The work of the organization conducting simple weddings amidst price hike is commendable: Mundrigi Nagaraj

ಬಳ್ಳಾರಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆವರಣದ ಹೊಂಗಿರಣ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜನ ಸೈನ್ಯ ದಶಮಾನೋತ್ಸವದ ಲಾಂಛನ ಮತ್ತು ಉಚಿತ ಸಾಮೂಹಿಕ ವಿವಾಹಗಳ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಮಹಾನಗರ ಪಾಲಿಕೆ ಸಭಾಧ್ಯಕ್ಷರಾದ ಗಾದೆಪ್ಪ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲೇಶಪ್ಪ ಅವರು ಕಾರ್ಯಕ್ರಮದ ಲೋಗೊ ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಲಂಗಿ ನಂದೀಶ್ ಅವರು ಸಂಘಟನೆಯ ಸಮಾಜಕ್ಕೆ ಉತ್ತಮ ಕಾರ್ಯ ಮಾಡುತ್ತಿದೆ ಇಂತಹ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಮಾಡಲಿ ಎಂದು ಆಶಿಸುತ್ತಾ ಈ ಕಾರ್ಯಕ್ರಮಕ್ಕೆ ನಾವು ತನು ಮನ ಧನ ಹಾಗೂ ನಮ್ಮ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಕೇಶವಮೂರ್ತಿ. ಎ ಮಾತನಾಡಿದ ಅವರು ಕರ್ನಾಟಕ ಜನಸಂಖ್ಯೆ ಸಂಘಟನೆಯು ಕಳೆದ ಹತ್ತು ವರ್ಷಗಳಿಂದ ಬಹಳ ಹೋರಾಟ ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಒಂದು ಸಂಘಟನೆಯನ್ನು 10 ವರ್ಷಗಳ ಕಾಲ ಮುನ್ನಡೆಸುವುದು ಸುಲಭ ಅಲ್ಲ ಸಂಘಟನೆಯ ಬೆಳವಣಿಗೆಗೆ ಪದಾಧಿಕಾರಿಗಳ ಮತ್ತು ರಾಜ್ಯಧ್ಯಕ್ಷರ ಪರಿಶ್ರಮ ಅತ್ಯಧಿಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿ,
ಈ ಕಾರ್ಯಕ್ರಮ ಯಶಸ್ವಿಗೊಳ್ಳಲಿ ಎಂದು ಶುಭ ಹಾರೈಸಿದರು.
ಸಾಮೂಹಿಕ ವಿವಾಹ ಗಳ ಕಾರ್ಯಕ್ರಮವನ್ನು ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ , ಹತ್ತು ವರ್ಷಗಳ ಕಾಲ ಕನ್ನಡ,ನೆಲ,ಜಲ, ಭಾಷೆ ಉಳಿವಿಗಾಗಿ ಸಂಘಟನೆಯು ತನ್ನದೇ ಆದ ಒಂದು ಚಾಪು ಮೂಡಿಸಿದೆ. ಮನುಷ್ಯನ ಜೀವನದಲ್ಲಿ ಮದುವೆ ಎನ್ನುವುದು ಅತ್ಯಮೂಲ್ಯ ಮತ್ತು ಶ್ರೇಷ್ಠ, ಇಂತಹ ಕಾರ್ಯವನ್ನು ಸರಳ ವಿವಾಹವಾಗಿ ಮಾಡುತ್ತಿರುವ ಸಂಘಟನೆ ಕಾರ್ಯವು ಸಾರ್ವಜನಿಕವಾಗಿ ಮೆಚ್ಚುಗೆವಾಗುವಂಥದ್ದು ತಿಳಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ ಎರ್ರಿಸ್ವಾಮಿ ಅವರು ಸಂಘಟನೆಯ ರಾಜ್ಯಾಧ್ಯಕ್ಷರು ಹೋರಾಟದ ಕಿಚ್ಚು ಬಳ್ಳಾರಿ ಗಾಳಿಯಿಂದಲೇ ನನಗೆ ಬಂದಿದೆ ಈ ಮೊದಲು ನಾನು ಮೂರು ಸಂಘಟನೆಯಲ್ಲಿ ಇದ್ದು ಹೋರಾಟವನ್ನು ಮಾಡಿದ್ದೇನೆ ರಾಜ್ಯದ್ಯಕ್ಷರು ಒಂದು ಪ್ರಥಮ ಸದಸ್ಯರು ಅಷ್ಟೇ ಎಂದು ಹೇಳುವ ಮೂಲಕ ತಮ್ಮ ಸರಳತೆ ತೋರಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಘದ ಎಲ್ಲಾ ಪದಾಧಿಕಾರಿಗಳ ಸಹಕಾರ ಬಹಳ ಮುಖ್ಯ ಎನ್ನುವ ಮೂಲಕ ಈ ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.
ಈ ಸಂದರ್ಭದಲ್ಲಿ ಮುಲಂಗಿ ನಂದೀಶ್ ಮಹಾಪೌರರು ಮಹಾನಗರ ಪಾಲಿಕೆ ಬಳ್ಳಾರಿ, ಮುಂಡರಗಿ ನಾಗರಾಜ್ ಅಧ್ಯಕ್ಷರು ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಕೇಶವಮೂರ್ತಿ. ಎ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು,ಡಾಕ್ಟರ್ ರಮೇಶ್ ಕುಮಾರ್ ಎಲುಬು ಮತ್ತು ಕೀಲು ತಜ್ಞರು ಬಳ್ಳಾರಿ, ಮಲ್ಲೇಶಪ್ಪ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರು,ಗುರುರಾಜ್ ಮಹಾನಗರ ಪಾಲಿಕೆ ಸದಸ್ಯರು ಗಾದೆಪ್ಪ ಮಹಾನಗರ ಪಾಲಿಕೆ ಸಭಾಧ್ಯಕ್ಷರು,ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಇದ್ದರು.