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಅವರಿಗೆ ಗದಗ್ ಬೆಟಗೇರಿಯಲ್ಲಿ ಕುರುಹಿನ ಸಮಾಜದಿಂದ ಆತ್ಮೀಯ ಸನ್ಮಾನ,

ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಅವರಿಗೆ ಗದಗ್ ಬೆಟಗೇರಿಯಲ್ಲಿ ಕುರುಹಿನ ಸಮಾಜದಿಂದ ಆತ್ಮೀಯ ಸನ್ಮಾನ,


Vastu expert Dr. Manjunath Kurugodu was felicitated by the Kuruha community in Betageri, Gadag.

ಗದಗ.ಶ್ರೀ 1008 ನಾಲ್ಮಡಿ ನೀಲಕಂಠ ಪಟ್ಟದಾರ್ಯ್ಯಾ ಮಹಾಸ್ವಾಮಿಗಳು ಗದಗ ಬೆಟಗೇರಿ ಪರಮಪೂಜ್ಯರ ಸಾನಿಧ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ವಾಸ್ತು ತಜ್ಞರಾದ ಡಾಕ್ಟರ್ ಮಂಜುನಾಥ್ ಕುರುಗೋಡು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶುಭ ಆಶೀರ್ವಾದ ಮಾಡಿದರು ವಾಸ್ತು ಕ್ಷೇತ್ರದಲ್ಲಿ ಡಾಕ್ಟರ್ ಮಂಜುನಾಥ್ ಕುರುಗೋಡು ಅವರು ಮಾಡಿರುವ ಸಾಧನೆ ಕುರುಹೀನ ಶೆಟ್ಟಿ ಸಮಾಜಕ್ಕೆ ಹೆಮ್ಮೆಯ ಸಂಗತಿ ಆಗಿದೆ ಎಂದು ಪರಮಪೂಜ್ಯರು ತಮ್ಮ ಶುಭ ಆಶೀರ್ವಾದದಲ್ಲಿ ತಿಳಿಸಿದರು ಸನ್ಮಾನ ಕಾರ್ಯಕ್ರಮದಲ್ಲಿ ಬೆಟಗೇರಿಯ ಕುರುಹಿನ ಶೆಟ್ಟಿ ಸಮಾಜದ ಗಣ್ಯಮಾನ್ಯರು ದೈವ ದವರು ಯಜಮಾನರು ಇಂಜಿನಿಯರ್ ಎಂ ಸಿ ಐಲಿ, ದೇವೇಂದ್ರಪ್ಪ ಗೋಟೂರು ಬಸಪ್ಪ ಯಜಮಾನರು ಕೊಪ್ಪಳ ಸಿದ್ದಲಿಂಗಯ್ಯ ಕಿನ್ನಾಳ ಮಠ ಹಾಗೂ ಹಿರಿಯ ಪತ್ರಕರ್ತರಾಗಿರುವ ಗಂಗಾವತಿಯ, ಪಿ ದಶರಥ ಅವರುಗಳು ಉಪಸ್ಥಿತರಿದ್ದರು

ಕುವೆಂಪುರವರ. ಆದರ್ಶವೆ ನಮಗೆ ಮಾಧರಿ ,ಬಿಜೆಪಿ ಮುಖಂಡರಾದ ವೆಂಕಟೆಗೌಡ ಅಭಿಮತ .

ಕುವೆಂಪುರವರ. ಆದರ್ಶವೆ ನಮಗೆ ಮಾಧರಿ ,ಬಿಜೆಪಿ ಮುಖಂಡರಾದ ವೆಂಕಟೆಗೌಡ ಅಭಿಮತ .


Kuvempu's ideal is Madhari, BJP leader Venkat Gowda's opinion.

ವರದಿ: ಬಂಗಾರಪ್ಪ .ಸಿ.
ಹನೂರು: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವಿಶ್ವಮಾನವ ಒಕ್ಕಲಿಗರ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುವೆಂಪು ಅವರು ರಚಿಸಿದ ನಾಡಗೀತೆಗೆ ಶತಮಾನೋತ್ಸವ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅನ್ನಸಂತರ್ಪಣೆ ಆಯೋಜಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಹಿರಿಯ ಮುಖಂಡ ವೆಂಕಟೇಗೌಡ ಮಾತನಾಡಿ, ರೈತ ಕುಟುಂಬದಲ್ಲಿ ಜನಿಸಿ ರಾಷ್ಟ್ರಕವಿ ಎಂಬ ಖ್ಯಾತಿ ಪಡೆದ ಕುವೆಂಪು ಅವರು ನೀಡಿದ ವೈಚಾರಿಕ ಚಿಂತನೆಗಳನ್ನು ಇಂದು ನಾವು ಜೀವನದಲ್ಲಿ ಅನುಸರಿಸುವಲ್ಲಿ ವಿಫಲರಾಗುತ್ತಿದ್ದೇವೆ. ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದುಂದು ವೆಚ್ಚಗಳಿಗೆ ವಿರೋಧವಾಗಿ ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹ ಸಂದರ್ಭದಲ್ಲಿ ಮಂತ್ರಮಾಂಗಲ್ಯ ಬೋಧನೆ ಮಾಡಿ, ಧರ್ಮ–ಜಾತಿ ಮೀರಿ “ನಾನು ವಿಶ್ವಪಥದತ್ತ ಸಾಗುತ್ತಿದ್ದೇನೆ” ಎಂದು ಸಾರಿದ ಮಹಾನ್ ಕವಿ ಎಂದು ಅವರು ಸ್ಮರಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಯಾಗಿ ಕುವೆಂಪು ಅವರು ಸದಾ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಹ ವೈಚಾರಿಕ ಬೆಳಕು ಚೆಲ್ಲಿದ್ದಾರೆ. ಮನುಷ್ಯನು ವಿಶ್ವಮಾನವನಾಗಬೇಕೆಂಬ ಸಂದೇಶವನ್ನು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ನೀಡಿದ್ದು, ಅವರ ತತ್ವಗಳನ್ನು ಜೀವನಪೂರ್ತಿ ಅಳವಡಿಸಿಕೊಳ್ಳಬೇಕು ಎಂದರು.
ಕುವೆಂಪು ಜಯಂತಿ ಪ್ರಯುಕ್ತ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪಟ್ಟಣದ ನಾಗರಿಕರಿಗೆ ಸಿಹಿ ಹಂಚಲಾಯಿತು. ಜೊತೆಗೆ ಕುವೆಂಪು ಅವರು ರಚಿಸಿದ ನಾಡಗೀತೆಗೆ ನೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಾಡಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು.

