R.H. Doddamani assumes office as Rural CPI:

ಗಂಗಾವತಿ,13: ಗ್ರಾಮೀಣ ಭಾಗದ ಸಿಪಿಐ ಆಗಿ ಆರ್.ಎಚ್.ದೊಡ್ಡಮನಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ನೂತನ ಸಿಪಿಐ ಅವರು ಇಲ್ಲಿನ ಗ್ರಾಮೀಣ ಭಾಗದಲ್ಲಿ ಆಕ್ರಮ ಚಟುವಟಿಕೆಗ ಳಿಗೆ ಕಡಿವಾಣ ಹಾಕಲಾಗುವುದು ಮತ್ತು ಶಾಂತಿ ಸೌಹಾರ್ದತೆಗಾಗಿ ಎಲ್ಲರ ಸಹಕಾರದ ಜೊತೆಗೆ ಇಲಾಖೆಯ ನಿಯಮಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯ ಮತ್ತು ಶೋಷಿತ ಜನರಿಗೆ ಕಾನೂನಾತ್ಮಕ ವಾಗಿ ನ್ಯಾಯ ಒದಗಿಸುವಂತಹ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ. ಮೇಲಾಧಿಕಾರಿಗಳ ಆದೇಶದಂತೆ ಅಕ್ರಮ ಚಟುವಟಿಕೆಗಳನ್ನು ತಡೆದು ಪ್ರತಿಯೊಬ್ಬರು ಶಾಂತಿ ಕಾನೂನು
ಸುವ್ಯವಸ್ಥೆ ಅಡಿಯಲ್ಲಿ ಜೀವನ ನಡೆಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.
ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ್ದು,
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸೋಮಶೇಖರ್ ಜುಟ್ಟಲ್ ಅವರು ಪ್ರೋಮೋಷನ್ ಡಿವೈಎಸ್ಪಿಯಾಗಿ ಹುಬ್ಬಳ್ಳಿಗೆ ವರ್ಗಾವಣೆ ಮಾಡಿ ಆದೇಶಿಸಿತ್ತು. ನಂತರ ಅವರ ಸ್ಥಾನಕ್ಕೆ ನೂತನ ಸಿಪಿಐ ಆಗಿ ಆರ್.ಹೆಚ್.ದೊಡ್ಡಮನಿ ಬಂದಿದ್ದಾರೆ. ಅವರು ಈ ಹಿಂದೆ ಗುಪ್ತವಾರ್ತೆ ಬೆಂಗಳೂರು ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಗಂಗಾವತಿ ಗ್ರಾಮೀಣ ಸಿಪಿಐಯಾಗಿ ನೇಮಕಗೊಂಡಿದ್ದು. ಗ್ರಾಮೀಣ ಭಾಗದಲ್ಲಿ ಅಕ್ರಮ ದಂಧಗೆ ಇವರಿಂದಲೇ ಕಡಿವಾಣ ಬಿಳಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.