Objection by Swamiji of Bhovi Gurupeeth against inner reservation
ಬೆಂಗಳೂರು: ಒಳಮೀಸಲಾತಿ ಕೂಗು ಪರಿಶಿಷ್ಟ ಜಾತಿಗಳಲ್ಲಿಯೇ ಇರುವ ಕೆಲ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರವು ತನ್ನ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ ಸಸಂಸ 5 ಸಿ,ಎಸ್ ಸಿ 2022 : ದಿನಾಂಕ 13.12.202202 ಸಚಿವರಾದ ಶ್ರೀ.ಜೆ.ಸಿ.ಮಾಧುಸ್ವಾಮಿ ರವರ ಅಧ್ಯಕ್ಷತೆಯಲ್ಲಿ ವಿವಿಧ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳಮೀಸಲಾತಿಗೆ ಸಚಿವ ಸಂಪುಟದ ಉಪಸಮಿತಿ ರಚಿಸಿದ್ದು, 2011ರ ಜನಗಣತಿಯನ್ನು ಆಧರಿಸಿ ಸಂಪುಟ ಉಪಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. ಆದರೆ ಈ ವರದಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಂದ ಇತರೆ ಧರ್ಮಕ್ಕೆ ಮತಾಂತರಗೊಂಡ ದತ್ತಾಂಶಗಳನ್ನು ಕೃಡಿಕರಿಸದೇ ಇದ್ದು ಮತ್ತು ಅವೈಜ್ಞಾನಿಕವಾಗಿರುವ ಕಾರಣ ಇದನ್ನು ತಿರಸ್ಕರಿಸುವುದು.
ಸದರಿ ವರದಿಯು ಆವೈಜ್ಞಾನಿಕವಾಗಿದ್ದು, ಅಂತರಿಕ ಮೀಸಲಾತಿಗೆ ಸಂಬಂಧಿಸಿದಂತೆ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವರ್ಗಿಕರಿಸಿ ಸರ್ಕಾರದ ಆದೇಶ ಸಂಖ್ಯೆ: ಎಸ್.ಡಬ್ಲ್ಯು.ಡಿ 02 ಎಸ್ಎಡಿ 2014 (ಭಾಗ) ಬೆಂಗಳೂರು ದಿನಾಂಕ: 27.03.2023ರಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿ ಸಚಿವ ಸಂಪುಟ ವರದಿ ಸಲ್ಲಿಸಿರುತ್ತದೆ. ಸದರಿ ವರದಿಯು ಅವೈಜ್ಞಾನಿಕವಾಗಿದ್ದು, ಯಾವುದೇ ಸರ್ಕಾರಿಯ ಇಲಾಖೆಯ ಕಡೆಯಿಂದ ಜಾತಿ ಸಮುದಾಯದ ದತ್ತಾಂಶ ಪಡಿಯದೇ ಆತುರವಾಗಿ ವರದಿಯನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಅದನ್ನು ರದ್ದುಪಡಿಸುವಂತೆ ವಿನಂತಿ ಇರುತ್ತದೆ.
ಅದೇ ರೀತಿ ಜಾತಿ/ಸಮುದಾಯಗಳಲ್ಲಿ ಸರಿಯಾಗಿ ವೈಜ್ಞಾನಿಕವಾಗಿ ವರ್ಗಿಕರಣ ಮಾಡದೇ ಅವೈಜ್ಞಾನಿಕ ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯು 2011ರ ಜಾತಿಜನಗಣತಿಯ ಆಧಾರದ ಮೇಲೆ ಮಾಡಿರುವ ಕಾರಣ ಅದನ್ನು ತಿರಸ್ಕರಿಸುವಂತೆ ವಿನಂತಿ ಇರುತ್ತದೆ.
ಸದರಿ ಆಯೋಗಕ್ಕೆ 2011ರ ಜನಗಣತಿಯ ಪ್ರಕಾರ ಅದರಲ್ಲಿದ್ದ ಜಾತಿಯ ಸಮುದಾಯದ ಒಳಮೀಸಲಾತಿ ಮಾಡಲು ಸರ್ಕಾರ ದತ್ತಾಂಶಗಳನ್ನು ಪಡೆದುಕೋದೆವು ಆಯೋ ಆದೇಶ ಮಾಡಿರುತ್ತದೆ, ಸದರಿ ಜನಗಣತಿ ಸುಮಾರು 14-15 ವರ್ಷಗಳ ಹಿಂದೆ ಮಾಡಿದ್ದು ಈಷ್ಟ ಸಾಕ ಬದಲಾವಣೆ ಆಗಿರುತ್ತದೆ. ಸದರಿ ಬದಲಾವಣೆಗೆ ಅನುಗುಣವಾಗಿ ಅವರು / ಮಾತು ಪರಾ ಮನರಿನ ಜನಗಣತಿ/ದತ್ತಾಂಶದ ಪ್ರಕಾರ ಮವಾರ ಕ ಮಾಡುವಂತೆ
ಈಗ ಸದ್ಯಕ್ಕೆ ಇದ್ದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ (ಜಾತಿಯ ಜನ ಗಣತಿಯ) ವರದಿ ಪ್ರಕಾರ ಮಾಡಿದರೆ ಸುಮಾರು 75% ರಿಂದ 80% ವರದಿಯು ವೈಜ್ಞಾನಿಕವಾಗಿರುತ್ತದೆ. ಆದರೆ ಸದರಿ ವರದಿ (ಕಾಂತರಾಜು ಆಯೋಗದ ವರದಿ)ಯನ್ನು ಸರ್ಕಾರ ಇಲ್ಲಿಯವರೆಗೂ ಒಪ್ಪಿಕೊಂಡಿರುವುದಿಲ್ಲ. ಸದರಿ (ಕಾಂತರಾಜು ಆಯೋಗದ ವರದಿಯಲ್ಲಿದ್ದ ಜಾತಿ ಸಮುದಾಯದ ದತ್ತಾಂಶವನ್ನು ಪಡೆದು ಒಳಮೀಸಲಾತಿ ಮಾಡಿದರೆ 75% ರಿಂದ 80% ವೈಜ್ಞಾನಿಕವಾಗಿ ಪರಿಗಣಿಸಿದಂತೆ ಆಗುತ್ತದೆ.
