Department of Persons with Disabilities: Applications invited under various schemes
ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2025-26ನೇ ಸಾಲಿಗೆ ವಿವಿಧ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಹ ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಯಿಂದ ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ. (ಯಾವುದೇ ಮಾಸಾಶನ ಪಡೆಯದೇ ಇರುವ ವಿಕಲಚೇತನರಿಗೆ ಮಾತ್ರ), ಶಿಶುಪಾಲನಾ ಭತ್ಯೆ (ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ), ಮರಣ ಪರಿಹಾರ ನಿಧಿ. (ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮಾತ್ರ), ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೆöÊಲ್‌ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿ ಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನ ಸಲಕರಣೆಗಳ ಯೋಜನೆ, ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತದೆ.
ಅರ್ಹ ವಿಕಲಚೇತನರ ಫಲಾನುಭವಿಗಳು ಆನ್‌ಲೈನ್ ಸೇವಾಸಿಂಧು ತಂತ್ರಾAಶದ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನೇರವಾಗಿ ಸಹ ವಿಕಲಚೇತನ ವ್ಯಕ್ತಿಗಳು ಸೇವಾಸಿಂಧು https://sevasindhu.karnataka.gov.in/Sevasindhu/Kannada ಪೋರ್ಟ್ಲ್‌ನಲ್ಲಿ ಸೆಪ್ಟೆಂಬರ್ 30 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಒಂದು ಝರಾಕ್ಸ್ ಪ್ರತಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ, ಕೊಠಡಿ ಸಂಖ್ಯೆ 31,32 ಜಿಯೋ ಪೆಟ್ರೋಲ್ ಬಂಕ್ ಎದುರುಗಡೆ ಹೊಸಪೇಟೆ ರಸ್ತೆ, ಕೊಪ್ಪಳ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಎಂ.ಆರ್.ಡಬ್ಲೂö್ಯ ಗಳಾದ ಜಯಶ್ರೀ, ಕೊಪ್ಪಳ-9980126391, ಶಶಿಕಲಾ, ಯಲಬುರ್ಗಾ-8147749523, ಶರಣಯ್ಯ, ಕುಕನೂರು-9886240203, ಚಂದ್ರಶೇಖರ, ಕುಷ್ಟಗಿ-9916308585, ಮಂಜುಳಾ, ಗಂಗಾವತಿ-7975398202 ಹಾಗೂ ಗ್ರಾಮ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲೂ ಹಾಗೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್.ಡಬ್ಲೂ ಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