ಇದೇ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆನಂದ್ ಕುಮಾರ್, ನಾಮನಿರ್ದೇಶಿತ ಸದಸ್ಯ ಮಹಾದೇಶ್, ಬಸವರಾಜು, ಮಾಜಿ ಉಪಾಧ್ಯಕ್ಷ ಮಾದೇಶ್,ಗೀರಿಶ್ ,ಆನಂದ್ ಕುಮಾರ್ , ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಬಿಜೆಪಿ ಮುಖಂಡರಾದ ವೆಂಕಟೆಗೌಡರು, ಹನೂರು ಕಸಾಪ ಕಾರ್ಯದರ್ಶಿ ಅಭಿಲಾಶ್, ಮುಖಂಡರಾದ ರಾಜೇಶ್ ರವಿ, ಬಸವೇಗೌಡ, ಶಂಕರ್, ರಮೇಶ್ ನಾಯ್ಡು, ಸತೀಶ್, ಸಮುದಾಯದ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಯುವಕರಾದ ವೆಂಕಟೇಶ್,ಹನೂರು ಪಟ್ಟಣದ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್,ಕೊಳ್ಳೇಗಾಲ ಯಳಂದೂರು ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್ ,ಹನೂರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ ಸಿ ,ಪತ್ರಕರ್ತರಾದ ಚೇತನ್, ಮಹಾದೇವಸ್ವಾಮಿ ,ರವಿ ,ಕಾರ್ತಿಕ್ ,,ಚಾ ನಗರ ಜಿಲ್ಲಾ ಕಾಂಗ್ರೆಸ್ ನ ಯುವ ಪ್ರಧಾನ ಕಾರ್ಯದರ್ಶಿ ಮಂಜುನಾಥ್ , ನಂದೀಶ್, ವೆಂಕಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಬೆಂಗಳೂರು ವಿವಿ: ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ

ಬೆಂಗಳೂರು ವಿವಿ: ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ

Bangalore University: Commemoration of 33rd Mahaparinibbana of B. Basavalingappa

ಬೆಂಗಳೂರು: ಡಿ.29: ಬಿ. ಬಸವಲಿಂಗಪ್ಪನವರು ದಮನಿತರು, ಶೋಷಿತ ಸಮುದಾಯಗಳ ಬದುಕಿನ‌ ದಿಕ್ಕನ್ನು ಬದಲಿಸಿದವರು. ಅವರ ಕುರಿತು ಶೈಕ್ಷಣಿಕ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸುವುದು ಅಗತ್ಯವಾಗಿದೆಂದು ಬಿ.ಬಸವಲಿಂಗಪ್ಪನವರ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಂಯೋಜಕರಾದ ಪ್ರೊ.ಬಿ.ಎಲ್.ಮುರುಳೀಧರ್ ಅಭಿಮತ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಬಿ.ಬಸವಲಿಂಗಪ್ಪನವರ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕ್ರಾಂತಿಕಾರಿ ಬಿ.ಬಸವಲಿಂಗಪ್ಪನವರ 33ನೇ ಮಹಾಪರಿನಿಬ್ಬಾಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿ. ಬಸವಲಿಂಗಪ್ಪನವರು ಕರ್ನಾಟಕ ಅಂಬೇಡ್ಕರ್ ಎನಿಸಿದ್ದವರು, ಬಾಬಾಸಾಹೇಬರ ದಾರಿಯಲ್ಲಿ ಸಾಗಿ ರಾಜ್ಯ ದಮನಿತರ, ಶೋಷಿತರ, ದಲಿತರ ದನಿಯಾಗಿದ್ದರು‌. ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿ, ಪೌರ ಕಾರ್ಮಿಕ ಎಂದು ಘೋಷಿಸಿ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದರು‌. ರಾಜ್ಯದಲ್ಲಿ ಭೂ ಸುಧಾರಣೆ ನೀತಗಳನ್ನು ಅನುಷ್ಠಾನಗೊಳಿಸಿ, ಅವಕಾಶ ವಂಚಿತರಾದ ದಲಿತರಿಗೆ ವಸತಿ ಸೌಲಭ್ಯ ಕಲ್ಪಿಸಿದರು‌. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ತಂದರು, ಆರ್ಥಿಕವಾಗಿ ಹಿಂದುಳಿದ ಪೋಷಕರಿಗೆ ಆರ್ಥಿಕ ಸಹಾಯ ಮಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದ್ದರು‌. ಬೂಸಾ ಚಳುವಳಿ ಮೂಲಕ ರಾಜ್ಯದ ದಲಿತ ಚಳುವಳಿಗೆ ಹೊಸ ಸ್ವರೂಪ ಮತ್ತು ದಿಕ್ಕನ್ನು ನೀಡಿದರು‌. ತಮ್ಮ ಜೀವಿತಾವಧಿ ಯುದ್ದಕ್ಕೂ ಶೋಷಿತರ ಪರ ದನಿಯಾಗಿದ್ದ ಬಸವಲಿಂಗಪ್ಪ ನವರ ಸಾಮಾಜಿಕ ಚಿಂತನೆ, ದೂರ ದೃಷ್ಟಿ ಕುರಿತು ವಿದ್ಯಾರ್ಥಿಗಳ ಅಧ್ಯಯನ ನಡೆಸಬೇಕು. ಶೈಕ್ಷಣಿಕ ಸಂಶೋಧನಾ ನೆಲೆಗಟ್ಟಿನಲ್ಲಿ ಬಸವಲಿಂಗಪ್ಪನವರ ಅಧ್ಯಯನ ನಡೆಯಬೇಕು ಎಂದರು.

ನಿಕಟಪೂರ್ವ ಸಂಯೋಜಕರಾದ ಪ್ರೊ.ಟಿ.ಹೆಚ್ ಮೂರ್ತಿ‌ರವರು ಮಾತನಾಡಿ ಬಾಬಾಸಾಹೇಬರನ್ನು ಸಾಕ್ಷಿ ಪ್ರಜ್ಞೆಯನ್ನಾಗಿಸಿಕೊಂಡು ಬಿ.ಬಸವಲಿಂಗಪ್ಪನವರು ಆಡಳಿತ ನಡೆಸಿದ್ದಾರೆ. ಬಸವಲಿಂಗಪ್ಪನವರ ಆಶಯ ಪ್ರಸ್ತುತತೆಗೆ ಅವಶ್ಯಕವಾಗಿದೆ, ಸಮಸಮಾಜದ ನಿರ್ಮಾಣಕ್ಕೆ ಮಾದರಿಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಬಸವಲಿಂಗಪ್ಪನವ ಅಧ್ಯಯನ ಕೇಂದ್ರ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಬೆಳಕು ತೋರಿದೆ. ಆದರೂ ಶಾಸನಬದ್ದ ನಿಬಂಧನೆಗಳ ಕೊರತೆಯಿಂದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳ ಬೆಳವಣಿಗೆ ಕುಂಠಿತವಾಗಿದೆ. ವಿಶ್ವವಿದ್ಯಾಲಯ ಆಡಳಿತ ಮಂಡಳಿ ಈ ಕುರಿತು ಸೂಕ್ತ ಕ್ರಮ ವಹಿಸಬೇಕು” ಎಂದು‌ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ‌.ಜಯಕರ ಎಸ್.ಎಂ ಮಾತನಾಡಿ ಬಸವಲಿಂಗಪ್ಪನವರು ಬೂಸಾ ಚಳುವಳಿ ಹಾಗೂ ಸಾಮಾಜಿಕ ಕ್ರಾಂತಿ ಮೂಲಕ ಸಮಾಜದ ಮೇಲೆ‌ ಪ್ರಭಾವ ಬೀರಿದರು‌. ಅವರ ಆದರ್ಶ, ಸಾಧನೆ, ಚಿಂತನೆ ಮುಂದಿನ ತಲೆಮಾರಿಗೆ ಕೊಂಡಯ್ಯುವ ಕೆಲಸವಾಗಬೇಕು.
ಅಧ್ಯಯನ ಕೇಂದ್ರಗಳು ಜಯಂತಿಗಳಿಗೆ ಸೀಮಿತವಾಗಿರದೆ ಸಂಶೋಧನೆ ಮತ್ತು ಅಧ್ಯಯನಕ್ಕೆ ಪೂರಕವಾಗಿರಬೇಕು. ಆ ನಿಟ್ಟಿನಲ್ಲಿ ಬಸವಲಿಂಗಪ್ಪನವರ ಅಧ್ಯಯನ ಕೇಂದ್ರದ ಪುನಶ್ಚೇತನ, ಪುತ್ಥಳಿ ನಿರ್ಮಾಣ ಮತ್ತು ಗ್ರಂಥಾಲಯ ಸೇರಿದಂತೆ ಅಧ್ಯಯನ ಕೇಂದ್ರದ ಸಂಪೂರ್ಣ ಅಭಿವೃದ್ಧಿ ಎಲ್ಲರ ಜವಾಬ್ದಾರಿಯಾಗಿದೆ. ಶೀಘ್ರವಾಗಿ ಎಲ್ಲಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕುಲಸಚಿವರು ಕೆ.ಟಿ.ಶಾಂತಲಾ, ಹಿರಿಯ ಅಂಬೇಡ್ಕರ್‌ವಾದಿಗಳು ಬಿ.ಗೋಪಾಲ್, ಸಿಂಡಿಕೇಟ್ ಸದಸ್ಯರು ಬಿ. ಡಿ. ಗಂಗರಾಜ್, ಕ್ಷೇಮಾಭಿವೃದ್ಧಿ ನಿರ್ದೇಶಕರು ಪಿ.ಸಿ.ನಾಗೇಶ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ, ವಿವಿಯ ಭೋಧಕ – ಭೋಧಕೇತರ ವರ್ಗದವರು, ವಿದ್ಯಾರ್ಥಿ ಮುಖಂಡ ಚಂದ್ರು ಪೆರಿಯಾರ್, ಸಂಶೋಧನಾ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.

ಕುವೆಂಪುರವರ ವಿಶ್ವಮಾನವತೆ- ಸಮಾಸಮಾಜ ಸಿದ್ದಾಂತ ಜಗತ್ತಿಗೆ ಮಾದರಿ : ಪ್ರೊ. ಬಿ ಕೆ ರವಿ

ವಿಶ್ವಮಾನವತೆ- ಸಮಾಸಮಾಜ ಸಿದ್ದಾಂತ ಜಗತ್ತಿಗೆ ಮಾದರಿ : ಪ್ರೊ. ಬಿ ಕೆ ರವಿ

Kuvempu's universal humanity-social theory is a model for the world: Prof. B K Ravi

ಗಂಗಾವತಿ:   ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 29.12.2025ರಂದು ಕುವೆಂಪು ಅವರ ಜನ್ಮದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 18 ವರ್ಷಗಳ ನಂತರ ಪರೀಕ್ಷಾ ಕೇಂದ್ರ ಮುಂಜೂರು ಮಾಡಿ ಪರಿಶೀಲನೆ ಮಾಡಲು ಆಗಮಿಸಿದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ‌. ಬಿ.ಕೆ. ರವಿ ಅವರು ಕುವೆಂಪು ಜಯಂತೋತ್ಸವದಲ್ಲಿ ಪಾಲ್ಗೊಂಡು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಟ ನಮನದ ಸಲ್ಲಿಸಿ , ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು,
ಕೆ.ವಿ ಪುಟ್ಟಪ್ಪರವರನ್ನು ಕಂಡು ಅವರೊಂದಿಗೆ ಇದ್ದ ಒಡನಾಟವನ್ನು ಹಾಗೂ ಅವರಜೊತೆ ಮಾತನಾಡಿದ ಕ್ಷಣಗಳನ್ನು ನೆನೆದರು, ಅವರನ್ನು ಕoಡದ್ದು ನನ್ನ ಭಾಗ್ಯವೆಂದು ಹೇಳಿಕೊಂಡರು.
ಅವರ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಪದ್ಯದ ಸಾಲುಗಳನ್ನು ಮಕ್ಕಳಿಗೆ ಹೇಳಿ ನೀವು ಕೂಡ ಚೈತನ್ಯಶೀಲರಾಗಿ ಉನ್ನತೋನ್ನತವಾಗಿ ಬೆಳೆಯುತ್ತಲೇ ಇರಬೇಕು ಹಾಗೂ ವಿಶ್ವಮಾನವತೆ ಚಿಂತನೆಯನ್ನು ಅನುಸರಿಸಿ ಎಂದು ಕಿವಿ ಮಾತು ಹೇಳಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರರಂತೆ ಕುವೆಂಪುರವರು ಕೂಡ ಸಮಸಮಾಜದ ಸಿದ್ದಾಂತದಲ್ಲಿ ಅತೀವ ನಂಬಿಕೆ ಉಳ್ಳವರಾಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಕರಿಗೂಳಿ ಅವರು ಮಾತನಾಡಿ ನಿಸರ್ಗದಲ್ಲಿ ವೈವಿಧ್ಯತೆ ಇರುವಂತೆ ಕುವೆಂಪುರವರ ಕನ್ನಡ ಸಾಹಿತ್ಯದಲ್ಲಿ ವಿನೂತನ ವೈಶಿಷ್ಟಗಳಿವೆ ಎಂದರು.
ಕಾವ್ಯಲೋಕದ ಅಧಿಕೃತತೆಯಲ್ಲಿ ಶ್ರೇಷ್ಠ ಸ್ಥಾನ ಪಡೆದ ಜಗದಕವಿ ಎಂದರು. ವಿಲಿಯಂ ಶೇಕ್‌ಸ್ಪಿಯರ್ ಅವರು ಇಂಗ್ಲಿಷ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದಂತೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಕುವೆಂಪುರವರು ಪ್ರಮುಖರು, ಕನ್ನಡ ಸಾಹಿತ್ಯದ ವೈಜ್ಞಾನಿಕತೆಯನ್ನು ಅರ್ಥೈಸಲು ಹೊಸ ವೈಧಾನಿತೆಯನ್ನು ನೀಡಿದ್ದು ಅಲ್ಲದೇ, ಸಾಹಿತ್ಯದ ಮೂಲಕ ಬದುಕಿನ ಎಲ್ಲಾ ರಂಗಗಳನ್ನು ಸ್ಪರ್ಶಿಸಿದವರು ಎಂದು ಅಭಿಪ್ರಾಯಪಟ್ಟರು. ಇಂತಹ ದುರಿತ ಕಾಲದಲ್ಲಿ ವಿಶ್ವಮಾನವ ಸಂದೇಶದ ಅಗತ್ಯತೆ ಜಗತ್ತಿಗೆ ಹೆಚ್ಚಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕರಾದ ಡಾ.ಸರಫರಾಜ್ ಅಹಮದ್ ಅವರು ವಿದ್ಯಾರ್ಥಿಗಳಿಗೆ ಶುಭಕೋರಿದರು. ಸಹಾಯಕ ಪ್ರಾಧ್ಯಾಪಕರಾದ
ಡಾ.ಶಶಿಕುಮಾರ ಅವರು ವಂದನೆಗಳನ್ನು ಅರ್ಪಿಸಿದರು. ಹಾಗೂ ಐ.ಕ್ಯೂ.ಎ.ಸಿ. ಸಂಚಾಲಕರಾದ ರವಿಕುಮಾರ, ಅಧ್ಯಾಪಕರಾದ ವಿರೂಪಾಕ್ಷ. ಕೆ ಮಾತನಾಡಿ ಕುವೆಂಪು ರವರ ವಿಭಿನ್ನ ದೃಷ್ಟಿಕೋನದ ಪ್ರಸ್ತುತತೆಯನ್ನು ವಿವರಿಸಿದರು. ಉಪನ್ಯಾಸಕರಾದ ವೆಂಕಟರಾಜು, ಡಾ. ದೇವರಾಜ ಹೊಸಮನಿ, ಬಾಲಚಂದ್ರಪ್ಪ, ವೀರೇಶ, ಮಲ್ಲಯ್ಯ, ಡಾ. ಅಯ್ಯಪ್ಪ, ಸಾಯಿಕುಮಾರ್ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಸಹಾಯಕ ಸಿಬ್ಬಂದಿಯಾದ ಶಾಂತಿ, ಚಿನ್ನ ವರಪ್ರಸಾದ್, ಶರಣಬಸವ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕೊಪ್ಪಳದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜಯಂತಿ ಆಚರಣೆ

