A.S.S.K. Village Branch inaugurated in Doddenahalli village




ತುರುವೇಕೆರೆ:ತಾಲ್ಲೂಕಿನ ಕಸಬಾ ಹೋಬಳಿ ಮುನಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಗ್ರಾಮ ಶಾಖೆಯನ್ನು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟನೆ ಮಾಡಲಾಯಿತು.
ತಿಪಟೂರು ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಮತ್ತಿಘಟ್ಟ ಮಾತನಾಡಿ. ನಮ್ಮ ಜನರು ಎಚ್ಚೆತ್ತುಕೊಂಡು ದಿನನಿತ್ಯ ನಡೆಯುತ್ತಿರುವ ದಲಿತರ ಮೇಲೆ ದೌರ್ಜನ್ಯ,ದಬ್ಬಾಳಿಕೆ ಬಹಿಷ್ಕಾರ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಹಾಗೂ ನಮ್ಮ ನಮ್ಮ ಮಕ್ಕಳು
ವಿದ್ಯಾವಂತರಾಗಿ ಸರ್ಕಾರದ ಉನ್ನತ ಹುದ್ದೆಗಳನ್ನ ಪಡೆದುಕೊಳ್ಳಬೇಕು ಕುಲಕಸುಬಿಗೆ ಅಂಟಿಕೊಳ್ಳದೆ ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿದು ಸರಕಾರದ ಸಾಲ ಸೌಲಭ್ಯ ಬಳಸಿಕೊಂಡು ಹೆಚ್ಚು ದುಡಿಮೆ ಮಾಡಬೇಕು. ಮಕ್ಕಳ ಜೀವನ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ.ಸದಸ್ಯರಾದ ಸೋಮಶೇಖರ್ ಮಾತನಾಡಿ.ಸಂಘದ ನಿಯಮಗಳನ್ನು ಮೀರದೆ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಮೈ ರೂಡಿಸಿಕೊಳ್ಳಬೇಕು ಹಾಗೆಯೇ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಿ ವಿದ್ಯಾವಂತರಾಗಿ ಮಾಡಿ ಎಂದರು.
ತುರುವೇಕೆರೆ ಎ ಎಸ್ ಎಸ್ ಕೆ ತಾಲ್ಲೂಕು ಅಧ್ಯಕ್ಷ ರಂಗರಾಜು ಮಾತನಾಡಿ. ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ನ್ಯಾಯ ಸಮ್ಮತವಾಗಿ ಹೋರಾಟ ಮಾಡುತ್ತೇನೆ. ನಮ್ಮ ಕಾಲೋನಿಗಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನ ಪಡೆಯಲು ನನ್ನ ಸಮುದಾಯದ ಪರವಾಗಿ ನಿಲ್ಲುತ್ತೇನೆ.
ಮುಖ್ಯ ಅತಿಥಿಗಳಾಗಿ. ಲಾಯರ್ ರಂಗನಾಥ್. ಎಇಇ ಕಣ್ಮಣಿ ಇಂಜಿನಿಯರ್ ನೂರುಲ್ಲಾ ಹಾಜರಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾಗಿ. ತಾಲ್ಲೂಕು ಅಧ್ಯಕ್ಷರಾಗಿ ರಂಗರಾಜು. ಹೋಬಳಿ ಅಧ್ಯಕ್ಷರಾಗಿ. ರಂಗಸ್ವಾಮಿ ಡಿ. ಗ್ರಾಮ ಶಾಖೆ ಅಧ್ಯಕ್ಷ. ಕುಮಾರಸ್ವಾಮಿ ಡಿ ಆರ್. ಉಪಾಧ್ಯಕ್ಷರಾದ ಮಹೇಶ್ ಡಿ.ಆರ್. ಖಜಾಂಚಿ ಯತೀಶ್. ಗ್ರಾಮ ಶಾಖೆ ಸಂಚಾಲಕರಾದ ಕೆಂಪುರಾಜ್. ಸಂಜಯ್. ಕಾರ್ಯದರ್ಶಿಗಳಾದ ರವಿ.ಡಿ ಆರ್. ರಾಕೇಶ್ ಡಿ ಸಿ. ಮಹಿಳಾ ಅಧ್ಯಕ್ಷರಾದ. ಹೇಮಲತಾ. ಉಪಾಧ್ಯಕ್ಷರಾದ. ವರಲಕ್ಷ್ಮಿ. ಸಿದ್ದಗಂಗಮ. ರಂಗರಾಜು. ದರ್ಶನ್. ಸೋಮಶೇಖರ್. ಕುಮಾರ್. ಯಶವಂತ್ ಹರೀಶ್ .ಧನುಷ್. ರಂಗನಾಥ್ ಜಗದೀಶ್. ಸೇರಿದಂತೆ ಪ್ರಮುಖ ಮುಖಂಡರು ಪದಾಧಿಕಾರಿಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