Breaking News

ಸಾರ್ವಜನಿಕರ ಮನವಿ, ಕೋತಿಗಳ ಹಾವಳಿಗೆ ಸ್ಪಂದಿಸಿದ ಪಟ್ಟಣ ಪಂಚಾಯತಿಅಧಿಕಾರಿಗಳು

The town panchayat officials responded to the public’s appeal and the menace of monkeys

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

*ಹುಚ್ಚು ಹಿಡಿದ ಕೋತಿಯನ್ನು ಸೆರೆಹಿಡಿದ : ಬೈರ ದೇವರಗುಡ್ಡದ ನಾಗೇಂದ್ರಪ್ಪ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತ

ಕೊಟ್ಟೂರಿನಲ್ಲಿ ಕೋತಿ ಗಳಿಂದ ಬೆಚ್ಚಿದ ಜನತೆಗೆ, ಸ್ಥಳೀಯ ಪಟ್ಟಣ ಪಂಚಾಯತಿ ವತಿಯಿಂದ ಕೋತಿಗಳನ್ನು ಸೆರೆ ಹಿಡಿದು ಅರಣ್ಯ ಅರಣ್ಯ ಇಲಾಖೆ ಸಿಬ್ಬಂದಿಯವರಿಗೆ ಒಪ್ಪಿಸಲಾಯಿತು.

ಕೊಟ್ಟೂರಿನ ಬಸ್ ನಿಲ್ದಾಣ, ಕರಿಬಸವೇಶ್ವರ ಶಾಲೆ, ಮುಖ್ಯ ರಸ್ತೆ ಹೀಗೆ ನಾನಾ ಸ್ಥಳಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅದರಲ್ಲಿಯೂ ಹುಚ್ಚು ಹಿಡಿದ ಕೋತಿಯೊಂದು ಅನೇಕ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ವೃದ್ಧರಿಗೆ ಕಚ್ಚಿರುವುದು, ಹಿಂಬಾಲಿಸುವುದು ಜಾಸ್ತಿಯಾಗಿ ದೂರನ್ನು ನೀಡಿದ ತಕ್ಷಣ ಎಚ್ಚತ್ತುಕೊಂಡ ಪಟ್ಟಣ ಪಂಚಾಯತಿ ತಕ್ಷಣ ಕ್ರಮ ಕೈಗೊಂಡಿತು.
ಬೈರ ದೇವರಗುಡ್ಡ ಗ್ರಾಮದ ವಯೋವೃದ್ಧ ಹಾಗೂ ಅನುಭವಿಗಳಾದ ನಾಗೇಂದ್ರಪ್ಪ ಹಾಗೂ ಅರಣ್ಯ ಸಿಬ್ಬಂದಿಯಾದ ಸುರೇಶ್, ಮಂಜುನಾಥ್ ಮತ್ತು ಸಂಸ್ಥೆಯ ಸಿಬ್ಬಂದಿಗಳ ನೆರವಿನೊಂದಿಗೆ 20 ಕ್ಕೂ ಹೆಚ್ಚು ಕೋತಿಗಳನ್ನು ಸೆರೆಹಿಡಿಯಲಾಯಿತು.
ನಂತರ ಮಾತನಾಡಿದ ಮುಖ್ಯಧಿಕಾರಿ ನಸ್ರುಲ್ಲಾ ರವರು ಕೊಟ್ಟೂರಿನಲ್ಲಿ ಕೋತಿಗಳ ಚೇಷ್ಟೆಗಳಿಂದ ಸಾರ್ವಜನಿಕರು ಓಡಾಡುವುದು ದುಸ್ತರವಾಗಿತ್ತು ಹೀಗಾಗಿ ಕೋತಿಗಳನ್ನು ಸೆರೆಹಿಡಿದು ಕಮಲಾಪುರ ಅರಣ್ಯದಲ್ಲಿ ಬಿಡಲಾಗುವುದು ಎಂದು ತಿಳಿಸಿದರು.
ಕೊನೆಯಲ್ಲಿ ವೃದ್ಧ ನಾಗೇಂದ್ರಪ್ಪ, ಅರಣ್ಯ ಇಲಾಖೆಯ ಸುರೇಶ್ ಇವರ ಧೈರ್ಯಕ್ಕೆ ಮೆಚ್ಚಿ ಪ್ರಮುಖ ಮುಖಂಡರಾದ ಬದ್ದಿ ಮರಿಸ್ವಾಮಿ ಮತ್ತು
ಪಟ್ಟಣ ಪಂಚಾಯತಿ ವತಿಯಿಂದ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳು ಸೇರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *