Free distribution of nutritious food kits to HIV patients: Rotary Governor B. Chinnappa Reddy.

ಗಂಗಾವತಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಪೂರ್ತಿ ಸೆಲೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ), ಸದ್ವಿಚಾರ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ) ಹಣವಾಳ ಹಾಗೂ ರೋಟರಿ ಕ್ಲಬ್ ಆಫ್ ರೈಸ್‌ಬೌಲ್ ಗಂಗಾವತಿ ಇವರ ಸಯುಕ್ತ ಸಮಯದಲ್ಲಿ ನಡೆದ. ಹೆಚ್.ಐ.ವಿ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಕಿಟ್ ವಿತರಣೆಯನ್ನು ರೋಟರಿ ಕ್ಲಬ್ ಗೌರ್ನರ್ ಬಿ. ಚಿನ್ನಪ್ಪ ರೆಡ್ಡಿ ವಿತರಣೆ ಮಾಡಿದರು.
ಈ ಕಾರ್ಯಕ್ರಮದ ಕುರಿತು ಮಾತನಾಡಿ ರೋಗಿಗಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ವಿತರಣೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಂತರಾಗಿ ಇರಬೇಕು. ರೋಟರಿ ಕ್ಲಬ್ ಇಂತಹ ಸಂಸ್ಥೆಗಳ ಮುಖಾಂತರ ಹಲವಾರು ಸಾಮಾಜಿಕ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಹಾಗೆಯೇ ಹಲವಾರು ಆರೋಗ್ಯ ತಪಾಸಣೆ ಶಿಬಿರಗಳನ್ನು ನಮ್ಮ ಮಹಿಳಾ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿರುತ್ತಾರೆ. ಇಂಥ ಒಳ್ಳೆಯ ಕೆಲಸಕ್ಕೆ ಸಂಸ್ಥೆಗಳು ಮುಂದಾಗಬೇಕಾಗಿದೆ ಎಂದರು.
ನAತರ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಈಶ್ವರ ಸವಡಿ ಮಾತನಾಡಿ, ಮಹಿಳಾ ರೋಟರಿ ಕ್ಲಬ್ ಹಾಗೂ ಸ್ಪೂರ್ತಿ ಸೆಲೆ ಸಂಸ್ಥೆ ವತಿಯಿಂದ ಒಳ್ಳೆ ಕಾರ್ಯವನ್ನು ಮಾಡಲಾಗುತ್ತಿದೆ. ಇಂತಹ ಕಾರ್ಯಕ್ಕೆ ನಾವು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಬಡಜನರಿಗೆ ಇಂತಹ ಆಹಾರದ ಕಿಟ್‌ಗಳನ್ನು ಕೊಡುವುದರ ಮುಖಾಂತರ ಅವರ ರೋಗಗಳನ್ನು ನಿವಾರಣೆ ಮಾಡಬಹುದು ಎಂದು ತಿಳಿಸಿದರು.
ನಂತರ ಸ್ಪೂರ್ತಿ ಸೆಲೆ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಹಣವಾಳ ಪೂಜ್ಯ ಶ್ರೀ ಶರಣಬಸವ ಮಹಾಸ್ವಾಮಿಗಳು, ದೇಶಿಕೇಂದ್ರ ಶಿವಯೋಗಿ ಮಂದಿರದ ಆಡಳಿತ ಅಧಿಕಾರಿಗಳು, ರೋಗಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆರೋಗ್ಯವಂತರಾಗಿರಬೇಕು. ಇಂಥ ರೋಗಗಳಿಗೆ ಯಾರು ಕೂಡ ಭಯಪಡಬಾರದು ಇದನ್ನ ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ರಾಜ್ಯ ತರಬೇತಿದಾರರಾದ ಟಿ. ಆಂಜನೇಯ. ಡಾ ಶಾದಿಯಾ ನೌಸಿನ್, ಮಹಿಳಾ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಚೌದರಿ, ಕಾರ್ಯದರ್ಶಿಯಾದ ಭಾರತಿ ಹಗಲೂರು. ಬಿ. ಶ್ರೀದೇವಿ, ಬಸಮ್ಮ ಹಣವಾಳ, ಆಸ್ಪತ್ರೆಯ ಸಿಬ್ಬಂದಿಗಳಾದ ರಾಜು, ವಲಿಬಾಷ, ಸಂಸ್ಥೆಯ ಪದಾಧಿಕಾರಿಗಳಾದ ಮಂಜುಳಾ ಸಂಡೂರ, ವಿರುಪಾಕ್ಷಿ, ಪ್ರಕಾಶ್, ಶರಣಪ್ಪ, ವೀರೇಶ್, ಲಕ್ಷಿö್ಮÃ ಎಮ್, ದ್ರಾಕ್ಷಾಯಿಣಿ, ಲಕ್ಷಿö್ಮÃ ಸೇರಿದಂತೆ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ಸರ್ವ ಮಹಿಳಾ ಸದಸ್ಯರು ಭಾಗವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ೩೦ ಹೆಚ್.ಐ.ವಿ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ ಹೊಸಕೇರಾ ಮಾಡಿ, ವಂದಿಸಿದರು.