11th International Yoga Day celebrated at Gangavathi on Saturday, June 21

ಗಂಗಾವತಿ: ಗಂಗಾವತಿಯ ಸರ್ವಯೋಗ, ಧ್ಯಾನ ಮತ್ತು ಆಧ್ಯಾತ್ಮ ಬಳಗದೊಂದಿಗೆ ಮತ್ತು ಸ್ಪೂರ್ತಿ ಆರ್ಯುವೇದಿಕ್ ಮೇಡಿಕಲ್ ಕಾಲೇಜು ಇವರ ಪ್ರಾಯೊಜಕತ್ವದಲ್ಲಿ ೧೧ನೇಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್-೨೧ ಶನಿವಾರ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಸರ್ವಯೋಗ, ಧ್ಯಾನ ಮತ್ತು ಆಧ್ಯಾತ್ಮ ಬಳಗದ ಸಂಚಾಲಕರಾದ ರಘುನಾಥ ಪವಾರ ಪ್ರಕಟಣೆಯಲ್ಲಿ ತಿಳಿಸಿದರು.
ಅದರ ನಿಮಿತ್ಯವಾಗಿ ಜೂನ್-೨೦ ಶುಕ್ರವಾರ ಬೆಳಿಗ್ಗೆ ೯-೦೦ ಗಂಟೆಗೆ ಯೋಗ ಜಾಗೃತಿ ನಡಿಗೆಯನ್ನು ನಗರದ ಎ.ಪಿ.ಎಮ್.ಸಿ ಆವರಣದ ಶ್ರೀ ಚನ್ನಬಸವಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಸಿಬಿಎಸ್ ವೃತ್ತ, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರವಾಗಿ ಕೊಟ್ಟೂರು ಬಸವೆಶ್ವರ ದೇವಸ್ಥಾನ ಆವರಣದವರೆಗೆ ನಡಸಲಾಗುವುದು ಹಾಗೂ ಜೂನ್-೨೧ ಶನಿವಾರ ರಂದು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ೫-೪೫ ಘಂಟೆಗೆ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನರಡ್ಡಿ ಇವರು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದರಾದ ಎಸ್. ಶಿವರಾಮಗೌಡ್ರು, ಮಾಜಿ ವಿಧಾನಪರಿಷತ್ ಸದಸ್ಯರಾದ ಹೆಚ್.ಆರ್. ಶ್ರೀನಾಥ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದು, ವಿವಿಧ ಸಂಫಟನೆಗಳು ಮತ್ತು ಶಾಲಾ—ಕಾಲೇಜುಗಳ ವಿಧ್ಯಾರ್ಥಿಗಳು ಸೇರಿದಂತೆ ಪತಂಜಲಿ ಯೋಗ ಸಮಿತಿ ಒಳಗೊಂಡAತೆ ವಿವಿಧ ಸಮಿತಿಗಳ ಸದಸ್ಯರು ಈ ಮೇಲಿನ ಕಾರ್ಯಕ್ರಮಗಳಲ್ಲಿ ಹಾಜರಿರಲಿದ್ದಾರೆ ಎಂದು ತಿಳಿಸಿದರು.