Farmers unions protest to solve the problems of farmers in time.
ವರದಿ: ಬಂಗಾರಪ್ಪ .ಸಿ .
ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿರುವ ರೈತರುಗಳಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಎಲ್ಲಾವನ್ನು ಬಗೆಹರಿಸಬೇಕೆಂದು ಪಟ್ಟಣದ ಚೆಸ್ಕಾಂ ಕಚೇರಿಯ ಮುಂದೆ
ಏಕಿ ಕಿರಣ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ರೈತ ಸಂಘಟನೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಅನ್ನಪೂರ್ಣೇಶ್ವರಿ ಹೋಟೆಲ್ ನಿಂದ ದಿವಂಗತ ನಾಗಪ್ಪ ವೃತ್ತದ ದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಅಂಬೇಡ್ಕರ್ ಸರ್ಕಲ್ ಮುಖಾಂತರ ರೈತ ಸಂಘದವರು ಪಟ್ಟಣದಲ್ಲಿರುವ ಚೆಸ್ಕಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ರೈತರು ಮಾತನಾಡಿ ರಾತ್ರಿ ಸಮಯದಲ್ಲಿ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಸರಿಯಾದ ಸಮಯಕ್ಕೆ ತಿಳಿಸಿ ಅಳವಡಿಸಿ ಕೊಡುತ್ತಿಲ್ಲ ರೈತರು ಫೋನ್ ಕರೆ ಮಾಡಿದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲದೆ ಬಿಎಂ ಹಳ್ಳಿ ಎಲ್ಲ ಮಾಳ ಒಡೆಯರ್ ಪಾಳ್ಯ ಪಿ ಜಿ ಪಾಳ್ಯ ಹಾಗೂ ಇನ್ನಿತರ ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಕಾಡು ಪ್ರಾಣಿಗಳು ಮನೆಯಲ್ಲಿದ್ದ ಹಸು ಮೇಕೆ ತಿಂದು ಹೋಗುತ್ತಿದೆ ನಾವು ಬೆಳದಂತ ಬೆಳೆಗಳಿಗೆ ಸರಿಯಾಗಿ ವಿದ್ಯುತ್ ಇಲ್ಲದ ಕಾರಣ ಬೆಳೆಗಳು ಒಣಗುತ್ತಿದೆ ಕಾಡಿನಿಂದ ಕಾಡು ಪ್ರಾಣಿಗಳು ಬೆಳದಂತ ಬೆಳೆಗಳನ್ನು ನಾಶ ಮಾಡುತ್ತಿದೆ ಅದಕ್ಕೆ ಕಾಡು ಪ್ರಾಣಿಗಳಿಗೆ ಕಡಿವಾಣ ಹಾಕಬೇಕು.
ಗುಂಡಲ್ ಜಲಾಶಯ ಅಕ್ಕಪಕ್ಕದಲ್ಲಿರುವ ನಾಲೆಗಳನ್ನು ಸ್ವಚ್ಛತೆ ಮಾಡಿ ನಮಗೆ ಸುಗಮವಾಗಿ ನೀರು ಹರಿಸಬೇಕು ಗುಂಡಾಲ್ ಜಲಾಶಯದಲ್ಲಿ ನೀರು ಗಂಟೆಯಾಗಿ ವರಗುತ್ತಿಗೆದಾರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನ ಕೆಲಸದಿಂದ ವಜಗೊಳಿಸಬೇಕು. ಹಾಗೂ ಇನ್ನೂ 10 ಹಲವಾರು ಬೇಡಿಕೆಗಳನ್ನ ರೈತರು ಪ್ರತಿಭಟಿಸಿದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ತಬಸಂ ರವರು ರೈತರ ಮನ ವಲಿಸಿ ಮಾತನಾಡಿ ಇನ್ನ ಎರಡು ದಿನ ಒಳಗೆ ತಾತ್ಕಾಲಿಕವಾಗಿ ವಿದ್ಯುತ್ ಸಮಸ್ಯೆಯನ್ನ ಬಗೆಹರಿಸಲಾಗುವುದು ಮುಂದಿನ 15 ದಿನದೊಳಗೆ ವಿದ್ಯುತ್ ಲಿಂಕ್ ಲೈನ್ ಕಾಮಗಾರಿ ನಡೆಯುತ್ತಿದ್ದು ನಿಮ್ಮ ಎಲ್ಲ ವಿದ್ಯುತ್ ಸಮಸ್ಯೆಗಳನ್ನ ಬಗೆರಿಸಲಾಗುವುದು ಆದ್ರಿಂದ ರೈತರು ನಮ್ಮ ಇಲಾಖೆ ಜೊತೆ ಸಹಕಾರ ನೀಡಬೇಕು ಎಂದರು.
ಸಹಾಯಕ ಇಂಜಿನಿಯರ್ ನವೀನ್ ರವರು ಮಾತನಾಡಿ. ನಾಲೆಗಳಲ್ಲಿ ಬೆಳೆದಿರುವ ಕಸವನ್ನ ಹಾಗೂ ಹೊರಗುತ್ತಿಗೆದಾರನಾಗಿ ನೀರು ಗಂಟೆಯಾಗಿ ತೆಗೆದುಕೊಂಡಿರುವ ಸುರೇಶ್ ರವರನ್ನ. ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಂಧರ್ಭದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು. ನಂತರ ಪ್ರತಿಭಟನೆ ಕೈಬಿಟ್ಟರು.
ಇದೇ ಸಂದರ್ಭದಲ್ಲಿ ಎ ಡಬಲ್ ಇ ಶಂಕರ್. ತಾಂತ್ರಿಕ ಇಂಜಿನಿಯರ್ ರಂಗಸ್ವಾಮಿ. ಏಕೀಕರಣ ಆದಿಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲೆ ಗೌಡಳ್ಳಿ ಸೋಮಣ್ಣ. ಹನೂರು ತಾಲೂಕು ಅಧ್ಯಕ್ಷರಾದ ಚಿಕ್ಕ ರಾಚು. ಕಾರ್ಯದರ್ಶಿ ಪವನ್. ಹಾಗೂ ರೈತ ಮುಖಂಡರುಗಳಾದ ಮಹದೇವಸ್ವಾಮಿ ಮಂಟೇಸ್ವಾಮಿ. ಗೋವಿಂದರಾಜು.ಸಿದ್ದ. ಹನೂರು ಪೊಲೀಸ್ ರಿಂದ ಪೋಲಿಸ್ ಬಂದ ವಸ್ತು ಏರ್ಪಡಿಸಲಾಗಿತ್ತು