Breaking News

ವೆಂಕಟ್ ಸೆಂಟರ್ ಆಫ್ ಎಸ್ತಟಿಕ್ ಹೆಲ್ತ್ನ ಕೇಂದ್ರ ಉದ್ಘಾಟಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Deputy Chief Minister D.K. Shivakumar inaugurated the Venkat Center of Aesthetic Health.

ಜಾಹೀರಾತು

ಬೆಂಗಳೂರು, ಮಾ, 23; ರಾಜ್ಕುಮಾರ್ ಹೊರ ವರ್ತುಲ ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ 3 ನೇ ಹಂತ ಎನ್ಸಿಇಆರ್ಟಿ ಸಮೀಪ ನೂತನವಾಗಿ ಆರಂಭವಾಗುತ್ತಿರುವ ಚರ್ಮ, ಇಎನ್ಟಿ, ಪ್ಲಾಸ್ಟಿಕ್ ಸರ್ಜರಿ ಮತ್ತು ಸೌಂದರ್ಯದ ಆರೋಗ್ಯದ ಹೆಸರಾಂತ ಕೇಂದ್ರ ವೆಂಕಟ್ ಸೆಂಟರ್ ಆಫ್ ಎಸ್ತಟಿಕ್ ಹೆಲ್ತ್ನ ಕೇಂದ್ರವನ್ನು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಉದ್ಘಾಟಿಸಿದರು.
ಸಂಸದ ಡಾ. ಸಿ ಎನ್ ಮಂಜುನಾಥ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಚಿಕಿತ್ಸೆ ಇದು ಪ್ರಮುಖ ಆರೋಗ್ಯ ತರಬೇತಿ ಕೇಂದ್ರವಾಗಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿದೆ. ಸಮಗ್ರ ಆರೋಗ್ಯ ಕೇಂದ್ರ ಎಂದರು
ಆರ್ ಜಿ ಯು ಎಚ್ ಎಸ್ ಎಸ್ ನ ಮಾಜಿ ಉಪಕುಲಪತಿಗಳಾದ ಡಾ.
ರಮೇಶ್, ಡಾ ಸಚ್ಚಿದಾನಂದ ಎಸ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ ಸುಜಾತಾ ರಾಥೋಡ್, ಚಲನಚಿತ್ರ ನಟ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಗಾಯಕಿ ಮಂಜುಳಾ ಗುರುರಾಜ್, ಖ್ಯಾತ ಅಲರ್ಜಿ ತಜ್ಞೆ ಡಾ. ಗಾಯತ್ರಿ ಪಂಡಿತ್ ಪಾಲ್ಗೊಂಡಿದ್ದರು.
ಈ ಕೇಂದ್ರವು ಅತ್ಯಾಧುನಿಕ ಲೇಸರ್ ಯಂತ್ರಗಳನ್ನು ಹೊಂದಿದ್ದು, ಕೂದಲು ಕಸಿ, ಲಿಪೋಸೆಕ್ಷನ್, ರೈನೋಪ್ಲ್ಯಾಸ್ಟಿ, ಫೇಸ್ಲಿಫ್ಟ್ಗಳು, ಗ್ರೇನ್ ಶಸ್ತ್ರಚಿಕಿತ್ಸೆ, ಗೊರಕೆ, ಅಲರ್ಜಿ ಚಿಕಿತ್ಸೆಗಳು, ಎಲ್ಲಾ ಚರ್ಮ ರೋಗಗಳು, ಮಹಿಳಾ ಕ್ಷೇಮ ಚಿಕಿತ್ಸೆಗಳು ಮುಂತಾದ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳನ್ನು ಒದಗಿಸಲಿದೆ.

About Mallikarjun

Check Also

screenshot 2025 08 11 08 43 18 22 6012fa4d4ddec268fc5c7112cbb265e7.jpg

  ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ.

We need to refute the notion that women are partly responsible for today's corruption. ಗಂಗಾವತಿ:ಇಂದಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.