ಅಟೋ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ

70th Kannada Rajyotsava and Kuvempu Jayanti celebrations in Koppal

ಕೊಪ್ಪಳದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜಯಂತಿ ಆಚರಣೆ

ಕೊಪ್ಪಳ:  ನಗರದ ತಾಲೂಕು ಕ್ರಿಡಾಂಗಣದಲ್ಲಿ 70 ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಅವರ 121 ನೇ ಜಯಂತೋತ್ಸವದ ಅಂಗವಾಗಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಡಿ.28ರ ರವಿವಾರದಂದು ಬೆಳಗ್ಗೆ 10.15ಕ್ಕೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಟೋ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಅಜ್ಜಪ್ಪ ಕರಡಕಲ್ ಅವರು ನಾವು ಮಾಡುವ ಪ್ರತಿಯೊಂದು ಕಾರ್ಯವು ಸಮಾಜಕ್ಕೆ ಒಳ್ಳೆಯ ಕೆಲಸವಾಗಿರಬೇಕು ಇದರಿಂದ ಪ್ರತಿಯೊಬ್ಬರಿಗೂ ಸಹಾಯವಾಗಲಿದೆ ಜೊತೆಗೆ ಮಾದರಿಯಾಗಲಿದೆ ಕೊಪ್ಪಳ ಜಿಲ್ಲೆಯ ಆಟೋ ಚಾಲಕರು ಉಚಿತವಾಗಿ ಕಣ್ಣಿನ ತಪಾಸಣೆ ಪಾಲ್ಗೊಂಡಿದ್ದಾರೆ ಇನ್ನೂ ಅನೇಕ ಸೌಲಭ್ಯಗಳನ್ನು ನಮ್ಮ ಸಂಘದ ವತಿಯಿಂದ ನಾವು ಕೊಡಿಸುವ ಪ್ರಯತ್ನ ಮಾಡುತ್ತೇವೆ  ಕುವೆಂಪು ಅವರ ಸಾಹಿತ್ಯ, ಕನ್ನಡ ನಾಡು–ನುಡಿಯ ಮೇಲಿನ ಅಪಾರ ಪ್ರೀತಿ ಹಾಗೂ ಅವರ ವಿಚಾರಧಾರೆಗಳು ಇಂದಿನ ಯುವಜನತೆಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು

 ಮನುಷ್ಯನ ದೇಹದಲ್ಲಿ ಕಣ್ಣು ಪ್ರಮುಖವಾದ ಅಂಗವಾಗಿದ್ದು, ಪ್ರತಿ ನಿತ್ಯದ ಬದುಕಿಗೆ ನೇತ್ರಗಳು ಆಸರೆಯಾಗಿದ್ದು ಅದರ ಬಗ್ಗೆ ಬಹಳ ಜಾಗೂರುಕತೆ ಅವಶ್ಯವಾಗಿದೆ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಅನೇಕ ಅಟೋ ಚಾಲಕರು ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಚಾಲಕರ ಆರೋಗ್ಯ ರಕ್ಷಣೆಗೆ ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದು ಕರವೇ ಜಿಲ್ಲಾಧ್ಯಕ್ಷ ಶಿವರಾಜ್ ಉಳ್ಳಾಗಡ್ಡಿ ತಿಳಿಸಿದರು

ಈ ಕಾರ್ಯಕ್ರಮವನ್ನು ಸಂಘಟನೆಯ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಹಾಗೂ ರಾಜ್ಯ ಉಪಾಧ್ಯಕ್ಷರ ಸಹಕಾರದಿಂದ ನಾವು ಕಣ್ಣಿನ ತಪಾಸಣೆ ಶಿಬಿರ ಯಶಸ್ವಿಯಾಗಿ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಸಿ ಹೊನಕೇರಿ ತಿಳಿಸಿದರು

ಪ್ರತಿಯೊಬ್ಬರಿಗೂ ಕಣ್ಣುಗಳು ಅವಶ್ಯವಾಗಿದ್ದು ಕಣ್ಣು ಇರದೇ ಯಾವುದೇ ಕೆಲಸ ಆಗದು ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ಬಗ್ಗೆ ಕಾಳಜಿವಹಿಸುವ ಜೊತೆಗೆ ನೇತ್ರಾದಾನ ಮಾಡಿ ಮತ್ತೋಬ್ಬರ ಬಾಳಿಗೆ ಬೆಳಕಾಗಬೇಕು ಕೊಪ್ಪಳ ಜಿಲ್ಲೆಯ ಆಟೋ ಚಾಲಕರು ಇದರ ಲಾಭವನ್ನು ಪಡೆದುಕೊಳ್ಳಬೇಕು ಜಿಲ್ಲಾ ಆಟೋ ಘಟಕದ ಅಧ್ಯಕ್ಷರು ಸಂಜಯ್ ದಾಸ್ ಕೌಜಕೇರಿ ಹೇಳಿದರು

 ಈ ವೇಳೆ  ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಅಟೋ ಚಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. “ನಮಗೆ ಆಟೋ ಚಾಲಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿರುವುದು ಅತ್ಯಂತ ಅನುಕೂಲವಾಗಿದೆ. ದಿನನಿತ್ಯ ವಾಹನ ಚಾಲನೆ ಮಾಡುವ ನಮಗೆ ಕಣ್ಣಿನ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಇಂತಹ ಶಿಬಿರಗಳಿಂದ ನಮ್ಮ ಆರೋಗ್ಯದ ಬಗ್ಗೆ ಅರಿವು ಮೂಡುತ್ತದೆ” ಎಂದು ಅಟೋ ಚಾಲಕರು ಹೇಳಿದರು.
ಇಂತಹ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಗಳು ಕೊಪ್ಪಳ ನಗರದಲ್ಲಿ ನಿರಂತರವಾಗಿ ನಡೆಯಬೇಕು. ಕಾರ್ಮಿಕ ವರ್ಗದ ಜನರಿಗೆ ಇಂತಹ ಕಾರ್ಯಕ್ರಮಗಳು ಬಹಳ ಸಹಾಯಕವಾಗಿವೆ. ಈ ರೀತಿಯ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಆಯೋಜಿಸಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಂಘಟಕರಿಗೆ ಧನ್ಯವಾದಗಳು” ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗರತ್ನ ಅಳವಂಡಿ, ಸೇರಿದಂತೆ ತಾಲೂಕ ಅಧ್ಯಕ್ಷ ಅಬ್ದುಲ್ ಸಮದ್ ಕೊಪ್ಪಳ, ಮಾರುತಿ ಹಲಗಿ ಕುಷ್ಟಗಿ, ರಾಜಶೇಖರ ಶ್ಯಾಗೋಟಿ ಯಲಬುರ್ಗಾ, ಯಮನೂರ ಬಟ್ಟ ಗಂಗಾವತಿ, ಮಾರುತಿ ಹಡಪದ ಕಾರಟಗಿ, ಗಂಗಾಧರ ಗಂಗಾಮತ ಕನಕಗಿರಿ, ಮಂಜುನಾಥ್ ಶಿಡ್ನಳ್ಳಿ ಕುಕನೂರ, ಅಸ್ಪಾಕ ಕೊಪ್ಪಳ ನಗರ ಘಟಕ ಅಧ್ಯಕ್ಷರು, ನಗರ ಘಟಕ ಪ್ರಧಾನ ಕಾರ್ಯದರ್ಶಿ ಸೇರಿದಂತೆ  ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ಅಟೋ ಚಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ದೇವು ನಾಗನೂರ ಆಯ್ಕೆ

ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ದೇವು ನಾಗನೂರ ಆಯ್ಕೆ

Devu Naganur elected as Media Club President

ಕೊಪ್ಪಳ: ಮೀಡಿಯಾ ಕ್ಲಬ್ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ದೇವು ನಾಗನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಮೀಡಿಯಾ ಕ್ಲಬ್‌ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಕೊಪ್ಪಳ ಮೀಡಿಯಾ ಕ್ಲಬ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರವೀಂದ್ರ ವಿ.ಕೆ. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಪತ್ರಕರ್ತ ದೊಡ್ಡೇಶ ಯಲಿಗಾರ್ ಅವರು ದೇವು ನಾಗನೂರ ಹೆಸರನ್ನು ಸೂಚಿಸಿದರು.

ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ನೂತನ ಅಧ್ಯಕ್ಷರನ್ನು ನಿರ್ದೇಶಕರ ತಂಡ ಅಭಿನಂದಿಸಿತು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ್ ಬಾಚನಹಳ್ಳಿ, ನಿರ್ದೇಶಕರಾದ ಸೋಮರಡ್ಡಿ ಅಳವಂಡಿ, ದೊಡ್ಡೇಶ ಯಲಿಗಾರ್, ಬಸವರಾಜ ಶೀಲವಂತರ್, ಹುಸೇನ್ ಪಾಶಾ, ಸಂತೋಷ ದೇಶಪಾಂಡೆ, ಶರಣಬಸವ ಹುಲಿಹೈದರ್, ಮಹೇಶಗೌಡ ಭಾನಾಪುರ, ನಾಭಿರಾಜ್ ದಸ್ತೇನವರ್ ಇದ್ದರು.

ಕಾರ್ಖಾನೆ ಮಾಲಿಕನ ಅಭಿವೃದ್ಧಿ ಮಾತ್ರ ಮಾಡುತ್ತದೆ: ದಾನಪ್ಪ ಕವಲೂರು

ಕಾರ್ಖಾನೆ ಮಾಲಿಕನ ಅಭಿವೃದ್ಧಿ ಮಾತ್ರ ಮಾಡುತ್ತದೆ: ದಾನಪ್ಪ ಕವಲೂರು

Only the factory owner will develop: Danappa Kavalur

ಉದ್ಯೋಗಕ್ಕಿಂತ ಆರೋಗ್ಯ ಆದ್ಯತೆಯಾಲಿ ಹೋರಾಟಕ್ಕೆ ಜನಬೆಂಬಲ

ಕೊಪ್ಪಳ: ನಗರಕ್ಕೆ ಹೊಂದಿಕೊಂಡ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ಇಂಡಿಯಾ, ವನ್ಯಾ, ಐ.ಎಲ್.ಸಿ. ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಗರಸಭೆ ಮುಂದೆ 59ನೇ ದಿನ ಧರಣಿ ಹೋರಾಟ ನಡೆಸಲಾಯಿತು.

ಇಂದಿನ ಧರಣಿಗೆ ಭಾಗ್ಯನಗರ ಜ್ಞಾನಬಂಧು ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿಗಳು ಬೆಂಬಲಿಸಿದರು.

ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರು ಧರಣಿ ಬೆಂಬಲಿಸಿ ಮಾತನಾಡುತ್ತಾ ಈ ಹೋರಾಟ ನಗರ ಮತ್ತು ಕಾರ್ಖಾನೆ ಮಾಲಿನ್ಯದಿಂದ ಪೀಡಿತರಾದ ಎಲ್ಲಾ ಹಳ್ಳಿಗಳ ಜನರ ಹೋರಾಟವಾಗಿದೆ. ಪ್ರತಿ ದಿನ ಸಾಂಕೇತಿಕವಾಗಿ ಇಲ್ಲಿ ಜನರು ಬಂದು ಬೆಂಬಲ ಮಾಡುತ್ತಿದ್ದಾರೆ. ಇಲ್ಲಿ ಬರುವವರು ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಜವಾಬ್ದಾರಿ ಇದ್ದವರು. ಮುಂದೆ ಜನ ಸಾಮಾನ್ಯರು ಸ್ಪೋಟಗೊಳ್ಳುವ ಕಾಲ ದೂರವಿಲ್ಲ. ಅಭಿವೃದ್ಧಿ ಪಾಠ ಹೇಳುತ್ತಿರುವ ಕಾರ್ಖಾನೆಗಳು ಸಂಪದ್ಭರಿತ ನಮ್ಮ ಕೃಷಿಯನ್ನು ನಾಶ ಮಾಡಿವೆ. ನಾಶಪಡಿಸಿದ ಪರಿಸರದ ಪುನರ್ನಿರ್ಮಾಣ, ಪುನಶ್ಚೇತನ ಮಾಡಲು ಸಾಧ್ಯವಿಲ್ಲ. ಈ ಕಾರ್ಖಾನೆಗಳು ಮಾಲಿಕನಿಗೆ ಅಪರಿಮಿತ ಲಾಭ ತಂದು ಕೊಡುತ್ತವಲ್ಲದೆ, ಭೂಮಿ ಕೊಟ್ಟ ರೈತರನ್ನು, ಗ್ರಾಮೀಣರನ್ನು ಗುಲಾಮರನ್ನಾಗಿ ಮಾಡುತ್ತವೆ. ಇದರ ಬಗ್ಗೆ ಎಚ್ಚರಿಕೆ ಇಟ್ಟುಕೊಂಡು ಈ ವೇದಿಕೆಯ ನಿರ್ದೇಶನದಲ್ಲಿ ತನು, ಮನ, ಧನದ ಸಮರ್ಪಣೆಯಿಂದ ಹೋರಾಡೋಣ. ಆಗ ಗೆಲುವು ನಮ್ಮದಾಗುತ್ತದೆ’ ಎಂದರು.

ಜ್ಞಾನ ಬಂಧು ಪಿಯು ಕಾಲೇಜು ಉಪ ಪ್ರಾಂಶುಪಾಲರಾದ ಮಂಜುನಾಥ ಚಿತ್ರಗಾರ ಮಾತನಾಡಿ ಪ್ರಕೃತಿಯನ್ನು ನಾವು ಎಷ್ಟು ಪ್ರಮಾಣದಲ್ಲಿ ಹಿಂಸಿಸುತ್ತೇವೆ ಅದರ ಪ್ರತಿಕಾರವನ್ನು ಹತ್ತುಪಟ್ಟು ತೆಗೆದುಕೊಳ್ಳುತ್ತದೆ. ಆಗ ಪ್ರಕೃತಿ ನಾಶ ಮಾಡಿದ ಯಾರೊಬ್ಬರೂ ಇದರ ಹೊಣೆ ಹೊತ್ತುಕೊಳ್ಳುವುದಿಲ್ಲ. ಆರೋಗ್ಯ ಕಡೆಗಣಿಸಿದ ಅಭಿವೃದ್ಧಿ ಯಾರಿಗೂ ಬೇಡ. ಜೀವ, ಆರೋಗ್ಯ ಮೊದಲು, ಆಮೇಲೆ ನಾವು ಕಲಿಸುವ ಶಿಕ್ಷಣ, ಉದ್ಯೋಗ ಉಪಯೋಗಕ್ಕೆ ಬರುತ್ತದೆ’ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಅವರು ಈ ಶಿಕ್ಷಣ ಸಂಸ್ಥೆಯ ಬೆಂಬಲಕ್ಕೆ ಅಭಿನಂದಿಸಿ ‘ಮುಂದಿನ ಪೀಳಿಗೆ ನಮ್ಮನ್ನು ಶಪಿಸಬಾರದು ಎಂದರೆ ಈ ಬಲ್ಡೋಟಾ ಅಲ್ಲದೆ ಇನ್ನಾವುದೇ ಕಾರ್ಖಾನೆಗಳ ವಿಸ್ತರಣೆ, ಹೊಸ ಸ್ಥಾಪನೆ ನಿರ್ದಾಕ್ಷಿಣ್ಯವಾಗಿ ವೀರೋಧಿಸೋಣ’ ಎಂದರು.
ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ನಮ್ಮ ಭವಿಷ್ಯದ ಅಪಾಯದ ಕುರಿತು ಮಾಹಿತಿ ನೀಡಿ, ಶಿಕ್ಷಣ ಸಂಸ್ಥೆ ಹೋರಾಟದ ಬೆಂಬಲಕ್ಕೆ ಬಂದಿದ್ದು ಅಭಿನಂದನೀಯ. ಇತರರೂ ಹೋರಾಟದ ಬೆಂಬಲಕ್ಕೆ ಬರಬೇಕೆಂದು ಕರೆ ನೀಡಿದರು.
ಧರಣಿ ನೇತೃತ್ವವಹಿಸಿದ ಪುಸ್ತಕ ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಕವಯಿತ್ರಿ ಪುಷ್ಪಲತಾ ಏಳುಭಾವಿ, ಚಿಂತಕಿ ಸಾವಿತ್ರಿ ಮುಜುಮದಾರ, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಮ್ಮ ಅಂಗಡಿ, ಹಾಡುಗಾರ ಎಸ್. ಮಹಾದೇವಪ್ಪ ಮಾವಿನಮಾಡು, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ ಇವರು ಇದ್ದರು.

ಧರಣಿಯಲ್ಲಿ ಜ್ಞಾನ ಬಂಧು ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲರು ಜ್ಯೋತಿ ಎಸ್.ಎಸ್ ಮತ್ತು ಜೆ. ರವೀಂದ್ರ ಪ್ರಕೃತಿ ಕಾಪಾಡುವ ಸಂದೇಶ ನೀಡಿ ಮಾತನಾಡಿದರು.

ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮಹೇಂದ್ರ ಉಭಾಳೆ, ಡಿ.ಎಸ್.ನಾಗರಾಜ, ವೀರೇಶ, ಶಿವಪ್ಪ ಜಲ್ಲಿ, ರಾಮಚಂದ್ರ ಕೆ, ರೆಣುಕಾರಾಜ್ ಕೆ, ಜ್ಯೋತಿ ಎಲ್.ಜಿ, ಲಕ್ಷ್ಮೀ, ಸುಜಾತಾ, ಸುಧಾ, ಮಂಜುಳಾ, ಸಂಜಮ್ಮ, ಕಾವ್ಯಾ, ಮಂಜುನಾಥ ಪಿ, ಪ್ರೇಮಾ ಅಂಗಡಿ, ಹನುಮಂತಪ್ಪ ಕಿನ್ನಾಳ, ನರೇಂದ್ರ ಪಾಟೀಲ್, ಆಟೋ ಮಂಜುನಾಥ ಭಾಗ್ಯನಗರ, ಶಿವನಗೌಡ ಪಾಟೀಲ್, ಭೀಮಪ್ಪ ಯಲಬುರ್ಗಾ, ಗಂಗಮ್ಮ ಕವಲೂರು, ಮಕ್ಬುಲ್ ರಾಯಚೂರು, ಶಿವಪ್ಪ ಹಡಪದ, ಆಂಜನೇಯ ಪಾಲ್ಗೊಂಡರು.

ಮಂಜುನಾಥ ಶಿಕ್ಷಣ ಸಂಸ್ಥೆಯ ವತಿ ಯಿಂದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರಜನ್ಮದಿನಾಚರಣೆ
Manjunatha Educational Institute celebrates the birthday of Ajatashatru Atal Bihari Vajpayee

ಮಂಜುನಾಥ ಶಿಕ್ಷಣ ಸಂಸ್ಥೆಯ ವತಿ ಯಿಂದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರಜನ್ಮದಿನಾಚರಣೆ

ಮೂಡಲಗಿ : ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ನೀಡಿದಂತ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಅಪಾರವಾಗಿದ್ದು, ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಅಡಿಹುಡಿ ಹೇಳಿದರು.

ಮೂಡಲಗಿ ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಭಾ ಭವನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ಬೆಳಗಾವಿ ಹಾಗೂ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಉತ್ತಮ ಆಡಳಿತ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಅಜರಾಮರ ಎಂದು ಬಣ್ಣಿಸಿದರು. ಬಿಜೆಪಿ ಅರಬಾವಿ ಮಂಡಲದ ಅಧ್ಯಕ್ಷರಾದ ಮಹಾದೇವ ಶೇಕ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಗಳಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿ ನಂತರ ಭಾರತೀಯ ಜನತಾ ಪಕ್ಷದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು. ಅವರ ಜೀವನದ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ನಡೆಯುತ್ತಿರುವ ಕ್ಷೇತ್ರದ ಮೂಲಕ ಸಮಾಜ ಸೇವೆ ಸಲ್ಲಿಸಬೇಕೆಂದರು.

ಮೂಡಲಗಿ ಗವಿತೋಟ ಶಾಲೆಯ ಶಿಕ್ಷಕರಾದ ಸಂತೋಷ್ ಪಾಟೀಲ ಮಾತನಾಡಿ ಪೊಖ್ರಾನ್ ಅಣು ಪರೀಕ್ಷೆ ನಡೆಸುವುದರ ಮೂಲಕ ಭಾರತ ದೇಶವನ್ನು ಪರಮಾಣು ಶಕ್ತಿ ಹೊಂದಿದ ರಾಷ್ಟ್ರವಾನ್ನಾಗಿ ಮಾಡಿ, ಅಮೆರಿಕದಂತ ಬಲಾಢ್ಯ ರಾಷ್ಟ್ರಗಳು ಭಾರತ ದೇಶದತ್ತ ತಿರುಗಿ ನೋಡುವಂತಾಗಿ ಮಾಡಿದ ಕೀರ್ತಿ ಭಾರತ ರತ್ನ ಪುರಸ್ಕೃತ ಅಟಲ್ ಜೀಯವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತ ಅಧಿಕಾರಿ ಮಹಾಂತೇಶ ಕೋಟವಾಗಿ, ಪಾಂಡುರಂಗ ಮಹೇಂದ್ರಕರ್, ಸಾಹಿತ್ಯ ರತ್ನ ಮಹಾರಾಜ್ ಸಿದ್ದು ಹಳ್ಳೂರ, ಚಂದ್ರಶೇಖರ ಪತ್ತಾರ, ಮಂಜುನಾಥ್ ರೇಳೆಕರ ಹಾಗೂ ಕಾರ್ಯಕರ್ತರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸುಭಾಸ ಗೊಡ್ಯಾಗೋಳ ನಿರೂಪಿಸಿ, ವಂದಿಸಿದರು.

ನನ್ನ ಮೊಮ್ಮಗ ನೂತನ್ ಗೌಡಾ   ಡಿಗ್ರಿ   ಸರ್ಟಿಫಿಕೇಟ್ (ಪದವಿ ಪ್ರಮಾಣಪತ್ರ) ನೀಡುವ ಕಾರ್ಯಕ್ರಮ

ನನ್ನ ಮೊಮ್ಮಗ ನೂತನ್ ಗೌಡಾ  ನನ್ನ ಮೊಮ್ಮಗ ನೂತನ್ ಗೌಡಾ   ಡಿಗ್ರಿ ಸರ್ಟಿಫಿಕೇಟ್ (ಪದವಿ ಪ್ರಮಾಣಪತ್ರ) ನೀಡುವ ಕಾರ್ಯಕ್ರಮ 

 

Degree certificate presentation ceremony for my grandson Nutan Gowda

ಬಳ್ಳಾರಿ,ಡಿ,27: ಹೆಚ್ ಮಲ್ಲಿಕಾರ್ಜುನ ಹೊಸಕೇರಾ ಸಂಪಾದಕರು  ಕಲ್ಲಾಣಸಿರಿ ವೆಬ್ ನಿವ್ಸ್   ಇವರ ಮೊಮ್ಮಗ ಅನಂತಪುರ ಜಿಲ್ಲೆಯ ರಾಮದುರ್ಗ ನಗರದ   ನೂತನ್ ಗಂಗಾಧರ ಗೌಡಾ ಇವರು

 

 ಇಂದು  ಬಳ್ಳಾರಿಯ ಜೈನ್ ಯುನಿವರ್ಸಿಟಿ   (  Jain University). ಸಭಾಂಗಣದಲ್ಲಿ  ಜರುಗಿದ

ಕಾರ್ಯಕ್ರಮ ದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ( Digital marketing )   ಡಿಗ್ರಿ ಸರ್ಟಿಫಿಕೇಟ್ (ಪದವಿ ಪ್ರಮಾಣಪತ್ರ)   ವನ್ನು  ಕಾಲೇಜಿನ  ಪ್ರಿನ್ಸ್ ಪಾಲ್‌ ಗಳಾದ ಶ್ರೀ ದಿನೇಶ್,ತಿಪ್ಪರೆಡ್ಡಿ   ಇವರುಗಳು  ಪ್ರಧಾನ ಮಾಡಿದರು.

ಈ  ಕಾರ್ಯಕ್ರಮದಲ್ಲಿ ಮೊಮ್ಮಗನ ತಾಯಿ ,ತಂದೆ ಶ್ರೀಮತಿ ಆಶಾ ಗಂಗಾಧರ ಗೌಡರ್   ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.