ಜಂಗಮರ್ ಕಲ್ಗುಡಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಎನ್ ಆರ್ ಎಲ್ ಎಂ ಶೆಡ್ ಉದ್ಘಾಟನೆ

Mallikarjun
1 Min Read
ಜಾಹೀರಾತು

ಎನ್ ಆರ್ ಎಲ್ ಎಂ ಯೋಜನೆ ಸೌಲಭ್ಯ ಪಡೆಯಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಸಲಹೆ

ಜಂಗಮರ್ ಕಲ್ಗುಡಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಎನ್ ಆರ್ ಎಲ್ ಎಂ ಶೆಡ್ ಉದ್ಘಾಟನೆ

nauguration of NRLM shed constructed under NREGA scheme in Jangamar Kalgudi

739104cd 9ec4 4c3e a14e 6cc181259b55

ಗಂಗಾವತಿ : ತಾಲೂಕಿನ ಜಂಗಮರ್ ಕಲ್ಗುಡಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಮಹಿಳಾ ಸ್ವಸಹಾಯ ಸಂಘಗಳ
ಎನ್ ಆರ್ ಎಲ್ ಎಂ ಸಂಜೀವಿನಿ ಶೆಡ್ ನ ನೂತನ ಕಟ್ಟಡವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಸೋಮವಾರ ಉದ್ಘಾಟಿಸಿದರು.

ಜಾಹೀರಾತು

ನಂತರ ಅವರು ಮಾತನಾಡಿ, ಜಂಗಮರ್ ಕಲ್ಗುಡಿ ಗ್ರಾಪಂ ವ್ಯಾಪ್ತಿಯ ಸ್ವಸಹಾಯ ಸಂಘಗಳ ಮಹಿಳೆಯರು ಒಕ್ಕೂಟದ ಸಭೆ, ತರಬೇತಿಗಳು ಹಾಗೂ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಎನ್ ಆರ್ ಎಲ್ ಎಂ ಶೆಡ್ ಅನುಕೂಲವಾಗಲಿದೆ. ಎಲ್ಲ ಸ್ವಸಹಾಯ ಸಂಘಗಳ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬೇಕು. ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷರಾದ ಕೆ. ಸುನೀತಾ ಅವರು ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಂಗಳಪ್ಪ ನಾಯಕ, ಕಾರ್ಯದರ್ಶಿಗಳಾದ ಯಮನೂರಪ್ಪ, ಗ್ರಾಪಂ ಉಪಾಧ್ಯಕ್ಷರಾದ ಹುಲಿಗೆಮ್ಮ, ಎನ್ ಆರ್ ಎಲ್ ಎಂ ಸಂಜೀವಿನಿ ವಲಯ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಎಚ್ .ಎ., ಎನ್ ಆರ್ ಎಲ್ ಎಂ ತಾಲೂಕು ಕೃಷಿ ವ್ಯವಸ್ಥಾಪಕರಾದ ಮುದ್ದಾನೇಶ, ಗ್ರಾಪಂ ಸದಸ್ಯರು, ಸಿಬ್ಬಂದಿಗಳು & ಸ್ವಸಹಾಯ ಸಂಘದ ಮಹಿಳೆಯರು, ಗ್ರಾಮದ ಮುಖಂಡರು ಇದ್ದರು

Total Views: 0
Share This Article