Breaking News

ಬೆಲೆ ಏರಿಕೆ ದಿನಗಳಲ್ಲಿ ಕೈಹಿಡಿದ ಗ್ಯಾರಂಟಿ ಯೋಜನೆಗಳು ,ಡಾ.ಕೆ.ವೆಂಕಟೇಶ ಬಾಬು ಅಭಿಪ್ರಾಯ

Guarantee schemes are useful in times of price hike, says Dr. K. Venkatesh Babu

ಜಾಹೀರಾತು

ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ

ಗಂಗಾವತಿ : ಬೆಲೆ ಏರಿಕೆ ದಿನಗಳಲ್ಲಿ ಬಡವರ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ ಎಂದು ಕುಟುಂಬಗಳು ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ತಾಲುಕು ಅಧ್ಯಕ್ಷರಾದ ಡಾ.ಕೆ.ವೆಂಕಟೇಶ ಬಾಬು ಅವರು ಹೇಳಿದರು.

ತಾಲೂಕಿನ ಬಸವನದುರ್ಗಾ ಹತ್ತಿರದ ಡುಮ್ಕಿಕೊಳ ಕೆರೆ ಹೂಳೆತ್ತುವ ಸ್ಥಳದಲ್ಲಿ ಜಿ.ಪಂ. ಕೊಪ್ಪಳ, ತಾ.ಪಂ. ಗಂಗಾವತಿ & ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿಯಿಂದ ಗ್ಯಾರಂಟಿ ಯೋಜನೆಗಳ ನಡೆ, ಗ್ರಾಮ ಪಂಚಾಯಿತಿಗಳ ಕಡೆ ಅಭಿಯಾನದಡಿ ಶುಕ್ರವಾರ ಆಯೋಜಿಸಿದ್ದ ಚಿಕ್ಕಜಂತಗಲ್ ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ & ಅನ್ನಭಾಗ್ಯ ಯೋಜನೆಗಳಿಂದ ಬಡ ಮಾತ್ತು ಮಧ್ಯಮ ವರ್ಗದ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಸರಕಾರ ಪಂಚ ಯೋಜನೆಗಳ ಸಹಾಯಧನವನ್ನು ಯಾವುದೇ ಮಧ್ಯವರ್ತಿ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಈ ಯೋಜನೆಗಳ ಹಣವು ಬಡ ಕುಟುಂಬಗಳ ಮಕ್ಕಳ ಶಿಕ್ಷಣ, ಪುಸ್ತಲ ಖರೀದಿ, ಕುಟಂಬ ನಿರ್ವಹಣೆಗೆ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇನ್ನೂ ಶಕ್ತಿ ಯೋಜನೆಯೂ ವಿದ್ಯಾರ್ಥಿನಿಯರು ನಿತ್ಯ ಶಾಲಾ- ಕಾಲೇಜುಗಳಿಗೆ ಹೋಗಿ ಬರಲು ನೆರವಾಗಿದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು & ಕೂಲಿ ಕಾರ್ಮಿಕ ಮಹಿಳೆಯರಿಗಂತೂ ಶಕ್ತಿ ಯೋಜನೆ ಅವರ ಸಾರಿಗೆ ವೆಚ್ಚ ತಗ್ಗಿಸಿ, ಆರ್ಥಿಕ ಸಬಲತೆಗೆ ಬಲ ನೀಡಿದೆ. ನಿರುದ್ಯೋಗಿ ಪದವಿಧರರು & ಡಿಪ್ಲೊಮಾ ಪದವಿದಾರರಿಗೆ ಯುವನಿಧಿ ಯೋಜನೆ ತುಂಬಾ ನೆರವಾಗಿದೆ. ಅನ್ನಭಾಗ್ಯ ಯೋಜನೆ ಬಡವರ ಹೊಟ್ಟೆ ತುಂಬಿಸುತ್ತಿದೆ. ಗೃಹ ಜ್ಯೋತಿ ಯೋಜನೆಯಿಂದ ಎಲ್ಲರಿಗೂ ನೆರವಾಗಿದ್ದು, ಕುಟುಂಬ ನಿರ್ವಹಣೆ ವೆಚ್ಚ ಕಡಿಮೆ ಮಾಡಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ‘ ಹೊಸಳ್ಳಿ ಗ್ರಾಮದ ಫಲಾನುಭವಿ ದುರಗಮ್ಮ ಎಂಬುವವರು ನನಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲ. ನನಗೆ ಇರುವುದು ಕೆನರಾ ಬ್ಯಾಂಕ್ ಖಾತೆ’ ಮಾತ್ರ ಎಂದು ಅಳಲು ತೋಡಿಕೊಂಡರು. ಇದಕ್ಕೆ ಗ್ಯಾರಂಟಿ ಸಮಿತಿಯವರು ‘ ಸ್ಥಳದಲ್ಲೇ ಫಲಾನುಭವಿ ಆಧಾರ್ ಸಂಖ್ಯೆ , ಬ್ಯಾಂಕ್ ಖಾತೆ ವಿವರ ಪರಿಶೀಲಿಸಿದಾಗ ಫಲಾನುಭವಿಯ ಅಂಚೆ ಕಚೇರಿಯಲ್ಲಿರುವ ಮತ್ತೊಂದು ಖಾತೆಗೆ ಎಲ್ಲ ಕಂತುಗಳ ಗೃಹಲಕ್ಷ್ಮೀ ಹಣ ಜಮಾವಾಗಿರುವುದು ತಿಳಿದು ಬಂತು ! ಹಣ ಜಮಾವಾಗಿರುವ ವಿಷಯ ತಿಳಿದು ಫಲಾನುಭವಿ ದುರುಗಮ್ಮ ಖುಷಿಪಟ್ಟರು. ಕೆಲ ಫಲಾನುಭವಿಗಳು ಮಾತನಾಡಿ, ‘ ನಮ್ಮ ಖಾತೆಗೆ ಜಮಾ ಆಗುವ ಹಣ ಕೂಡಿಟ್ಟು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದೇವೆ’ ಎಂದರು. ಇನ್ನೂ ಕೆಲ ಮಹಿಳೆಯರು ಮಾತನಾಡಿ, ಗೃಹಲಕ್ಷ್ಮೀ ಹಣ ಕೂಡಿಟ್ಟು ನಾವು ಸಣ್ಣಪುಟ್ಟ ವ್ಯಾಪಾರ ಆರಂಭಿಸಿದ್ದೇವೆ’ ಎಂದು ಖುಷಿಯಿಂದ ಹೇಳಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಎಸ್. ಬಿ. ಖಾದ್ರಿ, ಜಿಲ್ಲಾ ಸಮಿತಿ ಸದಸ್ಯರಾದ ಆನಂದ ಆಸಲ್ ಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಆನೆಗೊಂದಿ ಗ್ರಾಪಂ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಚಿಕ್ಕಜಂತಗಲ್ ಗ್ರಾಪಂ ಉಪಾಧ್ಯಕ್ಷರಾದ ನಾಗಪ್ಪ ಬಲಕುಂದಿ, ಚಿಕ್ಕಜಂತಗಲ್ ಪಿಡಿಓ ಮಲ್ಲಿಕಾರ್ಜುನ ಕಡಿವಾಳ, ಆನೆಗೊಂದಿ ಗ್ರಾಪಂ ಪಿಡಿಓ ರವೀಂದ್ರ ಕುಲ್ಕರ್ಣಿ,
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಅಹ್ಮದ್ ಪಟೇಲ್, ನಾಗಮ್ಮ, ಒಂಕಾರಪ್ಪ, ರಾಜಪ್ಪ, ಮುಸ್ತಾಕ್, ಅಂಗನವಾಡಿ ಮೇಲ್ವಿಚಾರಕಿ ಈರಮ್ಮ, ನರೇಗಾ ಟಿಎಇ ಶರಣಯ್ಯ ಸ್ವಾಮಿ, ಕೆಎಸ್ ಆರ್ ಟಿಸಿ & ಜೆಸ್ಕಾಂ ಸಿಬ್ಬಂದಿಗಳು, ಗ್ರಾಪಂ ಸಿಬ್ಬಂದಿಗಳು ಇದ್ದರು.

About Mallikarjun

Check Also

ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರಲು ಪೂರ್ಣ ಯತ್ನ : ಹಿಟ್ನಾಳ

All efforts are being made to bring the district forward in sports: Hitnala ಕುಷ್ಟಗಿ (ಹನುಮಸಾಗರ): …

Leave a Reply

Your email address will not be published. Required fields are marked *