554th Jayanti Celebration of Sri Krishnadevaraya in Anegundi
![](https://i0.wp.com/kalyanasiri.in/wp-content/uploads/2025/01/WhatsApp-Image-2025-01-17-at-15.19.29_be0da396.jpg?fit=300%2C135&ssl=1)
ಗಂಗಾವತಿ: ಇಂದು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ೫೫೪ನೇ ಜಯಂತಿಯ ಅಂಗವಾಗಿ ಆನೆಗುಂದಿಯಲ್ಲಿ ರಾಜಾ ಶ್ರೀ ಕೃಷ್ಣದೇವರಾಯರ ಪುತ್ಥಳಿಗೆ ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅಮ್ಮನವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಜವಂಶಸ್ಥರಾದ ಶ್ರೀಮತಿ ಲಲಿತಾರಾಣಿ ಅಮ್ಮನವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ್, ಚಿತ್ರನಟ ವಿಷ್ಣುತೀರ್ಥ ಜೋಶಿ, ಮಾಜಿ ಗ್ರಾ.ಪಂ ಅಧ್ಯಕ್ಷ ತಿರುಕಪ್ಪ, ಮುಖಂಡರಾದ ಕುಪ್ಪರಾಜು, ರಾಘವೇದ್ರ ರಾಜು, ಸುದರ್ಶನ್ ವರ್ಮಾ, ರಾಘವೇಂದ್ರ, ನಾಗಪ್ಪ, ಬಿಎಂ ವೆಂಕಟೇಶ, ಗುರು ಯಾದವ್, ಟಿ. ಚಂದ್ರು, ರಮೇಶ್, ಬಾಲಯ್ಯ, ಊರಿನ ಗುರು ಹಿರಿಯರು ಸೇರಿದಂತೆ ಅಮ್ಮನವರ ಅಭಿಮಾನಿಗಳು ಉಪಸ್ಥಿತರಿದ್ದರು.