Breaking News

ವೆಂಕಟಗಿರಿ ಜೆಸ್ಕಾಂ ಕಚೇರಿಗೆ ಗಡ್ಡಿ ಭಾಗದ ರೈತರು ಮುತ್ತಿಗೆಸ್ಪಂದಿಸಿದ ಎಇಇ ಸಮರ್ಪಕ ವಿದ್ಯುತ್ ಕೊಡುವ ಭರವಸೆ

Farmers from Gaddi area besiege Venkatagiri GESCOM office, AEE responds, promises to provide adequate electricity

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
06 gvt 01 (2)


ಗಂಗಾವತಿ: ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಗಡ್ಡಿ ಭಾಗದ ನೂರಾರು ರೈತರು ವೆಂಕಟಗಿರಿ ಜಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಉಡುಮಕಲ್, ಗಡ್ಡಿ, ಆಗೋಲಿ, ಹಂಪಸದುರ್ಗಾ, ವೆಂಕಟಗಿರಿ, ಬಂಡ್ರಾಳ್ ಗ್ರಾಮಗಳ ನೂರಾರು ರೈತರು ವೆಂಕಟಗಿರಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಗೇಟ್ ಬಂದ್ ಮಾಡಿ ಅಕ್ರೋಶ ವ್ಯಕ್ತಪಡಿಸಿರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಸವರಾಜ್ ಹೇರೂರು ಮಾತನಾಡಿ, ಎಪ್೧ ಲೈನ್ ರೈತರಷ್ಟೆ ಅಲ್ಲದೆ ಎಲ್ಲಾ ಭಾಗಗಳಿಗು ಸಮರ್ಪಕ ವಿದ್ಯುತ್ ಕಲ್ಪಿಸಬೇಕು, ನಿಯಮದಂತೆ ಏಳು ತಾಸು ಖಡ್ಡಾಯವಾಗಿ ಕೊಡಲೇಬೇಕು, ರಿಪೇರಿ ನೆಪದಲ್ಲಿ ಬಂದ್ ಮಾಡಿದ ಅವಧಿಯ ವಿದ್ಯುತ್‌ನ್ನು ಸಹ ನಂತರ ಪೂರ್ಣಗೊಳಿಸಬೇಕು, ರೈತರ ಬೆಳೆಗಳು ಒಣಗುತ್ತಿದ್ದು, ಜಾಗರೂಕತೆಯಿಂದ ವಿದ್ಯುತ್ ಸರಬರಾಜು ಮಾಡಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯ ಬಿಸಿಗೆ ಎಚ್ಚೆತ್ತ ಎಇಇ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರೈತರ ಮನವಿಯನ್ನು ಸ್ವೀಕರಿಸಿ ಸ್ಪದಿಸುವ ಭರವಸೆ ನೀಡಿದರು. ಮುಖಂಡರಾದ ಸಿದ್ದಲಿಂಗಯ್ಯಸ್ವಾಮಿ, ಹನುಮಂತಪ್ಪ ಬೋವಿ, ನಾಗಪ್ಪ ಉಡುಮಕಲ್, ಲಿಂಗಪ್ಪ ಉಡುಮಕಲ್, ಮಲ್ಲೇಶ್ ನಾಯಕ ಬಂಡ್ರಾಳ್ ಮತ್ತು ಪಕೀರಪ್ಪ ವೆಂಕಟಗಿರಿ ಇತರರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *