Little Hearts School secured first place in three of the four categories of taluka level ball badminton and advanced to the district level.

ಗಂಗಾವತಿ: ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತ ಲಿಟಲ್ ಹಾರ್ಟ್ಸ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ 14 ವರ್ಷದ ಒಳಗಿನ ಹಾಗೂ 17 ವರ್ಷದ ಒಳಗಿನ ಬಾಲಕರ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ನಮ್ಮ ಲಿಟಲ್ ಹಾರ್ಟ್ಸ್ ಸ್ಕೂಲ್ ನ 14 ವರ್ಷದ ಒಳಗಿನ ಬಾಲಕರ ಹಾಗೂ ಬಾಲಕಿಯರ ತಂಡಗಳು ಮತ್ತು 17 ವರ್ಷದ ಒಳಗಿನ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಲಗೈಯಿಟ್ಟರು. 17 ವರ್ಷದ ಬಾಲಕರ ತಂಡವೂ ಸಹ ದ್ವಿತೀಯ ಸ್ಥಾನ ಪಡೆದರು ಎಂದು ತಿಳಿಸಲು ಹೆಮ್ಮೆ ಎನಿಸುತ್ತಿದೆ.
ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಅವರಿಗೆ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಸೋಮಪ್ಪ ಹಾಗೂ ಶ್ರೀ ಛತ್ರಪ್ಪ ಅವರಿಗೆ ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರಿಯಾಕುಮಾರಿ ಹಾಗೂ ಎಲ್ಲಾ ಶಿಕ್ಷಕ/ ಕಿಯರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಈ ಸಂಧರ್ಭ ದಲ್ಲಿ ದೈಹಿಕ ಶಿಕ್ಷಕ ರುಗಳಾದ ಶ್ರೀ ವೆಂಕಪ್ಪ ತಳವಾರ, ಶ್ರೀ ವೀರಕುಮಾರ ಶ್ರೀ ನಾಗರಾಜ ಶ್ರೀ ಫಕ್ರುದ್ದಿನ್ ನದಾಫ್ ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