ಹಿಂದು ಸಮಾಜದಲ್ಲಿ ಪರಿಶಿಷ್ಟ ಜಾತಿಯಿಂದ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯಕ್ಕೆ ಮತಾಂತರ ಹೊಂದಿದ್ದರೆ. ಅಂತಹ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯಗಳನ್ನು ಒದಗಿಸಿಕೊಡಬಾರದು ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದರೆ ಮೀಸಲಾತಿ ಕೊಡಲು ಯಾವುದೇ ತಕರಾರು ಇರುವುದಿಲ್ಲ.
ಹೊಸ ಜಾತಿ ಅಥವಾ ಸಮುದಾಯದ ಜನಗಣತಿ ಆಧಾರದ ಮೇರೆಗೆ ಭೋವಿ (ವಡ್ಡರ) ಇವರಿಗೆ ಪ್ರತ್ಯೇಕ ಮೀಸಲಾತಿ ಕೊಡಬೇಕು ಬೇರೆ ಜಾತಿ ಅಥವಾ ಸಮುದಾಯವನ್ನು ಭೋವಿ (ವಡ್ಡರ)ಗೆ ಸೇರಿಸಿ ಮೀಸಲಾತಿ ಕೊಡಬಾರದು. ಭೋವಿ(ವಡ್ಡರ) ಸಮುದಾಯಕ್ಕೆ ಪ್ರತ್ಯೇಕವಾಗಿ ಸೌಲಭ್ಯವನ್ನು ಕಲ್ಪಿಸಬೇಕು.
ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳಾಗಿದ್ದು ಆದರೆ ಇಲ್ಲಿಯವರೆಗೂ ಸರ್ಕಾರದಿಂದ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿರುವ ಕುರಿತು ಆದೇಶ ಮಾಡಿರುತ್ತಾರೆ ಅದರಲ್ಲಿ ಎಷ್ಟು ಹುದ್ದೆಗಳು ಪ.ಜಾತಿ ಮತ್ತು ಸಮುದಾಯದ ಅಭ್ಯರ್ಥಿಗಳನ್ನು ನೇಮಕ ಮಾಡಿರುತ್ತಾರೆ. ಎಷ್ಟು ಹುದ್ದೆಗಳು ನೇಮಕ ಮಾಡದೇ ಖಾಲಿ ಇರುತ್ತದೆ ಆ ಖಾಲಿಯಿದ್ದ ಹುದ್ದೆಗಳಿಗೆ ಯಾವ ಕಾರಣದಿಂದ ಆ ಹುದ್ದೆಗಳನ್ನು ಭರ್ತಿ ಮಾಡದೇ ಬಿಟ್ಟಿರುತ್ತಾರೆ ಅವುಗಳ ಬಗ್ಗೆ ಸವಿಸ್ತರವಾದ ವರದಿಯನ್ನು ಸಲ್ಲಿಸಬೇಕೆಂದು ವಿನಂತಿ ಇರುತ್ತದೆ.
2011ರ ಜನಗಣತಿಯಲ್ಲಿದ್ದ ಜಾತಿ ಸಮುದಾಯಗಳ 14-15 ಹಿಂದಿನ ದಾಗಿರುತ್ತದೆ. ಅಲ್ಲದೇ ಸದಾಶಿವ ಆಯೋಗವು ಸಹ ಆಗಿದ ಸಮುದಾಯಗಳ ದತ್ತಾಂಶ ಮತ್ತು ಮಾಧುಸ್ವಾಮಿರವರ ವರದಿಯು ಸಹ ಅದೇ ದತ್ತಾಂಶವನ್ನು ಪರಿಗಣಿಸಿ ವರದಿ ನೀಡಿರುತ್ತದೆ.
ಆದ್ದರಿಂದ ಈ ಆಯೋಗವು ಪರಿಶಿಷ್ಟ ಜಾತಿ, ಒಳಮೀಸಲಾತಿ ಕುರಿತು ಸರ್ಕಾರ ವರದಿ ಸಲ್ಲಿಸುವ ಸಮಯದಲ್ಲಿ ಕೇಂದ್ರ ಸರ್ಕಾರವು ಹೊಸದಾಗಿ 2025ರ ಜನಗಣತಿ ಮಾಡುತ್ತಿದ್ದು ಆ ಜನಗಣತಿಯ ದತ್ತಾಂಶಗಳನ್ನು ಪರಿಗಣಿಸಿ ಎಲ್ಲಾ ಸಮುದಾಯಗಳಿಗೆ ನ್ಯಾಯಯುತವಾಗಿ ಮೀಸಲಾತಿ ಕಲ್ಪಸುವಂತೆ ಒತ್ತಾಯಿಸಿದರು.