Karnataka North East Teachers Constituency: Voter Registration Process
ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣೆ ತಂಡ, ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ಸ್ಥಾಪನೆ
ಕೊಪ್ಪಳ ಅಕ್ಟೋಬರ್ 16 (ಕರ್ನಾಟಕ ವಾರ್ತೆ): ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಂಗವಾಗಿ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತದಾರರ ನೋಂದಣಿ ಸಂದರ್ಭ ಮತದಾರರ ಗೊಂದಲ, ದೂರು ಪರಿಹರಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣೆ ತಂಡ, ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ಸ್ಥಾಪಿಸಲಾಗಿದೆ.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸಬೇಕಾಗಿರುವುದರಿಂದ ಈ ಕಾರ್ಯಕ್ಕಾಗಿ ಅರ್ಹ ಮತದಾರರು ನೋಂದಣಿಗಾಗಿ ಮಾಹಿತಿ ಕೋರಿದಲ್ಲಿ ಸೂಕ್ತ ಮಾಹಿತಿಯನ್ನು ನೀಡಿ, ಅವರ ಹೆಸರನ್ನು ನೋಂದಾಯಿಸಲು ಸಹ ಮತದಾರರ ನೋಂದಣಿ ಪ್ರಕ್ರಿಯೆ ಪ್ರಾರಂಭದಿAದ ಲಿಖಿತವಾಗಿ, ಮೌಖಿಕವಾಗಿ ಹಾಗೂ ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ದೂರುಗಳ ಮೇಲೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇಲ್ಲಿ ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ æ(Complaints Monitoring Cell & Voters helpdesk) ಸ್ಥಾಪಿಸಲಾಗಿದೆ.
ಕಾರಣ ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ–2026 ರ ಈ ಚುನಾವಣೆಗೆ ಸ್ವೀಕೃತವಾಗುವ ದೂರು ಹಾಗೂ ಮತದಾರರ ನೋಂದಣಿ ಕಾರ್ಯಕ್ಕಾಗಿ ಹಾಗೂ ಮತದಾರರ ಪಟ್ಟಿಗಳ ಕುರಿತು ಮಾಹಿತಿ ಪಡೆಯಲು ಇಚ್ಛಿಸುವವರು ಕಛೇರಿ ಸಮಯದಲ್ಲಿ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರದ ಮೂಲಕ ಹಾಗೂ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ: 08539-221895 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಮೇಲ್ವಿಚಾರಣೆ ತಂಡಗಳ ಯಶಸ್ವಿ ಕಾರ್ಯಾಚರಣೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಮೇಲ್ವಿಚಾರಣೆ ತಂಡದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಮಲ್ಲಪ್ಪ ಗುಂಡೂರ, ಮೊ.ಸಂ: 9731353397, ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭೆ ತಹಶೀಲ್ದಾರ ರವಿ ಅಂಗಡಿ ಮೊ.ಸಂ: 9449294410 ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸೀನಿಯರ್ ಪ್ರೊಗ್ರಾಮರ್ ರಾಘವೇಂದ್ರ ಮೊ.ಸಂ: 9538387488 ಇವರನ್ನು ನಿಯೋಜಿಸಲಾಗಿದೆ.
