Modi government's flouting of 8-hour workday, which was unanimously agreed upon by workers worldwide in 1886, is condemnable: Bhardwaj

ಗಂಗಾವತಿ: ಭಾರತದಲ್ಲಿ ಕಾರ್ಮಿಕರನ್ನು ಸಮಯದ ಮಿತಿ ಇಲ್ಲದೇ ದುಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಯನ್ನು ಧಿಕ್ಕರಿಸಿ ಜುಲೈ-೯ರಂದು ನಡೆಯುವ ರಾಷ್ಟçವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕರೆಲ್ಲರೂ ಪಾಲ್ಗೊಂಡು ಪ್ರತಿಭಟಿಸಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
೧೮೮೬ ರಲ್ಲಿ ವಿಶ್ವದ ಕಾರ್ಮಿಕರೆಲ್ಲ ಒಂದಾಗಿ ಅನೇಕ ತ್ಯಾಗ, ಬಲಿದಾನಗಳಿಗೆ ಒಳಪಟ್ಟು ಕಾರ್ಮಿಕರ ಕೆಲಸದ ಅವಧಿಯನ್ನು ೮ ತಾಸುಗಳಿಗೆ ಮಿತಿಗೊಳಪಡಿಸಲು ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಆ ನೀತಿ ಕೆಲವು ಕಾರ್ಖಾನೆಗಳಿಗೆ ನಡೆಯುವುದಿಲ್ಲ. ಉದಾಹರಣೆಗೆ ಅಕ್ಕಿಗಿರಣಿಯಲ್ಲಿ ಕಾರ್ಮಿಕರನ್ನು ೧೨ ತಾಸುಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಈಗ ಸರ್ಕಾರಗಳು ಕಾರ್ಮಿಕರಿಗೆ ೧೨ ತಾಸುಗಳ ಕೆಲಸದ ಮಿತಿಯನ್ನು ಜಾರಿಗೆ ತಂದರೆ ಮಾಲಿಕರು ಕಾರ್ಮಿಕರನ್ನು ೨೦ ತಾಸುಗಳವರೆಗೆ ದುಡಿಸಿಕೊಳ್ಳುವ ಸಂಭವವಿದೆ. ಇದರಿಂದಾಗಿ ಕಾರ್ಮಿಕರ ಹೆಂಡತಿ, ಮಕ್ಕಳಿಗೆ ತೊಂದರೆಯುAಟಾಗಲಿದೆ. ಕಾರ್ಮಿಕರು ನಡೆಸುತ್ತಿರುವ ಈ ಹೋರಾಟ ನ್ಯಾಯಯುತ ಹೊರಾಟವಾಗಿದ್ದು, ದೇಶಕ್ಕಾಗಿ ದುಡಿಯುವ ಕಾರ್ಮಿಕರು ಒಗ್ಗಟ್ಟಾಗಿ ದೇಶ ಕಟ್ಟುತ್ತಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕೆಂದು ಭಾರಧ್ವಾಜ್ ಆಗ್ರಹಿಸಿದ್ದಾರೆ.