
ಪ್ರತಿ ಮಗುವಿನ ಪ್ರಗತಿ ಅಗತ್ಯ –ಡಿಡಿಪಿಐ ಸೋಮಶೇಖರ್ ಗೌಡ್ರು
Every child needs progress -- DDPI Somashekar Gowdra
ಗಂಗಾವತಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೇಸರಹಟ್ಟಿ ಪ್ರೌಢಶಾಲಾ ವಿಭಾಗಕ್ಕೆ ಸಂದರ್ಶನ ನೀಡಿದ ಉಪನಿರ್ದೇಶಕರಾದ ಸೋಮಶೇಖರ್ ಗೌಡ ರವರು ಎಸ್ ಎಸ್ ಎಲ್ ಸಿ ಮಕ್ಕಳ ಪ್ರಗತಿಯನ್ನು ಪರಿಶೀಲಿಸಿ ಪ್ರಗತಿ ಸಾಧಿಸುವಂತೆ ಮಾರ್ಗದರ್ಶಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರು ನೀಡಿದ ಪ್ರಗತಿಯನ್ನು ಪ್ರತಿ ಮಕ್ಕಳನ್ನು ಪರಿಶೀಲಿಸಿ ಚೈಲ್ಡ ಟ್ರ್ಯಾಕ್ ಕಾರ್ಯವನ್ನು ಪರಿಶೀಲಿಸಿದರು. ಕ್ರಿಯಾಯೋಜನೆಯಂತೆ ಕಾರ್ಯವನ್ನು ನಿರ್ವಹಿಸಿ ಪ್ರಗತಿಯನ್ನು ಹೊಂದಿರಬೇಕು ಹಾಗೂ ಆ ಪ್ರಗತಿಯಂತೆ ಮಕ್ಕಳು ನಿರ್ವಹಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರತೀ ವಾರಕ್ಕೊಮ್ಮೆ ಸಿ ಗುಂಪಿನ ಮಕ್ಕಳನ್ನು ಪರೀಕ್ಷಿಸಿ ಅವರ ದಾಖಲೆಯನ್ನು ಶನಿವಾರದಂದು ಇಲಾಖೆಗೆ ಮಾಹಿತಿಯನ್ನು ತಪ್ಪದೇ ನೀಡಬೇಕೆಂದು ಸೂಚಿಸಿದರು. ಎಸ್ ಎಸ್ ಎಲ್ ಸಿ ಮಾದರಿಯನ್ನು ಎಂಟು ಮತ್ತು ಒಂಬತ್ತನೇ ತರಗತಿಯ ಮಕ್ಕಳಿಗೂ ಕೂಡ ಅನ್ವಯಿಸಲು ಈ ಸಂದರ್ಭದಲ್ಲಿ ಅವರು ಮಾರ್ಗದರ್ಶನ ನೀಡಿದರು.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೀಡಿದ ಮಾರ್ಗದರ್ಶನ ಮತ್ತು ಕ್ರಿಯಾ ಯೋಜನೆಯನ್ನು ತಪ್ಪದೇ ಎಲ್ಲಾ ಶಿಕ್ಷಕರು ನಿರ್ವಹಿಸಿ ಪ್ರಗತಿಯನ್ನು ದಾಖಲಿಸುವುದು ಯಾವುದೇ ಮಗುವು ಹಿಂದುಳಿಯದಂತೆ ಮಕ್ಕಳ ತೇರ್ಗಡೆಗೆ ಶ್ರಮಿಸಬೇಕೆಂದು ಸೂಚಿಸಿದರು.



