Breaking News

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ರವರಿಂದ ಡಾ.ಬಿ.ವಿ ನಾರಾಯಣ ಸ್ವಾಮಿಗೆ ಅಭಿನಂದನೆ

Congratulations to Dr. BV Narayan Swamy from Higher Education Minister Dr. MC Sudhakar

ಜಾಹೀರಾತು
ಜಾಹೀರಾತು

ಚಿಂತಾಮಣಿ: ಫೆ.20: ಇಂದು ನಡೆದ ದೊಡ್ಡಬೊಮ್ಮನಹಳ್ಳಿಯ ಸರ್ಕಾರಿ ಶಾಲೆಯ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕಿನ ಶಾಸಕರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ರವರು ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಪಡೆದ ಡಾ.ಬಿ.ವಿ ನಾರಾಯಣ ಸ್ವಾಮಿರವರನ್ನು ಅಭಿನಂದಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ನಾರಾಯಣಸ್ವಾಮಿ ಬಿ.ವಿರವರು “ಅವೇರ್ನೆಸ್ ಅಂಡ್ ಯುಟಿಲೈಜೇಷನ್ ಆಫ್ ಐಸಿಟಿ ಇನಿಶಿಯೇಟಿವ್ ಆಫ್ ಮಿನಿಸ್ಟ್ರಿ ಆಫ್ ಎಜುಕೇಶನ್, ಗವರ್ನಮೆಂಟ್ ಆಫ್ ಇಂಡಿಯಾ ಬೈ ದ ಯೂನಿವರ್ಸಿಟಿ ಲೈಬ್ರರೀಸ್ ಇನ್ ಕರ್ನಾಟಕ ಸ್ಟೇಟ್, ಆನ್ ಯೂಸರ್ ಅಸೆಸ್ಮೆಂಟ್ ಸ್ಟಡಿ” ಎಂಬ ವಿಷಯದ ಬಗ್ಗೆ ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊ.ಡಾ.ಬಿ.ರಮೇಶ್ ರವರು ಮಾರ್ಗದರ್ಶನ ನೀಡಿದರು.

ಡಾ.ಬಿ.ವಿ ನಾರಾಯಣ ಸ್ವಾಮಿರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ದೊಡ್ಡ ಬೊಮ್ಮನಹಳ್ಳಿ ಗ್ರಾಮದ ರೈತಾಪಿ ಕುಟುಂಬಕ್ಕೆ ಸೇರಿದ ವೆಂಕಟೇಶಪ್ಪ ನವರ ಪುತ್ರರಾಗಿದ್ದು, ಇದೇ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದ ಮೇಲೆ ಇವರು ಚಿಂತಾಮಣಿ ತಾಲ್ಲೂಕಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯನ್ನು
ಪಡೆದಿರುತ್ತಾರೆ ಹಾಗೂ 2010ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಬಿ.ವಿ ನಾರಾಯಣ ಸ್ವಾಮಿರವರು ಎರಡು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳನ್ನು ಯುಜಿಸಿ ಕೇರ್ ಲಿಸ್ಟ್ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೇ ಇವರು ಕರ್ನಾಟಕ ಸೆಟ್ ಪರೀಕ್ಷೆ ಹಾಗೂ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಸಹ ಉತ್ತೀರ್ಣರಾಗಿದ್ದಾರೆ.

ನಂತರ ಮಾಧ್ಯಮರೊಂದಿಗೆ ಮಾತನಾಡಿದ ಕೇವಲ ನಾರಾಯಣ ಸ್ವಾಮಿ ಆಗಿದ್ದ ನನ್ನನ್ನು ಇಂದು ಎಲ್ಲರೂ ಡಾ.ನಾರಾಯಣ ಸ್ವಾಮಿ ಎಂದು ಗೌರವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣರಾದ ನನ್ನ ತಂದೆ – ತಾಯಿಗಳಿಗೆ, ನನ್ನ ಎಲ್ಲಾ ಗುರುಗಳಿಗೆ, ನಮ್ಮೂರಿನ ಸ್ನೇಹಿತರಿಗೆ, ನಮ್ಮೂರಿನ ಎಲ್ಲಾ ಮುಖಂಡರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಈ ಊರಿನಲ್ಲಿ ಹುಟ್ಟಿರುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಮ್ಮ ತಾಲ್ಲೂಕಿನ ಜನಪ್ರಿಯ ಶಾಸಕರು ಹಾಗೂ ಸಚಿವರಾದ ಡಾ.ಎಂ.ಸಿ ಸುಧಾಕರ್ ರವರು ಪ್ರಸ್ತುತ ಉನ್ನತ ಶಿಕ್ಷಣ ಸಚಿವರಾಗಿದದ್ದಾರೆ. ಇಂತಹವರ ಮುಂದೆ ಉನ್ನತ ಶಿಕ್ಷಣ ಪಡೆದಿರುವುದಕ್ಕೆ ನನಗೆ ನೀವು ಗೌರವದಿಂದ ಅಭಿನಂದನೆ ಸಲ್ಲಿಸಿರುವುದು ಸದಾ ನನಗೆ ನೆನಪಿನಲ್ಲಿ ಉಳಿಯುತ್ತದೆ. ಹಾಗೆಯೇ ನನ್ನನ್ನು ಗುರುತಿಸಿ ನನಗೆ ನೀವು ಗೌರವಿಸಿದ್ದಕ್ಕೆ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ. ನನ್ನನ್ನು ಗೌರವಿಸಿದ ಮಾನ್ಯ ಶಾಸಕರಿಗೂ ಗೌರವದಿಂದ ಧನ್ಯವಾದ ತಿಳಿಸುತ್ತೇನೆ ಎಂದರು.

ಪ್ರಪಂಚದಲ್ಲೇ ಅತಿ ಹೆಚ್ಚು ಶಿಕ್ಷಣ ಪಡೆದು, ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ಬರೆದುಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ರವರ “ಶಿಕ್ಷಣ ಎಂಬುದು ಪ್ರಬಲವಾದ ಅಸ್ತ್ರ.. ಶಿಕ್ಷಣ ಕಲಿತವನು ಜಗತ್ತನ್ನೇ ಬದಲಾಯಿಸುತ್ತಾನೆ”. ಈ ವಾಕ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಎಲ್ಲರಿಗೂ ಶಿಕ್ಷಣ ದೊರಕಬೇಕು ಹಾಗೂ ಎಲ್ಲರೂ ಶಿಕ್ಷಿತರಾಗಬೇಕು ಎಂದರು.

ಫೋಟೋ ಸುದ್ದಿ: ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ರವರು ಇದೇ ಗ್ರಾಮ ಸಂಶೋಧಕ ಇತ್ತೀಚಿಗೆ ಪಿಎಚ್.ಡಿ ಪದವಿ ಪಡೆದ ಡಾ.ಬಿ.ವಿ ನಾರಾಯಣ ಸ್ವಾಮಿರವರನ್ನು ಅಭಿನಂದಿಸಿದರು.

About Mallikarjun

Check Also

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ವತಿಯಿಂದ ರೈತರಿಗೆ ತರಬೇತಿ ಕಾರ್ಯಕ್ರಮ.

Training program for farmers by JSB Foundation, Kollegala. ವರದಿ : ಬಂಗಾರಪ್ಪ .ಸಿ.ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಹೋಬಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.