
ಕಾರ್ಖಾನೆ ವಿರೊಧಿ ಹೋರಾಟದಲ್ಲಿ ಕ್ರಿಸ್ಮಸ್ ಶುಭಾರಂಭ ಮಾಡಿದ ಕ್ರೆöÊಸ್ತರು
ಸಂಕಷ್ಟದಲ್ಲಿ ಉದ್ಯೋಗ ನೀಡಿದ್ದು ಕೃಷಿ, ಕಾರ್ಖಾನೆಯಲ್ಲ: ಸಿ.ಬಿ. ಪಾಟೀಲ್
Christians who started Christmas with a happy Christmas in the fight against factories
Agriculture, not factories, provided employment in times of hardship: C.B. Patil
ಕೊಪ್ಪಳ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಗರಸಭೆ ಮುಂದೆ ನಡೆಯುತ್ತಿರುವ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದಸುಮಿ, ಎಕ್ಸಿಂಡಿಯಾ ಇತರೆ ಯಾವುದೇ ಕಾರ್ಖಾನೆಗಳ ವಿಸ್ತರಣೆ ವಿರೋಧಿ ೩೨ಟಿಇ ಜiಟಿಜ ಧರಣಿಯನ್ನು ನಗರದ ಚಾರಣ ಬಳಗ, ಮಕ್ಕಳ ಹಕ್ಕುಗಳ ಜಾಗೃತಿ ಸಮಿತಿ ಸರದಿಯಲ್ಲಿ ಹಾಡು ಹೇಳಿ, ಪರಿಸರ ಕವನ ವಾಚನ ಮಾಡಿ ಬೆಂಬಲಿಸಿದರು.
ಪ್ರೊಟೆಸ್ಟೆಂಟ್ ಕ್ರೆöÊಸ್ತ ಸಮುದಾಯದ ಫಾದರ್ ಡಿ. ಆರ್. ಪೀಟರ್ ಅವರು ಧರಣಿ ಸ್ಥಳದಲ್ಲಿ ಸಿಹಿ ಹಂಚಿಕೊAಡು “ಈ ಪ್ರಕೃತಿಯನ್ನು ದೇವರು ಸೃಷ್ಟಿಸಿದ್ದಾನೆ. ಇದನ್ನು ಕೆಡಿಸಲಿಕ್ಕೆ ಯಾರಿಗೂ ಹಕ್ಕಿಲ್ಲ. ಜಗತ್ತಿಗೆ ಲೇಸನ್ನೇ ಬಯಸಿದ ಕ್ರಿಸ್ತನು ಕ್ಷಮಾ ಗುಣದ ಮೇರುವಾಗಿದ್ದರು. ಪಾಪಿಗಳನ್ನು, ತಪುö್ಪ ಮಾಡಿದವರನ್ನು ಕ್ಷಮಿಸಬೇಕೆಂದು ತನ್ನ ಅನುಯಾಯಿಗಳಿಗೆ ಹೇಳಿಕೊಟ್ಟಿದ್ದಾರೆ. ಒಳಿತನ್ನೇ ಬಯಸಿದ ಯೇಸು ಸ್ವಾಮಿಯನ್ನು ಜಗತ್ತು ಅನುಕರಿಸುತ್ತಿದೆ. ಭಾರತದಲ್ಲಿ ಸಂವಿಧಾನ ನಮಗೆ ಪೂಜಿಸುವ, ಬದುಕುವ, ಮಾತನಾಡುವ ಹಕ್ಕು ಕೊಟ್ಟಿದೆ. ಇಲ್ಲಿ ಸಾಮರಸ್ಯದಿಂದ ಬದುಕಲು ಯಾರಿಗೂ ತೊಂದರೆ ಇಲ್ಲ. ಇಲ್ಲಿ ನಡೆದಿರುವ ಪರಿಸರದ ಕಾಳಜಿಯ ಬೇಡಿಕೆ ನಮ್ಮೆಲ್ಲರನ್ನು ಬೆಂಬಲಿಸುವAತೆ ಮಾಡಿದೆ. ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಪರಿಸರ ಯಾರಿಗೂ ಬೇಡವಾಗಿಲ್ಲ. ಇದನ್ನು ಕೇಳುವ ಹೋರಾಟದ ಭಾಗವಾಗಿ ನಮ್ಮ ಸಮುದಾಯವು ಇರುತ್ತದೆ. ಮುಂದುವರೆದು ಸರ್ವಜೀವಿಗಳಿಗೂ, ಸರ್ವ ಮಾನವರಿಗೂ ಶಾಂತಿ ಸಿಗಲಿ ಎಂದು ಕ್ರಿಸ್ತಮಸ್ ಹಬ್ಬದ ಶುಭಾಶಯ ಹಂಚಿಕೊAಡರು.
ಕೊಪ್ಪಳ ಚಾರಣ ಬಳಗದ ಸಿ.ಬಿ. ಪಾಟೀಲ್ ಮಾತನಾಡಿ ದುರಿತಕಾಲದಲ್ಲಿ, ಸಂಕಷ್ಟದ ದಿನಗಳಲ್ಲಿ ಈ ಕಾರ್ಖಾನೆಗಳು ಜನರಿಗೆ ಕೆಲಸವನ್ನು ಕೊಟ್ಟಿಲ್ಲ. ತಮ್ಮ ಲಾಭಕ್ಕಾಗಿ ಮಾತ್ರ ಅವು ಏನೆಲ್ಲ ಹಾಳು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.. ಇಲ್ಲಿನ ಅಹ್ಲಾದಕರ ಹವಾಗುಣವನ್ನು ಹಾಳು ಮಾಡಿವೆ. ಕರೋನಾ ಬಂದಾಗಯಾವ ಕಾರ್ಖಾನೆಗಳು ಉದ್ಯೋಗಗಳನ್ನು, ಉದ್ಯೋಗಿಗಳನ್ನು ಉಳಿಸಿಕೊಳ್ಳಲಿಲ್ಲ. ತಕ್ಷಣದಲ್ಲಿಕಾರ್ಖಾನೆ ಬಂದ್ ಮಾಡಿ ಬಾಗಿಲು ಮುಚ್ಚಿದವು. ಆ ಸಂದರ್ಭದಲ್ಲಿ ಕೃಷಿ ಸಕಲರನ್ನು ಅಪ್ಪಿಕೊಂಡು ಉದ್ಯೋಗ ಕೊಟ್ಟಿತು. ಬದುಕು ನೀಗಿಸಿತು. ಎಷ್ಟೋ ಕಾರ್ಖಾನೆಗಳು ಈಗಾಗಲೇ ಕೋಲಾರಗಣಿ, ಕುದುರೆಮುಖ ಗಣಿ, ಕಾರ್ಖಾನೆ, ಭದ್ರಾವತಿಉಕ್ಕು , ದಾವಣಗೆರೆ ಕಾಟನ್ ಮಿಲ್ ಮುಚ್ಚಿದವು., ಕೆಲವು ದಶಕಗಳ ವರೆಗೆ ಮಾತ್ರ ಎಲ್ಲ ನಮ್ಮ ಸಂಪನ್ಮೂಲ, ಮಾನವ ಶ್ರಮ ದೋಚಿ ಮುಚ್ಚಿಹೋಗುತ್ತವೆ. ಆಗ ಪುನಃ ನಾವು ಶಾಶ್ವತ ಮತ್ತು ಸ್ಥಿರ ಬದುಕಿಗಾಗಿ ಹೋರಾಡಬೇಕಾಗಿದೆ. ಬಲ್ಡೋಟ ಮುಂತಾದ ಕಾರ್ಖಾನೆಗಳ ಮಾಲಿನ್ಯದಿಂದ ನಾವು ಜೀವ ಉಳಿಸಿಕೊಳ್ಳಲು ಹೋರಾಡಬೇಕಾಗಿದೆ ಎಂದರು.
ಮಕ್ಕಳ ಹಕ್ಕುಗಳ ಜಾಗೃತಿ ಸಮಿತಿಯ ಮೈತ್ರಾ ಮಾತನಾಡಿ ಈ ಕಾರ್ಖಾನೆಗಳ ಪರಿಸರದ ಹಾನಿಯಿಂದ ಮಕ್ಕಳ ಹಕ್ಕುಗಳಿಗೆ ಅತಿ ಹೆಚ್ಚು ಚ್ಯುತಿಯಾಗಿದೆ. ಶಾಲಾ ಮಕ್ಕಳಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಪಾಲಕರಲ್ಲೂ ಈ ಅಪಾಯದ ಕುರಿತು ಎಚ್ಚರಿಸುತ್ತಿದ್ದೇವೆ ಎಂದರು.
ಧರಣಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳÀ (ಕೆ.ಬಿ.ಗೋನಾಳ), ಮಂಜುನಾಥ ಜಿ. ಗೊಂಡಬಾಳ, ಭುಜಂಗ ಸ್ವಾಮಿ, ಮೈಲಾರಪ್ಪ ಪೂಜಾರ, ಕಾಶಪ್ಪ ಚಲವಾದಿ, ಗವಿಸಿದ್ದಪ್ಪ ಹಲಿಗಿ, ನೇತ್ರಾವತಿ, ವೃಕ್ಷಾನ, ಎಸ್.ಬಿ.ರಾಜೂರ, ಡಿ.ಎಂ.ಬಡಿಗೇರ, ಸೌಮ್ಯ ನಾಲ್ವಾಡ, ಶ್ವೇತಾ ಅಕ್ಕಿ, ರವಿ ಕಾಂತನವರ, ಬಸವರಾಜ ಶೀಲವಂತರ್, ಎಸ್ಎ. ಗಫಾರ್, ಡಾ. ವಿಜಯ್ ಸುಂಕದ್, ಗ್ರಾಮ ಪಂಚಾಯತ್ ಅಧ್ಯಕ್ಷ ಹನುಮಂತಪ್ಪ ಉಪ್ಪಾರ್, ಎಫ್.ಎಸ್. ಜಾಲಿಹಾಳ್, ಮಖಬೂಲ್ ರಾಯಚೂರು, ರತ್ನಮ್ಮ ದೊಡ್ಡಮನಿ, ಭೀಮಪ್ಪ ಯಲಬುರ್ಗಾ, ಗ್ರಾಮ ಪಂಚಾಯತ್ ಸದಸ್ಯ ಗಾಳೆಪ್ಪ ಹೂವಿನಾಳ ಅನೇಕರು ಇದ್ದರು.