ತಾಲ್ಲೂಕು ಮಟ್ಟದ ಮೇಲ್ವಿಚಾರಣೆ ತಂಡದಲ್ಲಿ ಕೊಪ್ಪಳ ತಾಲ್ಲೂಕಿನಲ್ಲಿ ಗ್ರೇಡ್-2 ತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ, ಮೊ.ಸಂ: 9449974896, ಚುನಾವಣಾ ಶಿರಸ್ತೇದಾರ ಸತೀಶ್ ಮೊ.ಸಂ: 9845791349, ಚುನಾವಣಾ ಆಪರೇಟರ್ ಮೌಲಾಹುಸೇನ ಮೊ.ಸಂ: 9108520419, ಗಂಗಾವತಿ ತಾಲ್ಲೂಕಿನಲ್ಲಿ ಗ್ರೇಡ್-2 ತಹಶೀಲ್ದಾರ ಮಹಾಂತಗೌಡ ಮೊ.ಸಂ: 9449622639, ಚುನಾವಣಾ ಶಿರಸ್ತೇದಾರ ರವಿಕುಮಾರ ಮೊ.ಸಂ: 9964221162, ಚುನಾವಣಾ ಆಪರೇಟರ್ ಮುತ್ತುರಾಜ್ ಕುರಿ ಮೊ.ಸಂ: 8884300019, ಕುಷ್ಟಗಿ ತಾಲ್ಲೂಕಿನಲ್ಲಿ ಗ್ರೇಡ್-2 ತಹಶೀಲ್ದಾರ ರಜನಿಕಾಂತ ಮೊ.ಸಂ: 9880655756, ಚುನಾವಣಾ ಶಿರಸ್ತೇದಾರ ಮಂಜುನಾಥ ನಂದನ್ ಮೊ.ಸಂ: 9449393400, ಚುನಾವಣಾ ಆಪರೇಟರ್ ಶರಣಬಸವ ಎಸ್ ಮೊ.ಸಂ: 8296536512, ಯಲಬುರ್ಗಾ ತಾಲ್ಲೂಕಿನಲ್ಲಿ ಗ್ರೇಡ್-1 ತಹಶೀಲ್ದಾರ ಬಸವರಾಜ ತೆನ್ನಳ್ಳಿ ಮೊ.ಸಂ: 8745932368, ಚುನಾವಣಾ ಶಿರಸ್ತೇದಾರ ವಿಜಯಕುಮಾರ ಮೊ.ಸಂ: 9449689289, ಚುನಾವಣಾ ಆಪರೇಟರ್ ಕಳಕನಗೌಡ ಮೊ.ಸಂ: 9535285818, ಕನಕಗಿರಿ ತಾಲ್ಲೂಕಿನಲ್ಲಿ ಗ್ರೇಡ್-1 ತಹಶೀಲ್ದಾರ ವಿಶ್ವನಾಥ ಮುರಡಿ ಮೊ.ಸಂ: 8197787999, ಚುನಾವಣಾ ಶಿರಸ್ತೇದಾರ ಶರಣಪ್ಪ ಮೊ.ಸಂ: 9916630442, ಚುನಾವಣಾ ಆಪರೇಟರ್ ಸಿದ್ದರಾಮನಗೌಡ ಮೊ.ಸಂ: 6362501720, ಕಾರಟಗಿ ತಾಲ್ಲೂಕಿನಲ್ಲಿ ಗ್ರೇಡ್-1 ತಹಶೀಲ್ದಾರ ಕುಮಾರಸ್ವಾಮಿ ಮೊ.ಸಂ: 9449670777, ಚುನಾವಣಾ ಶಿರಸ್ತೇದಾರ ಉಮಾಮಹೇಶ ಮೊ.ಸಂ: 9743600343, ಚುನಾವಣಾ ಆಪರೇಟರ್ ಸಿದ್ದರಾಮನಗೌಡ ಮೊ.ಸಂ: 6362501720, ಕುಕನೂರು ತಾಲ್ಲೂಕಿನಲ್ಲಿ ಗ್ರೇಡ್-2 ತಹಶೀಲ್ದಾರ ಮುರಳೀಧರ ಕುಲಕರ್ಣಿ ಮೊ.ಸಂ: 8792613069, ಚುನಾವಣಾ ಶಿರಸ್ತೇದಾರ ಸುರೇಶ ಬಾಳೆಹೊಸೂರ ಮೊ.ಸಂ: 9902488347, ಚುನಾವಣಾ ಆಪರೇಟರ್ ಕಳಕನಗೌಡ ಮೊ.ಸಂ: 9535285818 ಇವರನ್ನು ನಿಯೋಜಿಸಲಾಗಿದೆ.
ಮೇಲಿನಂತೆ ನೇಮಕ ಮಾಡಲಾಗಿರುವಂತ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರ ತಕ್ಷಣದಿಂದಲೇ ಕಾರ್ಯನಿರ್ವಹಿಸಿ ಲಿಖಿತವಾಗಿ, ಮೌಖಿಕವಾಗಿ, ದೂರವಾಣಿ ಮುಖಾಂತರ ಸ್ವೀಕೃತವಾಗುವಂತಹ ಎಲ್ಲಾ ರೀತಿಯ ಸಲಹೆ ಹಾಗೂ ದೂರುಗಳಿಗೆ ದಾಖಲಾಧಾರಿತವಾದ ವಹಿಯನ್ನು ನಿರ್ವಹಿಸಿ ನಿಯಮಾನುಸಾರ ವಿಲೇಗೊಳಿಸಿ ಕಾಲೋಚಿತಗೊಳಿಸಲು ಸೂಚಿಸಲಾಗಿದ್ದು ಸಾರ್ವಜನಿಕರು ಈ ತಂಡದ ಮುಖಾಂತರ ಮತದಾರರ ನೋಂದಣಿ ಹಾಗೂ ಚುನಾವಣೆ ಕುರಿತಾದ ಮಾಹಿತಿ ಹಾಗೂ ದೂರನ್ನು ದಾಖಲಿಸಬಹುದೆಂದು ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.