MPs’ appeal to Koppal MLA for state grants.

ಗಂಗಾವತಿ: ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ಣಾಳ ಅವರನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಭೇಟಿಯಾಗಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಕೊಪ್ಪಳ ಕ್ಷೇತ್ರದ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ,ದರೋಜಿ-ಗಂಗಾವತಿ ಹಾಗೂ ಗಂಗಾವತಿ-ಬಾಗಲಕೋಟ್ ನೂತನ ಬ್ರಾಡಗೇಜ್ ರೇಲ್ವೆ ಲೈನ್ ಕಾಮಗಾರಿ ಆರಂಭಿಸಲು ರಾಜ್ಯದ ಅನುದಾನವನ್ನು ಬಿಡುಗಡೆ ಮಾಡಿಸಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಕೋರಿದರು.ಇದಕ್ಕೆ ಶಾಸಕರು ತಮ್ಮ ಸಹಮತ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಗಂಗಾವತಿ ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ,ಕೆ.ವಿಶ್ವನಾಥ,ಸಂಸದ ರಾಜಶೇಖರ ಹಿಟ್ನಾಳ, ಉಗಮ,ರಾಜ್,ಮಹಾವೀರ ಜೈನ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಶ್ರೇಷ್ಟಿ ,ಕಂಪ್ಲಿ ರೇಲ್ವೇ ಸಮಿತಿಯ ಕಾರ್ಯದರ್ಶಿ ಕಾಳಿಂಗ ವರ್ಧನ ಹಾದಿಮನಿ,ಅಧ್ಯಕ್ಷ ಹೇಮಯ್ಯ ಸ್ವಾಮಿ ಮತ್ತಿತರರನ್ನು ಚಿತ್ರದಲ್ಲಿ ಕಾಣಬಹುದು