Stop cutting down trees in Ginigeri village. Ginigeri Civil Struggle Committee.

ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದ ಸುತ್ತಲೂ ಕೈಗಾರಿಕೆಗಳ ದೂಳು ಹೋಗೆಯಿಂದ, ಈಗಾಗಲೇ ಪರಿಸರ ಹಾಳಾಗಿ ಜನಸಾಮಾನ್ಯರ ಆರೋಗ್ಯ ಉಸಿರಾಟದ ತೊಂದರೆಗಳು, ಕ್ಯಾನ್ಸರ್ ಟಿಬಿ, ಅಸ್ತಮಾ, ಮುಂತಾದ ಅನಾರೋಗ್ಯ ತೊಂದರೆಗಳು ಜನರನ್ನು ಆತಂಕಗೊಳಿಸಿದೆ.
ಇಂಥ ಸಂದರ್ಭದಲ್ಲಿ ಗಿಣಿಗೇರಿ ಗ್ರಾಮದಲ್ಲಿ ಹೆಚ್ಚು ಮರಗಳನ್ನು ಸಸಿಗಳನ್ನು ನೆಟ್ಟು ಧೂಳು ಬರದಂತೆ ಮತ್ತು ಪರಿಸರ ರಕ್ಷಣೆ ಮಾಡಬೇಕಾಗಿತ್ತು.
ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇರುವ ಬೇವಿನ ದೊಡ್ಡ ಮೊರವನ್ನು ಕಡಿದು ನೆಲಕ್ಕುರುಳಿಸುವಂತೆ ಕೆಲಸವನ್ನು ಮಾಡುತ್ತಿರುವುದನ್ನು ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಮಂಗಳೇಶ್ ರಾಥೋಡ್ ಖಂಡಿಸಿ ಗಿಡ ಕಡಿಯುವುದನ್ನು ನಿಲ್ಲಿಸಿದ್ದಾರೆ.
ಈಗಾಗಲೇ ಹಲವಾರು ಬಾರಿ ಪರಿಸರ ಉಳಿವಿಗಾಗಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತು ಕೊಪ್ಪಳ ಜಿಲ್ಲೆ ಉತ್ತರ ಕರ್ನಾಟಕದ ಭಾಗದ ಎಲ್ಲ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ಲೆಕ್ಕಾಚಾರದಲ್ಲಿ ಹಿಂದೂ ಉಳಿದಿದೆ.
ಗ್ರಾಮ ಪಂಚಾಯತಿ ಗಿಡ ನೆಡುವುದನ್ನು ಬಿಟ್ಟು ಗಿಡ ಕಡಿಯುವಂತ ಕೆಲಸವನ್ನು ಮಾಡುತ್ತಿರುವುದು ಯಾರ ಹಿತಾಸಕ್ತಿ ಗೋಸ್ಕರ.
ಹಲವಾರು ಬಾರಿ ಗ್ರಾಮ ಪಂಚಾಯತಿಗೆ ತಾಲೂಕ ಪಂಚಾಯತಿಗೆ ಮತ್ತು ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಮುಖ್ಯ ರಸ್ತೆ ಪಕ್ಕದಲ್ಲಿ ಗಿಡ ನೀಡಬೇಕೆನ್ನುವ ವಿಚಾರದ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರು ಗಿಡ ನೆಟ್ಟಿಲ್ಲ.. ಹಾಗಾಗಿ ಮುಂದಿನ ದಿನಗಳಲ್ಲಿ ಗಿಡ ಕಡಿಯುವ ಬದಲು ಗಿಡಗಳನ್ನು ನೆಡಿಸಿ ಜನರ ಜಾನುವಾರುಗಳ ಪರಿಸರ ಗಿಣಿಗೇರಿ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿಸಲು ಕ್ರಮ ಕೈಗೊಳ್ಳಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಆಗ್ರಹಿಸುತ್ತದೆ.
ಸುದ್ದಿಗಾಗಿ ಶರಣು ಗಡ್ಡಿ ಸಂಚಾಲಕರು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ.